ಪುತ್ತೂರು: ಕರಾವಳಿಯ ಅವಳಿ ವೀರರಾದ ಕೋಟಿ ಚೆನ್ನಯರು ಹುಟ್ಟಿ ಬೆಳೆದ ಬಡಗನ್ನೂರು ಗ್ರಾಮದ ಗೆಜ್ಜೆಗಿರಿ ಕ್ಷೇತ್ರದಲ್ಲಿ ಭಾನುವಾರ ಯಾತ್ರಿ ನಿವಾಸಕ್ಕೆ ಶಿಲಾನ್ಯಾಸ ನೆರವೇರಿತು.
ಸೋಲೂರು ಮಠದ ಆರ್ಯ ಈಡಿಗ ಮಹಾಸಂಸ್ಥಾನದ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಉಪಸ್ಥಿತಿಯಲ್ಲಿ ಗುಜರಾತಿನ ಉದ್ಯಮಿ ದಯಾನಂದ್ ಬೊಂಟ್ರ ಅವರು ಶಿಲಾನ್ಯಾಸ ನೆರವೇರಿಸಿದರು.
ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಗರಡಿ ಬದಿಯಲ್ಲಿ ರಸ್ತೆಗೆ ತಾಗಿಕೊಂಡಂತೆ ಇರುವ ಆಯಕಟ್ಟಿನ ಪ್ರದೇಶದಲ್ಲಿ ಯಾತ್ರಿ ನಿವಾಸ ತಲೆ ಎತ್ತಲಿದೆ.ಕ್ಷೇತ್ರದ ಆಡಳಿತ ಸಮಿತಿ ಮತ್ತು ದೇಯಿ ಬೈದ್ಯೇತಿ ಮೂಲಸ್ಥಾನ ಟ್ರಸ್ಟ್ ನೇತೃತ್ವದಲ್ಲಿ ಭಕ್ತರ ಅನುಕೂಲಕ್ಕಾಗಿ ಯಾತ್ರಿನಿವಾಸ ಹಾಗೂ ಅನ್ನಛತ್ರ ನಿರ್ಮಾಣದ ಯೋಜನೆ ರೂಪಿಸಲಾಗಿದೆ.
ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್,ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಮಾಜಿ ಸಚಿವ ರಮಾನಾಥ್ ರೈ, ಪ್ರಮುಖರಾದ ಪದ್ಮರಾಜ್ ಆರ್. ಪೂಜಾರಿ, ರಕ್ಷಿತ್ ಶಿವರಾಂ, ಪೀತಾಂಬರ ಹೆರಾಜೆ, ಜಯಂತ ನಡುಬೈಲ್, ಡಾ. ರಾಜಶೇಖರ್ ಕೋಟ್ಯಾನ್, ರವಿ ಪೂಜಾರಿ ಚಿಲಿಂಬಿ, ಸಂಜೀವ ಪೂಜಾರಿ ಬಿರ್ವ, ಡಾ. ರಾಜಾರಾಮ್ ಕೆ.ಬಿ. ಉಲ್ಲಾಸ್ ಕೋಟ್ಯಾನ್,ವಾಸ್ತು ಶಿಲ್ಪಿ ಪ್ರಮಲ್ ಕುಮಾರ್ ಕಾರ್ಕಳ, ಸತೀಶ್ ರೈ ಕಟ್ಟಾವು ಮೊದಲಾದವರು ಉಪಸ್ಥಿತರಿದ್ದರು.























