ಹಲವಾರು ವರ್ಷಗಳ ಬಹುಬೇಡಿಕೆಯ ಕುವೆಟ್ಟು ಗ್ರಾಮ ಶಕ್ತಿನಗರ- ಪಿಲಿಚಾಮುಂಡಿಕಲ್ಲು ಸಂಪರ್ಕ ರಸ್ತೆಯ ಮರುಡಾಮರೀಕರಣ ಕಾಮಗಾರಿ ಬಗ್ಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜರಿಗೆ ಕುವೆಟ್ಟು ಪಂಚಾಯತ್ ಸದಸ್ಯರಾದ ಪ್ರದೀಪ್ ಶೆಟ್ಟಿ ನೇತೃತ್ವದಲ್ಲಿ ಕುವೆಟ್ಟು 114 ನೇ ಬೂತ್ ನ ನಾಗರಿಕರಿಂದ ಮನವಿ
ವರ್ಷಗಳ ಬಹುಬೇಡಿಕೆಯ ಕುವೆಟ್ಟು ಗ್ರಾಮ ಶಕ್ತಿನಗರ- ಪಿಲಿಚಾಮುಂಡಿಕಲ್ಲು ಸಂಪರ್ಕ ರಸ್ತೆಯ ಮರುಡಾಮರೀಕರಣ ಮಾಡಿಸಿಕೊಡುವ ಬಗ್ಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜರಿಗೆ ಕುವೆಟ್ಟು 114 ನೇ ಬೂತ್ ನ ನಾಗರಿಕರು ಮನವಿ ಸಲ್ಲಿಸಿದರು, ಶಾಸಕರು ಮನವಿ ಸ್ಪಂದಿಸಿ ಬೇಡಿಕೆ ಈಡೇರಿಸುವುದಾಗಿ ಭರವಸೆಯಿತ್ತರು.
ಈ ಕುವೆಟ್ಟು ಪಂಚಾಯತ್ ಸದಸ್ಯರು,ಕುವೆಟ್ಟು ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಶೆಟ್ಟ ಪಾಡ್ಯರ್ ನೇತೃತ್ವದಲ್ಲಿ ಮಂಡಲ ಒಬಿಸಿ ಮೋರ್ಚಾಪ್ರಧಾನ ಕಾರ್ಯದರ್ಶಿ ವಿಠಲ ಆಚಾರ್ಯ, ಶಕ್ತಿ ಕೇಂದ್ರ ಪ್ರಮುಖರಾದ ಚಂದ್ರಹಾಸ ದಾಸ್, ಪಂಚಾಯತ್ ಸದಸ್ಯರಾದ ನಿತಿನ್ ಕುಮಾರ್, ಬೂತ್ ಅಧ್ಯಕ್ಷರಾದ ದಯಾನಂದ ಆಚಾರ್ಯ, ಕಾರ್ಯದರ್ಶಿ ಸುಮಿತ್ರ ಆಚಾರ್ಯ ಹಾಗೂ ಪಕ್ಷದ ಪ್ರಮುಖರು,ಕಾರ್ಯಕರ್ತರು ಉಪಸ್ಥಿತರಿದ್ದರು.























