ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾಷಷ್ಠಿ ರಥೋತ್ಸವವನ್ನು ಕಣ್ತುಂಬಿಕೊಳ್ಳಲು ಭಕ್ತಸಾಗರವೇ ಹರಿದು ಬಂದಿದೆ. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ಶ್ರೀ ಸುಬ್ರಹ್ಮಣ್ಯ ದೇವರ ಬ್ರಹ್ಮರಥೋತ್ಸವದಲ್ಲಿ ಭಕ್ತಿಪೂರ್ವಕವಾಗಿ ಭಾಗವಹಿಸಿದರು. ಚಂಪಾಷಷ್ಠಿ ಮಹೋತ್ಸವವು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಒಂದಾಗಿದೆ.
ತೊಡಕು–ನಾಗದೋಷ–ಸರ್ಪಸಂಬಂಧಿತ ದೋಷ ನಿವಾರಣೆಗೆ ಪ್ರಸಿದ್ಧವಾದ ದಕ್ಷಿಣ ಭಾರತದ ಪ್ರಮುಖ ದೇವಸ್ಥಾನಗಳಲ್ಲಿ ಒಂದು.
ಸರ್ಪ ಸಂಕುಲಗಳ ತವರೂರು ಎಂದೇ ಗುರುತಾಗಿರುವ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯ ‘ಕುಕ್ಕೆ’ ಎಂಬ ಹಳ್ಳಿ ‘ಸುಬ್ರಮಣ್ಯ’ ನೆಲೆಸಿದ ಪುಣ್ಯಕ್ಷೇತ್ರವು ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿದೆ. ನಮ್ಮ ದೇಶದಲ್ಲಿ ಹಿಂದೂಗಳು ನಾಗಾರಾಧನೆಗೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತಾರೆ. ಸರ್ಪನಿಗೆ ಸಂಬಂಧಪಟ್ಟ ದೇವಾಲಯಗಳು ಎಲ್ಲಾ ರಾಜ್ಯಗಳಲ್ಲೂ ಸಾಕಷ್ಟು ಇವೆ. ಕರಾವಳಿಯ ಜನರಿಗೆ ನಾಗಾರಾಧನೆ ವಿಶೇಷ ಆರಾಧನೆಯಾಗಿದೆ. ಅದರಲ್ಲೂ ಕುಕ್ಕೆಸುಬ್ರಹ್ಮಣ್ಯದಲ್ಲಿ ಆಚರಿಸುವ ಚಂಪಾ ‘ಷಷ್ಠಿ’ ವಿಶೇಷ ಮಹತ್ವ ಪಡೆದಿದೆ. ಇದನ್ನು ಸ್ಕಂದ, ಸುಬ್ರಹ್ಮಣ್ಯ ಷಷ್ಠಿ ಅಂತಲೂ ಕರೆಯುತ್ತಾರೆ. ಈ ಚಂಪಾ ಷಷ್ಠಿ ಮಾರ್ಗಶಿರ ಮಾಸದ ಶುಕ್ಲ ಪಕ್ಷದ (ಆರನೇ ದಿನ) ಷಷ್ಠಿ ದಿನ ಬರುತ್ತದೆ. ವಿಶೇಷವಾಗಿ ಊರಿನ ಹೆಸರು ಸೇರಿ ಕುಕ್ಕೆ ಸುಬ್ರಹ್ಮಣ್ಯ ಷಷ್ಠಿ





















