ಉರುವಾಲು: ಉರುವಾಲು ಗ್ರಾಮ ಕಾರಿಂಜ ಶ್ರೀ ವನಶಾಸ್ತಾರ, ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಭರದಿಂದ ಸಾಗುತಿದ್ದು ನೂತನ ಬಾವಿ ನಿರ್ಮಾಣಕ್ಕೆ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ದಾಸಪ್ಪ ಗೌಡ ರವರು ಮುಹೂರ್ತ ನೆರವೇರಿಸಿದರು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಆಡಳಿತ ಟ್ರಸ್ಟ್ ಇದರ ಅಧ್ಯಕ್ಷರಾದ ಕೊರಗಪ್ಪ ಪೂಜಾರಿ, ಟ್ರಸ್ಟಿ ಒಬಯ್ಯ ಕಾರಿಂಜ, ಕಣಿಯೂರು ಪಂಚಾಯತ್ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಯಶವಂತ್ ಪದಾಧಿಕಾರಿಗಳು, ಹಾಗೂ ಊರಿನ ಪ್ರಮುಖರು ಉಪಸ್ಥಿತರಿದ್ದರು.






















