ಮಂಗಳೂರು ಸರಿ ಸುಮಾರು 4 ದಶಕದ ಕಾಲ ಯಕ್ಷ ರಂಗದಲ್ಲಿ ಸೇವೆ ಸಲ್ಲಿಸಿದ ಹಿರಿಯ ಕಲಾವಿದ ಪುತ್ತೂರು ತಾಲೂಕಿನ ಕೋಡಿಂಬಾಡಿ ಗ್ರಾಮದ ಸೇಡಿಯಾಪು ನಿವಾಸಿ ಗಂಗಾಧರ ಪುತ್ತೂರು (59 ವರ್ಷ) ಉಡುಪಿ ಜಿಲ್ಲೆಯ ಕೋಟದಲ್ಲಿ ವೇಷ ಕಳಚುತ್ತಿರುವಾಗ ಹ್ರದಯಘಾತ ತುತ್ತಾಗಿ ಕೊನೆಯುಸಿರೆಳಿದ್ದಾರೆ.
ಗಂಗಾಧರ ಪುತ್ತೂರು ಅವರು ಶ್ರೀ ಧರ್ಮಸ್ಥಳ ಯಕ್ಷಗಾನ ಮೇಳದಲ್ಲಿ 42 ವರ್ಷ ತಿರುಗಾಟ ನಡೆಸುತ್ತಿದ್ದರು.ಬುಧವಾರ ಕೋಟದ ಗಾಂಧಿ ಮೈದಾನದಲ್ಲಿ ನಡೆದ ಧರ್ಮಸ್ಥಳ ಮಹಾತ್ಮಿಯ ಕುಕ್ಕಿತ್ತಾಯನ ವೇಷ ನಿರ್ವಹಿಸಿ ಚೌಕಿಗೆ ಮರಳಿ ಕಿರೀಟ ಆಭರಣ ತೆಗೆದಿಟ್ಟು ಮುಖದ ಬಣ್ಷ ತೆಗೆಯುತ್ತಿರುತ್ತಿರುವಾಗ ಅವರಿಗೆ ತ್ರೀವ ಹ್ರದಯಘಾತವಾಗಿ ಮ್ರತಪಟ್ಟಿದ್ದಾರೆ.
ನಾರಾಯಣ ಮಯ್ಯ ಮತ್ತು ಲಕ್ಷ್ಮಿ ದಂಪತಿಗಳ ಪುತ್ರರಾಗಿ 1964ರಲ್ಲಿ ಸೇಡಿಯಾಪು ಮನೆಯಲ್ಲಿ ಜನಿಸಿದ ಅವರು ಏಳನೇ ತರಗತಿ ವರೆಗೆ ವಿದ್ಯಾಭ್ಯಾಸ ಪಡೆದು ನಂತರ ಕೆ.ಗೋವಿಂದ ಭಟ್ ಕರ್ಗಲ್ಲ ವಿಶ್ವೇಶ್ವರ ಭಟ್ ಅವರಲ್ಲಿ ನಾಟ್ಯಾಭ್ಯಾಸ ಕಲಿತರು. 18 ವಯಸ್ಸಿನಿಂದ ಮೇಳ ತಿರುಗಾಟ ಆರಂಭಿಸಿದ ಅವರು ಸ್ತ್ರೀ ವೇಷ, ಪುಂಡ ವೇಷ, ರಾಜವೇಷ ನಿರ್ವಹಿಸುವ ಮೂಲಕ ಯಕ್ಷರಂಗದ ಸವ್ಯಸಾಚಿಯಾಗಿದ್ದಾರೆ.