ಬೆಳ್ತಂಗಡಿ ಆರಂಬೋಡಿ ಗ್ರಾಮದ ಕುದುಂಬುಡ – ಕೊಮ್ಮಡ ರಸ್ತೆ ಬದಿಯ ಕುಸಿದ ಭಾಗಕ್ಕೆ ಹಾಗೂ ಸೇತುವೆಯ ನಾಲ್ಕು ಬದಿ ತಡೆಗೋಡೆ ನಿರ್ಮಾಣಕ್ಕೆ ರೂ.1.00 ಕೋಟಿ ಅನುದಾನ ನೀಡಿದ ತಾಲೂಕಿನ ಜನಪ್ರಿಯ ಶಾಸಕರಾದ ಶ್ರೀ ಹರೀಶ್ ಪೂಂಜರವರವನ್ನು ಆ ಭಾಗದ ಗ್ರಾಮಸ್ಥರು ಅಭಿನಂದಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಜಯಂತ್ ಕೋಟ್ಯಾನ್, ಆರಂಬೋಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ವಿಜಯ ಆರಂಬೋಡಿ, ಇನ್ನೂ ಅನೇಕ ಪ್ರಮುಖರು, ಗ್ರಾಮಸ್ಥರು ಉಪಸ್ಥಿತರಿದ್ದರು.






















