ಸೂರಂಬೈಲು: ಅಗ್ನಿ ಅವಘಡದಿಂದ ಮನೆ ಸಂಪೂರ್ಣ ನಾಶ – ಪುತ್ತಿಲ ಪರಿವಾರ ಟ್ರಸ್ಟ್‌ನಿಂದ ನೆರವು
ಸೂರಂಬೈಲು ಗ್ರಾಮದ ನಿವಾಸಿ ಜಯಲಕ್ಷ್ಮಿಯವರ ಮನೆ ಆಕಸ್ಮಿಕವಾಗಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದು, ಸುಮಾರು ಹತ್ತು ರಿಂದ ಹದಿನೈದು ಲಕ್ಷ ರೂಪಾಯಿ ಮೌಲ್ಯದ ನಷ್ಟ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ.
ಘಟನೆಯ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಅರುಣ್ ಕುಮಾರ್ ಪುತ್ತಿಲರು, ಪುತ್ತಿಲ ಪರಿವಾರ ಟ್ರಸ್ಟ್ ವತಿಯಿಂದ ಜಯಲಕ್ಷ್ಮಿಯವರ ಕುಟುಂಬಕ್ಕೆ ತುರ್ತು ಸಹಾಯಧನವನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಅಗ್ನಿ ಅವಘಡದಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾದ ಕುಟುಂಬದ ನೆರವಿಗೆ ಸರ್ಕಾರವು ತಕ್ಷಣ ಸ್ಪಂದಿಸಿ, ಮನೆ ಪುನರ್‌ನಿರ್ಮಾಣಕ್ಕೆ ಅಗತ್ಯ ಸಹಾಯ ನೀಡಬೇಕು” ಎಂದು ಒತ್ತಾಯಿಸಿದರು.
ಒಂದು ವೇಳೆ ಸರ್ಕಾರ ಹಾಗೂ ಸಂಬಂಧಿಸಿದ ಜನಪ್ರತಿನಿಧಿಗಳು ಈ ಘಟನೆಗೆ ಸೂಕ್ತವಾಗಿ ಸ್ಪಂದಿಸದಿದ್ದಲ್ಲಿ, ಮುಂದಿನ ದಿನಗಳಲ್ಲಿ ಊರಿನ ಜನರ ಸಹಕಾರದೊಂದಿಗೆ ಹಾಗೂ ಪುತ್ತಿಲ ಪರಿವಾರ ಟ್ರಸ್ಟ್‌ನ ಸದಸ್ಯರು ಜಯಲಕ್ಷ್ಮಿಯವರ ಕುಟುಂಬದ ಜೊತೆ ನಿಂತು, ಮನೆ ನಿರ್ಮಾಣ ಸೇರಿದಂತೆ ಎಲ್ಲಾ ಅಗತ್ಯ ಕಾರ್ಯಗಳಿಗೆ ಸಹಕಾರ ನೀಡಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಪುತ್ತಿಲ ಪರಿವಾರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಪ್ರೇಮ್ ರಾಜ್ ಆರ್ಲಪದವು, ಸುರೇಶ್ ತುಂಬಡ್ಕ, ಸುಖಿನ್ ರಾಜ್, ಹರೀಶ್ ಕಡಮಾಜೆ, ಪ್ರಕಾಶ್ ಕೀಲಂಪಾಡಿ, ಸಂದೀಪ್, ಪ್ರದೀಪ್ ಪಾಣಾಜೆ, ಹಾಲು ಉತ್ಪಾದಕ ಸಹಕಾರಿ ಸಂಘದ ಅಧ್ಯಕ್ಷ ನಾರಾಯಣ ಪ್ರಕಾಶ್, ರವಿಕುಮಾರ್ ಭರಣ್ಯ, ಸೀತಾ ಪರಿವಾರದ ಮಾತೆಯರು ಹಾಗೂ ಊರಿನ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.




















