ಗುರುವಾಯನಕೆರೆ ಬಳಿ ಇರುವ ಎಕ್ಸೆಲ್ ಖಾಸಗಿ ವಿದ್ಯಾಸಂಸ್ಥೆಯ ಗುರುವಾಯನಕೆರೆ ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಳಿ ಅಕ್ರಮವಾಗಿ ನಿರ್ಮಿಸುತ್ತಿದ್ದ ಕಟ್ಟಡದ ಬಗ್ಗೆ ಇತ್ತೀಚೆಗೆ ಕುವೆಟ್ಟು ಜನಸ್ಪಂದನಾ ಸಭೆಯಲ್ಲಿ ಗ್ರಾಮಸ್ಥರು ಭಾರೀ ವಿರೋಧವನ್ನು ವ್ಯಕ್ತಪಡಿಸಿದ್ರು ಅಧಿಕಾರಿಗಳ ನಿರ್ಲಕ್ಷಕ್ಕೆ ಗದ್ದಲವೇ ನಿರ್ಮಾಣವಾಗಿತ್ತು.
ಈ ಜನಸ್ಪಂದನದ ಫಲವಾಗಿ ಇಂದು ತಾಲೂಕು ಆಡಳಿತ ತಹಶೀಲ್ದಾರ್ ನೇತೃತ್ವದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಕಟ್ಟಡ ನಿರ್ಮಾಣಕ್ಕೆ ತಡೆ ನೀಡಿದ್ದಾರೆ.





















