• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ಜ 02: ಇಂದು ಕೋಟಿ ಚೆನ್ನಯರ ಪ್ರಾಚೀನ ಗರಡಿ ಮೂಡಾಯೂರು ಗುತ್ತು ಅರಿಗೋದಲ್ಲಿ ಬೈದೇರುಗಳ ನೇಮೋತ್ಸವ

ಜ 02: ಇಂದು ಕೋಟಿ ಚೆನ್ನಯರ ಪ್ರಾಚೀನ ಗರಡಿ ಮೂಡಾಯೂರು ಗುತ್ತು ಅರಿಗೋದಲ್ಲಿ ಬೈದೇರುಗಳ ನೇಮೋತ್ಸವ

January 2, 2026
ಸೇವಾ ನಿವೃತ್ತ ಯೋಧರ ಪರ ಲೋಕಸಭೆಯಲ್ಲಿ ಶೂನ್ಯವೇಳೆಯಲ್ಲಿ ಧ್ವನಿಯೆತ್ತಿದ ಸಂಸದ ಕ್ಯಾ.  ಚೌಟ

ಸಕಲೇಶಪುರ-ಸುಬ್ರಹ್ಮಣ್ಯ ಘಾಟ್ ರೈಲ್ವೆ ಮಾರ್ಗ ವಿದ್ಯುದ್ದೀಕರಣ ದಕ್ಷಿಣ ಕನ್ನಡದ ಬಹುಕಾಲದ ರೈಲ್ವೇ ಬೇಡಿಕೆ ಈಡೇರಿಕೆಗೆ ಹರ್ಷ ವ್ಯಕ್ತಪಡಿಸಿದ ಸಂಸದ ಕ್ಯಾ. ಬ್ರಿಜೇಶ್ ಚೌಟ

January 2, 2026
ಬೆಳಾಲು ಶ್ರೀ ಧ.ಮಂ. ಅನುದಾನಿತ ಪ್ರೌಢ ಶಾಲೆಯಲ್ಲಿ  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸ್ವಾಸ್ಥ್ಯ ಸಂಕಲ್ಪ

ಬೆಳಾಲು ಶ್ರೀ ಧ.ಮಂ. ಅನುದಾನಿತ ಪ್ರೌಢ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸ್ವಾಸ್ಥ್ಯ ಸಂಕಲ್ಪ

December 30, 2025
ಮೊಗ್ರು :ಮುಗೇರಡ್ಕ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ, ಸಾಧಕರಿಗೆ ಸನ್ಮಾನ,ಆಟೋಟ ಸ್ಪರ್ಧೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ

ಮೊಗ್ರು :ಮುಗೇರಡ್ಕ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ, ಸಾಧಕರಿಗೆ ಸನ್ಮಾನ,ಆಟೋಟ ಸ್ಪರ್ಧೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ

December 30, 2025
ಬೆಳಂದೂರು ಅಬೀರ ಅಂಗನವಾಡಿ ಕೇಂದ್ರದಲ್ಲಿ ಬಾಲಮೇಳ ಕಾರ್ಯಕ್ರಮ

ಬೆಳಂದೂರು ಅಬೀರ ಅಂಗನವಾಡಿ ಕೇಂದ್ರದಲ್ಲಿ ಬಾಲಮೇಳ ಕಾರ್ಯಕ್ರಮ

December 29, 2025
ಸವಣೂರು – ಮನ್ ಕೀ ಬಾತ್ ಕಾರ್ಯಕ್ರಮ ವೀಕ್ಷಣೆ

ಸವಣೂರು – ಮನ್ ಕೀ ಬಾತ್ ಕಾರ್ಯಕ್ರಮ ವೀಕ್ಷಣೆ

December 29, 2025
ಪುತ್ತೂರಿನಲ್ಲಿ ಸ್ಪೀಡ್ ಲಿಮಿಟ್: ಟ್ರಾಫಿಕ್ ಪೊಲೀಸರ  ಕಾರ್ಯಾಚರಣೆ, ವೇಗ ಮಿತಿಯನ್ನು ಮೀರಿದರೆ ದಂಡ

ಪುತ್ತೂರಿನಲ್ಲಿ ಸ್ಪೀಡ್ ಲಿಮಿಟ್: ಟ್ರಾಫಿಕ್ ಪೊಲೀಸರ ಕಾರ್ಯಾಚರಣೆ, ವೇಗ ಮಿತಿಯನ್ನು ಮೀರಿದರೆ ದಂಡ

December 30, 2025
ಬಾಂಗ್ಲಾದಲ್ಲಿ ಹಿಂದುಗಳ ಮೇಲಿನ ದೌರ್ಜನ್ಯ ಹತ್ಯೆ : ವಿಹಿಂಪ, ಬಜರಂಗದಳದಿಂದ ಆಕ್ರೋಶ

ಬಾಂಗ್ಲಾದಲ್ಲಿ ಹಿಂದುಗಳ ಮೇಲಿನ ದೌರ್ಜನ್ಯ ಹತ್ಯೆ : ವಿಹಿಂಪ, ಬಜರಂಗದಳದಿಂದ ಆಕ್ರೋಶ

December 27, 2025
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿತ ; ಅರುಣ್ ಪುತ್ತಿಲ

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿತ ; ಅರುಣ್ ಪುತ್ತಿಲ

December 27, 2025
ಉಪ್ಪಿನಂಗಡಿ: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಮತ್ತು ಸತ್ಯ ಸಾಯಿ ಸೇವಾ ಸಮಿತಿ ವತಿಯಿಂದ 28ನೇ ಉಚಿತ ವೈದ್ಯಕೀಯ ಶಿಬಿರ

ಉಪ್ಪಿನಂಗಡಿ: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಮತ್ತು ಸತ್ಯ ಸಾಯಿ ಸೇವಾ ಸಮಿತಿ ವತಿಯಿಂದ 28ನೇ ಉಚಿತ ವೈದ್ಯಕೀಯ ಶಿಬಿರ

December 27, 2025
ನವವಿವಾಹಿತೆ ಆತ್ಮಹತ್ಯೆ ಪ್ರಕರಣ: ನಾಗಪುರದಲ್ಲಿ  ಗಾನವಿ ಪತಿ ಸೂರಜ್ ಸೂಸೈಡ್!

ನವವಿವಾಹಿತೆ ಆತ್ಮಹತ್ಯೆ ಪ್ರಕರಣ: ನಾಗಪುರದಲ್ಲಿ ಗಾನವಿ ಪತಿ ಸೂರಜ್ ಸೂಸೈಡ್!

December 27, 2025
ಉರುವಾಲು ಗ್ರಾಮ ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವರ ವಾರ್ಷಿಕ ಜಾತ್ರಾ ಮಹೋತ್ಸವದ ಪೂರ್ವಭಾವಿ-ಸಮಾಲೋಚನಾ ಸಭೆ

ಉರುವಾಲು ಗ್ರಾಮ ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವರ ವಾರ್ಷಿಕ ಜಾತ್ರಾ ಮಹೋತ್ಸವದ ಪೂರ್ವಭಾವಿ-ಸಮಾಲೋಚನಾ ಸಭೆ

December 27, 2025
ಗುರುವಾಯನಕೆರೆ ಎಕ್ಸೆಲ್ ಖಾಸಗಿ ವಿದ್ಯಾಸಂಸ್ಥೆಯ ಅಕ್ರಮ ಕಟ್ಟಡ ನಿರ್ಮಾಣಕ್ಕೆ ಬ್ರೇಕ್

ಗುರುವಾಯನಕೆರೆ ಎಕ್ಸೆಲ್ ಖಾಸಗಿ ವಿದ್ಯಾಸಂಸ್ಥೆಯ ಅಕ್ರಮ ಕಟ್ಟಡ ನಿರ್ಮಾಣಕ್ಕೆ ಬ್ರೇಕ್

December 27, 2025
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Friday, January 2, 2026
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ಸೇವಾ ನಿವೃತ್ತ ಯೋಧರ ಪರ ಲೋಕಸಭೆಯಲ್ಲಿ ಶೂನ್ಯವೇಳೆಯಲ್ಲಿ ಧ್ವನಿಯೆತ್ತಿದ ಸಂಸದ ಕ್ಯಾ.  ಚೌಟ

    ಸಕಲೇಶಪುರ-ಸುಬ್ರಹ್ಮಣ್ಯ ಘಾಟ್ ರೈಲ್ವೆ ಮಾರ್ಗ ವಿದ್ಯುದ್ದೀಕರಣ ದಕ್ಷಿಣ ಕನ್ನಡದ ಬಹುಕಾಲದ ರೈಲ್ವೇ ಬೇಡಿಕೆ ಈಡೇರಿಕೆಗೆ ಹರ್ಷ ವ್ಯಕ್ತಪಡಿಸಿದ ಸಂಸದ ಕ್ಯಾ. ಬ್ರಿಜೇಶ್ ಚೌಟ

    ಜ 02: ಇಂದು ಕೋಟಿ ಚೆನ್ನಯರ ಪ್ರಾಚೀನ ಗರಡಿ ಮೂಡಾಯೂರು ಗುತ್ತು ಅರಿಗೋದಲ್ಲಿ ಬೈದೇರುಗಳ ನೇಮೋತ್ಸವ

    ಜ 02: ಇಂದು ಕೋಟಿ ಚೆನ್ನಯರ ಪ್ರಾಚೀನ ಗರಡಿ ಮೂಡಾಯೂರು ಗುತ್ತು ಅರಿಗೋದಲ್ಲಿ ಬೈದೇರುಗಳ ನೇಮೋತ್ಸವ

    ಬೆಳಾಲು ಶ್ರೀ ಧ.ಮಂ. ಅನುದಾನಿತ ಪ್ರೌಢ ಶಾಲೆಯಲ್ಲಿ  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸ್ವಾಸ್ಥ್ಯ ಸಂಕಲ್ಪ

    ಬೆಳಾಲು ಶ್ರೀ ಧ.ಮಂ. ಅನುದಾನಿತ ಪ್ರೌಢ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸ್ವಾಸ್ಥ್ಯ ಸಂಕಲ್ಪ

    ಮೊಗ್ರು :ಮುಗೇರಡ್ಕ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ, ಸಾಧಕರಿಗೆ ಸನ್ಮಾನ,ಆಟೋಟ ಸ್ಪರ್ಧೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ

    ಮೊಗ್ರು :ಮುಗೇರಡ್ಕ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ, ಸಾಧಕರಿಗೆ ಸನ್ಮಾನ,ಆಟೋಟ ಸ್ಪರ್ಧೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ

    ಬೆಳಂದೂರು ಅಬೀರ ಅಂಗನವಾಡಿ ಕೇಂದ್ರದಲ್ಲಿ ಬಾಲಮೇಳ ಕಾರ್ಯಕ್ರಮ

    ಬೆಳಂದೂರು ಅಬೀರ ಅಂಗನವಾಡಿ ಕೇಂದ್ರದಲ್ಲಿ ಬಾಲಮೇಳ ಕಾರ್ಯಕ್ರಮ

    ಸವಣೂರು – ಮನ್ ಕೀ ಬಾತ್ ಕಾರ್ಯಕ್ರಮ ವೀಕ್ಷಣೆ

    ಸವಣೂರು – ಮನ್ ಕೀ ಬಾತ್ ಕಾರ್ಯಕ್ರಮ ವೀಕ್ಷಣೆ

    ಪುತ್ತೂರಿನಲ್ಲಿ ಸ್ಪೀಡ್ ಲಿಮಿಟ್: ಟ್ರಾಫಿಕ್ ಪೊಲೀಸರ  ಕಾರ್ಯಾಚರಣೆ, ವೇಗ ಮಿತಿಯನ್ನು ಮೀರಿದರೆ ದಂಡ

    ಪುತ್ತೂರಿನಲ್ಲಿ ಸ್ಪೀಡ್ ಲಿಮಿಟ್: ಟ್ರಾಫಿಕ್ ಪೊಲೀಸರ ಕಾರ್ಯಾಚರಣೆ, ವೇಗ ಮಿತಿಯನ್ನು ಮೀರಿದರೆ ದಂಡ

    ಬಾಂಗ್ಲಾದಲ್ಲಿ ಹಿಂದುಗಳ ಮೇಲಿನ ದೌರ್ಜನ್ಯ ಹತ್ಯೆ : ವಿಹಿಂಪ, ಬಜರಂಗದಳದಿಂದ ಆಕ್ರೋಶ

    ಬಾಂಗ್ಲಾದಲ್ಲಿ ಹಿಂದುಗಳ ಮೇಲಿನ ದೌರ್ಜನ್ಯ ಹತ್ಯೆ : ವಿಹಿಂಪ, ಬಜರಂಗದಳದಿಂದ ಆಕ್ರೋಶ

    ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿತ ; ಅರುಣ್ ಪುತ್ತಿಲ

    ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿತ ; ಅರುಣ್ ಪುತ್ತಿಲ

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ಧಾರ್ಮಿಕ

ಜ 02: ಇಂದು ಕೋಟಿ ಚೆನ್ನಯರ ಪ್ರಾಚೀನ ಗರಡಿ ಮೂಡಾಯೂರು ಗುತ್ತು ಅರಿಗೋದಲ್ಲಿ ಬೈದೇರುಗಳ ನೇಮೋತ್ಸವ

by ಪ್ರಜಾಧ್ವನಿ ನ್ಯೂಸ್
January 2, 2026
in ಧಾರ್ಮಿಕ, ಪುತ್ತೂರು
0
ಜ 02: ಇಂದು ಕೋಟಿ ಚೆನ್ನಯರ ಪ್ರಾಚೀನ ಗರಡಿ ಮೂಡಾಯೂರು ಗುತ್ತು ಅರಿಗೋದಲ್ಲಿ ಬೈದೇರುಗಳ ನೇಮೋತ್ಸವ
11
SHARES
31
VIEWS
ShareShareShare

ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಮೂಡಾಯುರುಗುತ್ತು ಆರಿಗೊ ನೇಮೋತ್ಸವ. ತುಳುನಾಡಿನ ಸತ್ಯಧರ್ಮದ ಪ್ರತಿರೂಪಗಳಂತಿರುವ ಕಾರಣಿಕ ಅವಳಿ ಪುರುಷರಾದ ಕೋಟಿ ಚೆನ್ನಯರು ಪಡುಮಲೆಯಲ್ಲಿ ಜನಿಸಿ ತಮ್ಮ ಶಕ್ತಿ ಸಾಮರ್ಥ್ಯದ ಕಾಲದಲ್ಲಿ ಊರೂರು ತಿರುಗಾಡುತ್ತಾರೆ. ದೈವಪಟ್ಟಕ್ಕೆ ಏರಿರುವ ಪವಾಡ ಪುರುಷರು ತಾವು ವ್ಯಾಯಾಮ ಮಾಡಿ ಶಕ್ತಿ ಸಂಪಾದಿಸಿದ ವ್ಯಾಯಾಮ ಶಾಲೆ ‘ಗರಡಿ’ ಅಥವಾ ‘ಗರೋಡಿ’ ಎಂದೇ ಹೆಸರು ಪಡೆದಿದೆ. ದೈವಾಂಶ ಸಂಭೂತರಾಗಿರುವ ಕಾರಣ ಅವರಿಗೆ ಗರಡಿ ನಿರ್ಮಿಸಿ ಪೂಜಿಸಿ, ಆರಾಧಿಸುವ ಕ್ರಮ ಅನಾದಿಕಾಲದಿಂದ ನಡೆದು ಬಂದ ರೂಢಿ ಸಂಪ್ರದಾಯವಾಗಿದೆ.

camera center ad

ಜಾಹೀರಾತು

ಪಡುಮಲೆ ಅರಮನೆ ಬಿಟ್ಟ ಕೋಟಿ ಚೆನ್ನಯರು ಸುತ್ತಾಡುತ್ತಾ ಬಂದು ಒಂದು ಕಡೆ ಕಟ್ಟೆಯಲ್ಲಿ ಕುಳಿತು ಹಾಲು ಕುಡಿಯುತ್ತಾರೆ. ಹಾಲು ಕುಡಿದು ತೇಗಿದ (ತುಳುವಿನಲ್ಲಿ ‘ಅರಿಗ’) ಸ್ಥಳವೇ ಪುತ್ತೂರು ತಾಲೂಕಿನ ಈಗಿನ ಚಿಕ್ಕಮುಡ್ನೂರು ಗ್ರಾಮದ ಮೂಡಾಯುರುಗುತ್ತು ಆರಿಗೊ ಸ್ಥಳವಾಗಿದೆ. ಇಲ್ಲಿಗೆ ಅರಿಗೋ ಎಂಬ ಹೆಸರು ಬರಲೂ ಇದೇ ಕಾರಣ ಎಂದು ಪ್ರತೀತಿ ಇದೆ. ಈ ಗರಡಿ ಕೋಟಿ ಚೆನ್ನಯರ ನೇಮೋತ್ಸವಕ್ಕೆ ಆದಿ ಗರಡಿ ಎಂದೇ ಖ್ಯಾತಿಯಾಗಿದೆ. ಸುಮಾರು 185 ವರ್ಷಗಳ ಹಿಂದೆಯೇ ಇಲ್ಲಿ ಬೈದೇರುಗಳ ನೇಮೋತ್ಸವ ನಡೆಯುತ್ತಿತ್ತು ಎಂಬುದಕ್ಕೆ ಇಂದಿಗೂ ದಾಖಲೆಗಳಿವೆ. ಲಭ್ಯವಾಗಿರುವ ದಾಖಲೆಯಲ್ಲಿ ಪ್ರಜೋತ್ಪತ್ತಿ ಸಂವತ್ಸರ ಎಂದು ನಮೂದಿಸಲಾಗಿರುವುದರಿಂದ ಸುಮಾರು 185 ವರ್ಷಗಳ ಹಿಂದಿನದ್ದು ಎಂದು ಲೆಕ್ಕಾಚಾರ ಹಾಕಬಹುದಾಗಿದೆ.

ಕೋಟಿ ಚೆನ್ನಯರ ಆದಿ ಮತ್ತು ಅಂತ್ಯ ಸ್ಥಳಗಳಲ್ಲಿ ಮಾತ್ರ ವಿಷ್ಣುಮೂರ್ತಿ ದೇವಸ್ಥಾನಗಳಿವೆ. ಹಾಗಾಗಿ ಆರಿಗೋ ಮೂಡಾಯೂರು ಕೂಡಾ ಕೆಮ್ಮಾಯಿ ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ನಿಕಟ ಸಂಪರ್ಕವಿರುವ ಗರಡಿಯಾಗಿದೆ. ಬೊಳುವಾರುನಿಂದ ಉಪ್ಪಿನಂಗಡಿ ರಸ್ತೆಯಲ್ಲಿ ಸಾಗಿ ಕೆಮ್ಮಾಯಿ ಜಂಕ್ಷನ್‌ನಿಂದ ಬಲಕ್ಕೆ ಮೂಡಾಯೂರು ರಸ್ತೆಯಲ್ಲಿ ಅರ್ಧ ಕಿಲೋಮಿಟರ್ ಸಾಗಿದರೆ ವಿಷ್ಣುಮೂರ್ತಿ ದೇವಾಲಯ ಮತ್ತು ಮೂಡಾಯೂರುಗುತ್ತು ಭಂಡಾರದ ಚಾವಡಿ ಕಾಣಸಿಗುತ್ತದೆ. ಅಲ್ಲಿಂದ ಮುಂದೆ ಅರ್ಧ ಕಿಲೋಮೀಟರ್ ಸಾಗಿದರೆ ಅರಿಗೋ ಬೈದೇರುಗಳ ಗರಡಿ ಪ್ರಕೃತಿ ರಮಣೀಯ ತಾಣದಲ್ಲಿ ಕಂಡುಬರುತ್ತದೆ.

ಅಲ್ಲಿಂದ ಬಳಿಕ ಇಲ್ಲಿ ನಿರಂತರವಾಗಿ ನೇಮೋತ್ಸವ ನಡೆಯುತ್ತಿದೆ. ಜೈನರಸರು ಇದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಅರಸರ ಆಳ್ವಿಕೆಯ ಬಳಿಕವೂ ಮೂಡಾಯೂರುಗುತ್ತು ಜೈನ ಪರಂಪರೆಯವರು ಇಂದಿಗೂ ಇಲ್ಲಿನ ಮುಖ್ಯಸ್ಥರಾಗಿದ್ದಾರೆ. ಈ ಮೊದಲು ಮೂಡಾಯೂರುಗುತ್ತು ರಾಜವರ್ಮ ರೈ ರವರು ಸುಮಾರು 60 ವರ್ಷಗಳ ಕಾಲ ಆಡಳಿತ ನಡೆಸಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದರು.

ಪ್ರಸ್ತುತ ಪುತ್ತೂರು ಮಹಾವೀರ ಆಸ್ಪತ್ರೆಯ ಡಾ. ಎಂ. ಅಶೋಕ್ ಪಡಿವಾಳ್ ಮತ್ತು ಮೂಡಾಯೂರು ಕುಟುಂಬಸ್ಥರು ಹಾಗೂ ಬಿ. ಧನ್ಯಕುಮಾರ್ ರೈ ಬಿಳಿಯೂರುಗುತ್ತು ರವರ ನೇತೃತ್ವದಲ್ಲಿ ವಾರ್ಷಿಕ ಉತ್ಸವಾದಿ ಕಾರ್ಯಕ್ರಮಗಳು ನಡೆಯುತ್ತಿವೆ. ಮೊದಲು ಗ್ರಾಮ ಸಾನ್ನಿಧ್ಯ ಶ್ರೀ ವಿಷ್ಣುಮೂರ್ತಿ ದೇವರಿಗೆ ರಂಗಪೂಜೆ ಮತ್ತು ಮೂಡಾಯೂರುಗುತ್ತುವಿನಿಂದ ಭಂಡಾರ ತೆಗೆದು ಬೈದೇರುಗಳ ತಂಬಿಲ ಸೇವೆ ನಡೆಯುತ್ತದೆ.

ಮರುದಿನ ರಾತ್ರಿ ಕ್ಷೇತ್ರದ ಇತರ ಸಾನ್ನಿಧ್ಯಗಳಾದ ಇಷ್ಟದೇವತೆ ಮತ್ತು ಏಳ್ನಾಡು ದೈವಗಳ ನೇಮೋತ್ಸವ ನಡೆಯುತ್ತವೆ. ಅದರ ಮರುದಿನ ಶ್ರೀ ಬೈದೇರುಗಳ ನೇಮ, ರಾತ್ರಿ ಮಾಣಿಬಾಲೆ ನೇಮ, ಕಡ್ಸಲೆ ಬಲಿ ವಗೈರೆ ನಡೆದು ಸಂಪನ್ನಗೊಳ್ಳುತ್ತದೆ. ಪ್ರಾಚೀನ ಗರಡಿಯಾಗಿರುವುದರಿಂದ ಇಲ್ಲಿನ ಎಲ್ಲಾ ಆಚರಣೆಗಳು ಇಂದಿಗೂ ಪೂರ್ವ ಸಂಪ್ರದಾಯ ಪ್ರಕಾರವೇ ನಡೆದು ಬರುತ್ತಿದೆ.

ಕೋಟಿಚೆನ್ನಯರು ಬಂದು ಕುಳಿತ ಕಟ್ಟೆ ಅತ್ಯಂತ ಕಾರಣಿಕತೆಯಿಂದ ಕೂಡಿದ್ದು ಕಟ್ಟೆದಮಜಲು ಎಂದೇ ಕರೆಯಲಾಗುತ್ತದೆ. ಈ ಕಟ್ಟೆಯಲ್ಲಿ ಮಾವಿನ ಮರವೊಂದು ಇದ್ದು, ಕೆಲ ವರ್ಷಗಳ ಹಿಂದೆ ಅಂದರೆ 1970 ರಲ್ಲಿ ಕ್ಷೇತ್ರದ ಜೀರ್ಣೋದ್ಧಾರ ಕಾಲದಲ್ಲಿ ಅದು ಅಳಿದು ಹೋಯಿತು. ಆದರೆ ಅದೇ ಕಟ್ಟೆಯಲ್ಲಿ ಹೊಸತೊಂದು ಮಾವಿನ ಗಿಡವೊಂದು ತನ್ನಿಂದತಾನೇ ಹುಟ್ಟಿ ಸ್ಥಳೀಯರನ್ನು ಬೆರಗುಗೊಳಿಸಿದ ಘಟನೆಯೂ ನಡೆದಿದೆ. ಅತ್ಯಲ್ಪ ಸಮಯದಲ್ಲಿಯೇ ಆ ಗಿಡ ಮರವಾಗಿ ಬೆಳೆದು ನಿಂತಿದೆ. ಇದು ಕೋಟಿ ಚೆನ್ನಯರ ಕಲಿಯುಗ ಶಕ್ತಿಯ ಪ್ರತೀಕ ಎಂದು ಭಕ್ತರು ಹೇಳಿಕೊಳ್ಳುತ್ತಾರೆ.

ಕೋಟಿ ಚೆನ್ನಯರ ಮೂರ್ತಿ ಮತ್ತು ಅವರು ಧರಿಸುವ ಆಭರಣಗಳು ಅತ್ಯಂತ ಪುರಾತನವೂ, ಬಹಳ ವಿನ್ಯಾಸಗಳಿಂದ ಕೂಡಿ ನೋಡಲು ಅತ್ಯಾಕರ್ಷಕವಾಗಿವೆ. ದಾಖಲೆಯೊಂದರ ಪ್ರಕಾರ ಇಲ್ಲಿನ ಬೈದೇರುಗಳ ಆಭರಣ ಒಡವೆಗಳು ಪಂಜ ಎಂಬಲ್ಲಿ ನಡೆಯುತ್ತಿದ್ದ ನೇಮೋತ್ಸವಕ್ಕೆ ಬಾಡಿಗೆಗೆ ಕೊಂಡು ಹೋಗಿರುವ ಬಗ್ಗೆ ನಮೂದಿಸಲಾಗಿದೆ.

Muliya

ಜಾಹೀರಾತು

ಗರಡಿಯ ಮೇಲ್ಭಾಗದಲ್ಲಿ ಸುಮಾರು 200 ವರ್ಷಗಳಷ್ಟು ಪುರಾತನವಾದ ‘ಬ್ರಹ್ಮರಗುಂಡ’ ಸ್ಥಳವಿದೆ. ಬಹಳ ಹಿಂದೆ ನೇಮೋತ್ಸವ ಇಲ್ಲಿಯೇ ನಡೆಯುತ್ತಿತ್ತು. ಈಗಲೂ ಅಲ್ಲಿ ದೀಪ ಉರಿಸಿ ಕೋಟಿ ಚೆನ್ನಯರ ನೇಮ ನಡೆಯುತ್ತದೆ. ಯಾವುದೇ ವಿದ್ಯುತ್ ದೀಪಗಳಿಲ್ಲದೇ ಕೇವಲ ದೊಂದಿ ಬೆಳಕಿನಲ್ಲಿ ಕೋಟಿ ಚೆನ್ನಯರ ನರ್ತನ ನಡೆಯುತ್ತದೆ. ಇಲ್ಲಿಗೆ ಮಹಿಳೆಯರ ಪ್ರವೇಶವೂ ನಿಷಿದ್ಧವಾಗಿದೆ.

ಪ್ರತೀ ಮಂಗಳವಾರ ಇಲ್ಲಿ ಅಕ್ಕಿ ಹಾಲು ಸಮರ್ಪಣೆ, ಪ್ರಾರ್ಥನೆಗಳನ್ನು ಮಾಡಲಾಗುತ್ತದೆ. ಇಲ್ಲಿಗೆ ‘ಪೆರ್ಮಂಡ’ ಎಂದು ಹೆಸರು ಇದೇ ಹಿನ್ನೆಲೆಯಲ್ಲಿ ಬಂದಿರಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಊರಿನ ಭಕ್ತರಲ್ಲದೇ ಪರವೂರಿನಿಂದಲೂ ನೂರಾರು ಮಂದಿ ಆಗಮಿಸಿ ತಮ್ಮ ಕಷ್ಟಕಾರ್ಪಣ್ಯಗಳನ್ನು ಹೇಳಿಕೊಳ್ಳುವ ದೃಶ್ಯಕಂಡುಬರುತ್ತದೆ. ಅಲ್ಲದೇ ಇಲ್ಲಿನ ಕೋಟಿ ದೈವದ ಪಾತ್ರಿ ಶೀನ ಪೂಜಾರಿಯವರು ನಾನಾ ರೀತಿಯ ರೋಗಗಳಿಗೆ ಕ್ಷೇತ್ರ ಶಕ್ತಿಯನ್ನು ನಂಬಿ ಔಷಧಿ ನೀಡುತ್ತಿದ್ದಾರೆ. ನಾನಾ ಊರುಗಳಿಂದ ಇಲ್ಲಿಗೆ ರೋಗ ರುಜಿನಗಳ ಪರಿಹಾರಕ್ಕಾಗಿ ಆಗಮಿಸುತ್ತಾರೆ.

ಇಲ್ಲಿನ ಇನ್ನೊಂದು ವಿಶೇಷತೆ ಎಂದರೆ ಗರಡಿಯ ನೇಮೋತ್ಸವಕ್ಕೆ ಸಂಬಂಧಿಸಿದ ಎಲ್ಲಾ ಚಾಕರಿ ಸೇವೆ ಮಾಡುವವರಿಗೆ ವಂಶಪಾರಂಪರ‍್ಯತೆಯಿದೆ. ದೈವದ ಪಾತ್ರಿ, ಭಂಡಾರಿ, ಮಡಿವಾಳ, ಗರ್ನಲ್ ತಯಾರಕರು ಹೀಗೆ ಪ್ರತಿಯೊಬ್ಬರೂ ಇಲ್ಲಿನ ನೇಮೋತ್ಸವ ಕಾಲಕ್ಕೆ ಎಲ್ಲಿದ್ದರೂ ಹಾಜರಾಗಿ ತಮ್ಮ ತಮ್ಮ ಸೇವೆಗೈಯುತ್ತಾರೆ. ಪ್ರತಿಯೊಂದು ಚಾಕರಿಗೂ ಗ್ರಾಮದೊಳಗೆ ಸೇವೆ ಮಾಡುವವರಿದ್ದಾರೆ. ಹಿಂದಿನಿಂದಲೂ ಇದೇ ಸಂಪ್ರದಾಯವಿದ್ದು, ಅವರವರ ವಂಶಸ್ಥರೇ ಬಂದು ಸೇವೆಗೈಯುತ್ತಾರೆ. ನಾಗಸ್ವರ ವಾದ್ಯಕಲಾವಿದರ ಸೇವೆ ಇಲ್ಲಿ ಗುರುತರವಾದುದು. ಬಹಳ ಹಿಂದೆ ಡೋಗ್ರ ಸೇರಿಗಾರ ಈ ಸೇವೆ ಮಾಡುತ್ತಿದ್ದರು. ಪ್ರಸ್ತುತ ದಿ. ಬಾಬು ಸೇರಿಗಾರ ರವರ ಮಕ್ಕಳು ಹಾಗೂ ಮೊಮ್ಮಕ್ಕಳು ಈ ಸೇವೆ ಮಾಡುತ್ತಿದ್ದಾರೆ.

ಇಲ್ಲಿ ಅನಾದಿಕಾಲದಿಂದಲೇ ಭತ್ತದ ಸಣ್ಣ ಮುಡಿ (ತುಳುವಿನಲ್ಲಿ ‘ಕುರುಂಟು’) ಹರಕೆ ಅರ್ಪಿಸಿ ವಿಶೇಷ ಪ್ರಾರ್ಥನೆ, ಸಂಕಷ್ಟಗಳನ್ನು ನಿವಾರಿಸಿಕೊಳ್ಳುತ್ತಾರೆ. ಬಹಳ ಹಿಂದೆ ಭತ್ತದ ಗದ್ದೆಗಳು ಸಾಕಷ್ಟಿದ್ದ ಕಾರಣ ಇಲ್ಲಿಗೆ ಹೆಚ್ಚಾಗಿ ಇದು ಹರಕೆ ರೂಪದಲ್ಲಿ ಸಂದಾಯವಾಗುತ್ತಿತ್ತು.

ಶತಮಾನದ ಹಿಂದಿನಿಂದಲೇ ಇಲ್ಲಿ ನೇಮೋತ್ಸವ ನಡೆಯುತ್ತಿದೆ. ಇಲ್ಲಿಯವರೆಗೆ ನೇಮೋತ್ಸವ ಕಾಲಕ್ಕೆ ಯಾವುದೇ ಸೂತಕಾದಿ ಅಡಚಣೆಗಳು ಬಂದೊದಗಿದ ಸನ್ನಿವೇಶವೇ ಎದುರಾಗದಿರುವುದು ಕ್ಷೇತ್ರದ ಇನ್ನೊಂದು ಮಹಿಮೆ ಎನ್ನಬಹುದು.

ನೇಮೋತ್ಸವದ ದಿನ ರಾತ್ರಿ 7.30 ಸಮಯಕ್ಕೆ ಇಲ್ಲಿ ಅನ್ನಸಂತರ್ಪಣೆ ಆರಂಭವಾಗುತ್ತದೆ. ಮಧ್ಯರಾತ್ರಿಯವರೆಗೂ ನಿರಂತರ ಅನ್ನಪ್ರಸಾದ ನೀಡಲಾಗುತ್ತಿದ್ದು, ಪ್ರತೀ ವರ್ಷ ಸುಮಾರು 10 ಸಾವಿರಕ್ಕೂ ಅಧಿಕ ಮಂದಿ ಭಕ್ತಾದಿಗಳು ಆಗಮಿಸಿ ದೈವಗಳ ಪ್ರಸಾದ ಸ್ವೀಕರಿಸುತ್ತಾರೆ.

ಇತಿಹಾಸ ಸಂಶೋಧಕರ ಅಧ್ಯಯನವೊಂದರ ಪ್ರಕಾರ ಕೋಟಿ ಚೆನ್ನಯರ ಗುರುಗಳಾದ ಸಾಯನ ಬೈದ್ಯರ ವಂಶಸ್ಥರು ಇಲ್ಲಿದ್ದರೆಂದ, ಅವರ ವಂಶಸ್ಥರೇ ಆರಾಧನೆ ಮಾಡಿಕೊಂಡು ಬರುತ್ತಿದ್ದರು ಎಂದು ಹೇಳಲಾಗಿದೆ.

ಪಡುಮಲೆ ಬಿಟ್ಟ ಕೋಟಿ ಚೆನ್ನಯರು ಇಲ್ಲಿ ಬಂದು ಕುಳಿತ ಕಾರಣದಿಂದಲೇ  ಇಲ್ಲಿ ವರ್ಷದ ಪ್ರಥಮ ಬೈದೇರುಗಳ ನೇಮೋತ್ಸವ ನಡೆಯುತ್ತಿದೆ. ಬಹಳ ವರ್ಷಗಳ ಹಿಂದೆ ಬೈದೇರುಗಳಿಗೆ ಕೇವಲ ತಂಬಿಲ ಸೇವೆ ನಡೆಯುತ್ತಿತ್ತು. ಬೈದೇರುಗಳಿಗೆ ನೇಮೋತ್ಸವ ಆರಂಭವಾದುದೇ ಇಲ್ಲಿ ಎಂದು ಹೇಳಲಾಗಿದೆ. ಜಿಲ್ಲೆಯ ಅತ್ಯಂತ ಪ್ರಾಚೀನ ಗರಡಿ ಇದಾಗಿದ್ದು, ಇಲ್ಲಿ ಆದಿ ಉತ್ಸವ ನಡೆಯುತ್ತದೆ. ಪೆರಾರ್ದೆ ತಿಂಗಳ ಹುಣ್ಣಿಮೆಯ ದಿನದಂದು ಇಲ್ಲಿ ಪ್ರತೀವರ್ಷ ವಿಜೃಂಭಣೆಯ ನೇಮೋತ್ಸವ ನಡೆಯುತ್ತದೆ.

SendShare4Share
Previous Post

ಬೆಳಾಲು ಶ್ರೀ ಧ.ಮಂ. ಅನುದಾನಿತ ಪ್ರೌಢ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸ್ವಾಸ್ಥ್ಯ ಸಂಕಲ್ಪ

Next Post

ಸಕಲೇಶಪುರ-ಸುಬ್ರಹ್ಮಣ್ಯ ಘಾಟ್ ರೈಲ್ವೆ ಮಾರ್ಗ ವಿದ್ಯುದ್ದೀಕರಣ ದಕ್ಷಿಣ ಕನ್ನಡದ ಬಹುಕಾಲದ ರೈಲ್ವೇ ಬೇಡಿಕೆ ಈಡೇರಿಕೆಗೆ ಹರ್ಷ ವ್ಯಕ್ತಪಡಿಸಿದ ಸಂಸದ ಕ್ಯಾ. ಬ್ರಿಜೇಶ್ ಚೌಟ

ಪ್ರಜಾಧ್ವನಿ ನ್ಯೂಸ್

ಪ್ರಜಾಧ್ವನಿ ನ್ಯೂಸ್

Next Post
ಸೇವಾ ನಿವೃತ್ತ ಯೋಧರ ಪರ ಲೋಕಸಭೆಯಲ್ಲಿ ಶೂನ್ಯವೇಳೆಯಲ್ಲಿ ಧ್ವನಿಯೆತ್ತಿದ ಸಂಸದ ಕ್ಯಾ.  ಚೌಟ

ಸಕಲೇಶಪುರ-ಸುಬ್ರಹ್ಮಣ್ಯ ಘಾಟ್ ರೈಲ್ವೆ ಮಾರ್ಗ ವಿದ್ಯುದ್ದೀಕರಣ ದಕ್ಷಿಣ ಕನ್ನಡದ ಬಹುಕಾಲದ ರೈಲ್ವೇ ಬೇಡಿಕೆ ಈಡೇರಿಕೆಗೆ ಹರ್ಷ ವ್ಯಕ್ತಪಡಿಸಿದ ಸಂಸದ ಕ್ಯಾ. ಬ್ರಿಜೇಶ್ ಚೌಟ

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂದರ್ಭಿಕ ಚಿತ್ರ
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

No Result
View All Result
  • ಮುಖಪುಟ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಉದ್ಯೋಗ – ಶಿಕ್ಷಣ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಿನಿಮಾ
  • ಲೈಫ್ ಸ್ಟೈಲ್

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..