ಬೆಂಗಳೂರು: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದಿಲ್ಲವೇ ಎಂಬ ಕಾಂಗ್ರೆಸ್ ಮುಖಂಡ ರಾಜು ಕಾಗೆ ಅವರ ಹೇಳಿಕೆಗೆ ಬಿಜಪಿಯಿಂದ ವ್ಯಾಪಕ ಟೀಕೆ ಪ್ಯಕ್ತವಾಗಿದೆ. ಇದು ಅಮೂಲ್ಯ ಜೀವಗಳ ಸಾವುಗಳಿಗಾಗಿ ಚಟಪಡಿಸುವ ಕಾಂಗ್ರೆಸ್ ನ ಹೀನ ಸಂಸ್ಕೃತಿಯ ದ್ಯೋತಕ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆಕ್ರೋಶ ವ್ಯಕ್ತಪಡಸಿದ್ದಾರೆ. ರಾಹುಲ್ ಗಾಂಧಿ ಮನಸ್ಥಿತಿಯೇ ಕಾಗೆ ಬಾಯಲ್ಲಿ ಅಪಶಕುನ ನುಡಿಸಿದೆ ಎಂದು ದೂರಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟರ್ ಅನ್ನು ಹಂಚಿಕೊಂಡಿರುವ ಅವರು, ಕಾಂಗ್ರೆಸ್ ಮೋದಿಯವರ ಯಾವನ್ನು ಯಾಕೆ ಬಯಸುತ್ತಿದೆ ಎಂದು ಪಟ್ಟಿ ಮಾಡಿದ್ದಾರೆ. ಆರ್ಟಿಕಲ್ 370 ರದ್ದು, ಭಯೋತ್ಪಾದನೆ ನಿಗ್ರಹ, ಆರ್ಥಿಕ ಅಭಿವೃದ್ಧಿ ಮೊದಲಾದ ವಿಚಾರಗಳನ್ನು ಇಟ್ಟುಕೊಂಡು ಕಾಂಗ್ರೆಸ್ ಗೆ ಟಾಂಗ್ ನೀಡಿದ್ದಾರೆ.
ರಾಹುಲ್ ಗಾಂಧಿ ಮನಸ್ಥಿತಿ ಕಾಗೆ ಬಾಯಲ್ಲಿ ಅಪಶಕುನ ನುಡಿಸಿದೆ ಸಾವುಗಳನ್ನು ಆಧರಿಸಿ ಅಧಿಕಾರಗಳನ್ನು ಗಳಿಸಿದ ಹಿನ್ನಲೆಯ ಕಾಂಗ್ರೆಸ್ಸಿಗರು ಅಮೂಲ್ಯ ಜೀವಗಳ ಸಾವುಗಳಿಗಾಗಿ ಚಡಪಡಿಸುವುದು ಅವರ ಹೀನ ಸಂಸ್ಕೃತಿಯ ದ್ಯೋತಕವಾಗಿದೆ. ಮೋದಿಯವರ ಸಾವು ಕಾಂಗ್ರೆಸ್ ಏಕೆ ಬಯಸುತ್ತದೆ?
- ಆರ್ಟಿಕಲ್ 370 ರದ್ದುಗೊಳಿಸಿ, ಭಾರತದ ಕಿರೀಟ ಕಾಶ್ಮೀರವನ್ನು ಉಳಿಸಿದ್ದಕ್ಕಾಗಿಯೇ?•ಐದು ಶತಮಾನಗಳ ಭಾರತೀಯರ ಕನಸು ಈಡೇರಿಸಲು ರಾಮಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಿದ ಕಾರಣಕ್ಕಾಗಿಯೇ?
- ದೇಶವನ್ನು ಮುಕ್ಕಿ ತಿನ್ನುತ್ತಿದ್ದ ಭಯೋತ್ಪಾದಕತೆಯನ್ನು ಬೇರು ಸಮೇತ ಕಿತ್ತೊಗೆದು ರಾಷ್ಟ್ರವನ್ನು ರಕ್ಷಿಸಿದ ಕಾರಣಕ್ಕಾಗಿಯೇ?
- ವಿಶ್ವದಲ್ಲಿ ಭಾರತವನ್ನು ಆರ್ಥಿಕವಾಗಿ 5 ನೇ ಸ್ಥಾನಕ್ಕೇರಿಸಿ ಶಕ್ತಿಶಾಲಿ ರಾಷ್ಟ್ರ ನಿರ್ಮಿಸಿದ ಕಾರಣಕ್ಕಾಗಿಯೇ?
- ಅಭಿವೃದ್ಧಿಯ ಓಟದಲ್ಲಿ ಜಾಗತಿಕ ಪೈಪೋಟಿಯ ನಡುವೆ ಭಾರತವನ್ನು ಮುಂಚೂಣಿ ಸ್ಥಾನದಲ್ಲಿ ತಂದು ನಿಲ್ಲಿಸಿದ ಕಾರಣಕ್ಕಾಗಿಯೇ?
- ದೇಶದ ಕಟ್ಟಕಡೆಯ ಪ್ರಜೆಯೂ ಸ್ವಾಭಿಮಾನದ ಬದುಕು ರೂಪಿಸಲು ಹತ್ತು ಹಲವು ಯೋಜನೆಗಳನ್ನು ಸಮರ್ಪಿಸಿದ ಕಾರಣಕ್ಕಾಗಿಯೇ?
- ದಕ್ಷ ಹಾಗೂ ಪಾರದರ್ಶಕ ಆಡಳಿತ ನೀಡಿ ಕಪ್ಪು ಚುಕ್ಕೆ ಇಲ್ಲದ ಪರಿಶುಭ್ರ ಆಡಳಿತ ನೀಡಿ ಜನರಿಂದ ‘ಸೈ’ ಅನಿಸಿಕೊಂಡ ಕಾರಣಕ್ಕಾಗಿಯೇ?
- ಭಾರತೀಯ ಜನತಾ ಪಾರ್ಟಿ ವ್ಯಕ್ತಿ ಆಧಾರಿತವಾಗಿ ಬೆಳೆದುದ್ದಲ್ಲ, ಸಿದ್ಧಾಂತ, ತತ್ವಗಳನ್ನು ಆಧರಿಸಿ ರಾಷ್ಟ್ರ ಭಕ್ತ ಕಾರ್ಯಕರ್ತರ ಪರಿಶ್ರಮದ ಫಲವಾಗಿ ಬೆಳೆದು ನಿಂತಿರುವ ಬೃಹತ್ ರಾಜಕೀಯ ವೃಕ್ಷ.
- ದಿವಂಗತ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ, ಮುರುಳಿ ಮನೋಹರ್ ಜೋಶಿ ಅವರಂತಹ ಸಾಲು ಸಾಲು ನಾಯಕರನ್ನು ದೇಶಕ್ಕೆ ಸಮರ್ಪಣೆ ಮಾಡಿದ ಪಕ್ಷ , ಈ ನಿಟ್ಟಿನಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಗಟ್ಟಿಯಾಗಿ ಪಡಿಮೂಡಿದ ದೇಶ ಮೆಚ್ಚಿದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಜೀ, ಸಮರ್ಥ ಆಡಳಿತಗಾರನಾಗಿ ದೇಶವನ್ನು ಬಲಿಷ್ಠ ಗೊಳಿಸಿದ ಮಹಾನ್ ನೇತಾರ’ ಎನ್ನುವ ಕಾರಣಕ್ಕಾಗಿ ಈ ದೇಶದ ಜನ ಮತ್ತೊಮ್ಮೆ ಅವರ ನಾಯಕತ್ವವನ್ನು ಬಯಸಿ ಪ್ರಧಾನಿಯನ್ನಾಗಿಸಲು ಸಂಕಲ್ಪ ತೊಟ್ಟಿದ್ದಾರೆ , ಇದನ್ನು ಸಹಿಸದ ಕಾಂಗ್ರೆಸ್ಸಿಗರ ಬಾಯಲ್ಲಿ ಹತಾಶೆ, ಅಪಶಕುನದ ಮಾತುಗಳಲ್ಲದೇ ಇನ್ನೇನು ಬರಲು ಸಾಧ್ಯ?