ಬೆಂಗಳೂರು : ದೇಶದ ಆಂತರಿಕ ಸುರಕ್ಷತೆಗೆ ಸವಾಲಾಗಿರುವ ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಹಿಂದೂ ಸಮಾಜ ಜಾಗೃತ ವಾಗಿರಬೇಕೆಂದು ಪ್ರಾಂತ ಸಂಚಾಲಕರಾದ ದೋ ಕೇಶವಮೂರ್ತಿ ರವರು ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ನಡೆದ ಹಿಂದೂ ಜಾಗರಣ ವೇದಿಕೆಯ ಕರ್ನಾಟಕ ದಕ್ಷಿಣ ಪ್ರಾಂತದ ಕಾರ್ಯಕರ್ತರ 2 ದಿನದ ವಾರ್ಷಿಕ ಸಭೆಯ ಸಮಾರೋಪದಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಅಕ್ರಮ ಬಾಂಗ್ಲಾ ವಲಸಿಗರಿಂದ ರಾಜ್ಯದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಕಾರ್ಮಿಕರ ಸೋಗಿನಲ್ಲಿ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಬೀಡು ಬಿಟ್ಟಿರುವ ಅಕ್ರಮ ಬಾಂಗ್ಲಾ ವಲಸಿಗರರು ಅಕ್ರಮ ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ರಾಜ್ಯದಲ್ಲಿ ನೆಲೆ ಉರುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇವರಿಗೆ ಸ್ಥಳೀಯ ಜಿಹಾದಿ ಮಾನಸಿಕತೆಯ ಮುಸಲ್ಮಾನ ಸಂಘಟನೆಗಳು ಸಹಕಾರಗಳನ್ನು ನೀಡುತ್ತಿದೆ ಎಂದರು.
ಈಗಾಗಲೇ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದುಗಳ ಮೇಲೆ ನಿರಂತರವಾದ ದೌರ್ಜನ್ಯ, ಕೊಲೆ, ಅತ್ಯಾಚಾರ,ಸುಲಿಗೆಗಳು ನಡೆಯುತ್ತಲೇ ಇದೆ. ಮುಂದೊಂದು ದಿನ ಈ ರೀತಿಯ ಘಟನೆಗಳು ನಮ್ಮ ರಾಜ್ಯದಲ್ಲೂ ನಡೆಯಬಹುದು ಎಂಬ ಆತಂಕವು ಗೋಚರಿಸುತ್ತಿದೆ. ಹಾಗಾಗಿ ಜಾಗೃತ ಹಿಂದೂ ಸಮಾಜ ಸಂಘಟಿತರಾಗಿ ರಾಷ್ಟ್ರ ವಿರೋಧಿ, ಹಿಂದೂ ವಿರೋಧಿ, ಸಮಾಜ ವಿರೋಧಿ ಕು ಕೃತ್ಯವನ್ನು ನಡೆಸುವವರ ವಿರುದ್ಧ ಜಾಗೃತರಾದ ಬೇಕಾಗಿದೆ ಎಂದರು.
ಇದು ಮಾತ್ರವಲ್ಲದೆ ನಾರ್ಕೋಟಿಕ್ ಜಿಹಾದಿನ ಮೂಲಕ ಯುವ ಸಮುದಾಯವನ್ನು ವ್ಯಸನಿಗಳನ್ನಾಗಿ ಮಾಡುವುದರ ಹಿಂದೆ ಮುಸಲ್ಮಾನ ಜಿಹಾದಿ ಮಾನಸಿಕತೆಯ ಸಂಘಟನೆಗಳು ವ್ಯವಸ್ಥಿತವಾದ ಷಡ್ಯಂತರವನ್ನು ರೂಪಿಸುತ್ತಿದೆ ಎಂದಿದ್ದಾರೆ.
ಜಾಗೃತ,ಸಂಘಟಿತ ಹಿಂದೂ ಸಮಾಜವು ಎಲ್ಲ ಸವಾಲುಗಳನ್ನು ಎದುರಿಸುವ ಮಾನಸಿಕತೆಗೆ ಮುಂದು ಬರಬೇಕೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಹಿಂದೂ ಜಾಗರಣ ವೇದಿಕೆಯು ಮುಂದಿನ ದಿನಗಳಲ್ಲಿ ಸಮಾಜದ ಜಾಗೃತಿಗಾಗಿ ಜಾಗೃತಿ ಜನಾಂದೋಲನವನ್ನು ರೂಪಿಸುವುದಾಗಿ ತಿಳಿಸಿದ್ದಾರೆ.
























