ಪುತ್ತೂರು: ಪುತ್ತೂರು ತಾಲೂಕಿನ ಕೋಡಿಂಬಾಡಿ ಗ್ರಾಮದ ಕೃಷ್ಣಗಿರಿ-ಚೀಮುಳ್ಳು ಗುಡ್ಡ ಗೇರು ನಡುತೋಪುನಲ್ಲಿ ಬೆಂಕಿ ಅವಘಡ. ಸ್ಥಳದಲ್ಲಿ ಪೋಲಿಸ್ ಇಲಾಖೆ,ಮೆಸ್ಕಾಂ ಇಲ್ಲಾಖೆ ಮತ್ತು ಗೇರು ಅಭಿವೃದ್ಧಿ ನಿಗಮದ ಅಧಿಕಾರಿಗಳು ಉಪಸ್ಥಿತರಿದ್ಧಾರೆ.
ಸಾರ್ವಜನಿಕರು ಅಗ್ನಿಶಾಮಕದವರೊಂದಿಗೆ ಬೆಂಕಿ ನಂದಿಸುವ ಕಾರ್ಯದಲ್ಲಿ ಸಹಕರಿಸುತ್ತಿದ್ದಾರೆ.
ವಿದ್ಯುತ್ ತಂತಿಯಿಂದ ಸಿಡಿದ ಕಿಡಿಯಿಂದ ಬೆಂಕಿ ಹರಡಿರುವ ಬಗ್ಗೆ ಅಂದಾಜಿಸಲಾಗಿದೆ ಪುತ್ತೂರು ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿದ್ದು ಬೆಂಕಿ ನಂದಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ.
ಗುಡ್ಡದ ಬದಿಯಲ್ಲಿ ಮನೆಗಳು ಇದ್ದು, ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.ಸ್ಥಳದಲ್ಲಿ ಗೇರು ಅಭಿವೃದ್ಧಿ ನಿಗಮದ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಬೀಡು ಬಿಟ್ಟಿದ್ದಾರೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹರಡಿದಿರುವ ಸಾಧ್ಯತೆಯ ಬಗ್ಗೆ ಅಂದಾಜಿಸಲಾಗಿದೆ.

























