ತಪಸ್ಯ ಫೌಂಡೇಶನ್ ವತಿಯಿಂದ ಕಳೆದ 4 ವರ್ಷಗಳಿಂದ ಬೀಚ್ ಫೆಸ್ಟಿವಲ್ ಉತ್ಸವ ನಡೆಯುತ್ತಿದ್ದು, ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗಾಗಿ ನೆರವು ನೀಡುತ್ತಿರುವ ತಪಸ್ಯ ಫೌಂಡೇಶನ್ ಪ್ರತಿ ವರ್ಷವೂ ಬೀಚ್ ಫೆಸ್ಟಿವಲ್ ಕಾರ್ಯಕ್ರಮ ಆಯೋಜಿಸುತ್ತಿದೆ.
ಕಳೆದ 3 ವರ್ಷಗಳಿಂದ ಅಖಿಲ ಭಾರತೀಯ ಬೀಚ್ ರೆಸ್ಲಿಂಗ್ ಕಮಿಟಿಯ ಅಧ್ಯಕ್ಷರು ಹಾಗೂ ಕರ್ನಾಟಕ ರೆಸ್ಲಿಂಗ್ ಅಸೋಸಿಯೇಷನ್ ಅಧ್ಯಕ್ಷರಾದ ಬಿ. ಗುಣರಂಜನ್ ಶೆಟ್ಟಿಯವರ ನೇತೃತ್ವದಲ್ಲಿ ಬೀಚ್ ಕುಸ್ತಿ ಪಂದ್ಯಾಟವನ್ನು ನಡೆಸುತ್ತಾ ಬಂದಿರುತ್ತಾರೆ.
ಈ ವರ್ಷದ ಕರ್ನಾಟಕ ಸ್ಟೇಟ್ ಲೆವೆಲ್ ಬೀಚ್ ರೆಸ್ಲಿಂಗ್ ಚಾಂಪಿಯನ್ ಶಿಪ್ -2026 ಮಂಗಳೂರಿನ ತಣ್ಣೀರು ಬಾವಿ ಬೀಚ್ ದಡದಲ್ಲಿ ಉದ್ಘಾಟನೆಗೊಂಡಿತು.
ಉದ್ಘಾಟನಾ ಸಮಾರಂಭದಲ್ಲಿ ಶರವು ಶ್ರೀ ಮಹಾಗಣಪತಿ ದೇವಸ್ಥಾನದ ಟ್ರಸ್ಟಿ ರಾಘವೇಂದ್ರ ಶಾಸ್ತ್ರಿ, ತಪಸ್ಯ ಫೌಂಡೇಷನ್ ಮೆನೇಜಿಂಗ್ ಟ್ರಸ್ಟಿ ಸಬೀತಾ ಆರ್ ಶೆಟ್ಟಿ, ಕರ್ನಾಟಕ ಕುಸ್ತಿ ಸಂಘದ ಉಪಾಧ್ಯಕ್ಷರಾದ ಪ್ರಸಾದ್. ಕೆ. ಶೆಟ್ಟಿ, ಖಜಾಂಚಿ ಶ್ರೀನಿವಾಸ್ ಅಂಗರಕೋಡಿ, ಕರ್ನಾಟಕ ಬೀಚ್ ರೆಸ್ಲಿಂಗ್ ಕಮಿಟಿ ವೈಸ್ ಛೇರ್ಮನ್ ನಿತ್ಯಾನಂದ ಶೆಟ್ಟಿ, ಕನ್ವೆಂನರ್ ಪ್ರಸಾದ್ ಶೆಟ್ಟಿ, ಕರ್ನಾಟಕ ಕುಸ್ತಿ ಸಂಘದ ಮೀಡಿಯಾ ಅಕ್ರೆಡಿಡೇಷನ್ ಸದಸ್ಯರಾದ ರಾಮದಾಸ್ ಶೆಟ್ಟಿ ವಿಟ್ಲ, ಕರ್ನಾಟಕ ಕುಸ್ತಿ ಸಂಘದ ಟೆಕ್ನಿಕಲ್ ಛೇರ್ಮೆನ್ ಡಾ.ಕೆ.ವಿನೋದ್ ಕುಮಾರ್, ನಾಗೇಶ್.ಎಸ್ ಸಿಇಓ, ಕರ್ನಾಟಕ ಕುಸ್ತಿ ಸಂಘ ಕೇಂದ್ರ ಕಛೇರಿ. ಫಾ ವಿಲ್ಫ್ರೈಡ್ ಡಿಸೋಜ, ಲ. ಡಾ.ಗೀತಾ ಪ್ರಕಾಶ್, ನಿವೃತ್ತ ಅಧಿಕಾರಿ ಡಾ. ರಮೇಶ್, ಕರ್ನಾಟಕ ಬೀಚ್ ರೆಸ್ಲಿಂಗ್ ಕಮಿಟಿ ಸದಸ್ಯರಾದ ಕೃಷ್ಣ ಶೆಟ್ಟಿ ತಾರೇಮಾರ್, ಸಿಎ ಎನ್ ಬಿ ಶೆಟ್ಟಿ, ಲ. ರೋನಾಲ್ಡ್ ಗೋಮ್ಸ್ ಉಪಸ್ಥಿತರಿದ್ದರು.
ಜ. 9 ಮತ್ತು 10 ರಂದು ನಡೆಯುವ ಬೀಚ್ ರೆಸ್ಲಿಂಗ್ ನಲ್ಲಿ ರಾಜ್ಯದ ವಿವಿದ ಜಿಲ್ಲೆಗಳಿಂದ ಸುಮಾರು 200 ಕ್ಕೂ ಅಧಿಕ ಕುಸ್ತಿ ಪಟುಗಳು ಮತ್ತು ತೀರ್ಪುಗಾರರು ಭಾಗವಹಿಸಿದ್ದಾರೆ.


























