ತಣ್ಣೀರುಪಂಥ ಗ್ರಾಮದ ಬೋಳ್ನಡ್ಕ ಭಾಗದ ಜನರ ಬಹು ದಿನಗಳ ಬೇಡಿಕೆಯ ರಸ್ತೆ ಅಭಿವೃದ್ಧಿಗೆ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ರೂ. 10 ಲಕ್ಷ ಅನುದಾನ ಒದಗಿಸಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಜಿಲ್ಲೆಯ ಹೆಮ್ಮೆಯ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟರವರಿಗೆ, ಹಾಗೂ ಸಹಕರಿಸಿದ ಜನಪ್ರಿಯ ಶಾಸಕರು, ಅಭಿವೃದ್ಧಿಯ ಹರಿಕಾರ ಶ್ರೀ ಹರೀಶ್ ಪೂಂಜ ಮತ್ತು ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷರಾದ ಧರ್ಮಸ್ಥಳ ಶ್ರೀನಿವಾಸ್ ರಾವ್ ರವರಿಗೆ ಆ ಭಾಗದ ನಾಗರಿಕರು ಅಭಿನಂದನೆಗಳು ಸಲ್ಲಿಸಿದರು.


























