ಉಪ್ಪಿನಂಗಡಿ: ಯುವ ಒಕ್ಕಲಿಗ ಗೌಡ ಸೇವಾ ಸಂಘದ ಉಪ್ಪಿನಂಗಡಿ ವಲಯದ ವ್ಯಾಪ್ತಿಗೆ ಬರುವ ಗ್ರಾಮಗಳಾದ ಕೊಡಿಪ್ಪಾಡಿ, ನೆಕ್ಕಿಲಾಡಿ, ಉಪ್ಪಿನಂಗಡಿ ಹಿರೆಬಂಡಾಡಿ, ಬಜತ್ತೂರು ಗ್ರಾಮಗಳ ಸಮಾಜ ಬಾಂಧವರ ಸಭೆಯು ಸರ್ವೋದಯ ಪ್ರೌಡ ಶಾಲೆ ಪೆರಿಯಡ್ಕ ಯಲ್ಲಿ ನಡೆಯಿತು.
ಸಭೆಯಲ್ಲಿ ಈ ಮೊದಲು ನಿಯೋಜನೆ ಮಾಡಿದ ನಿತೀನ್ ತಾರಿತ್ತಡಿ ಇವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಗೌರವ ಅಧ್ಯಕ್ಷರಾಗಿ ಭರತ್ ಗೌಡ ನಿಡ್ಯ ಕೊಡಿಂಬಾಡಿ
ಪ್ರದಾನ ಕಾರ್ಯದರ್ಶಿಯಾಗಿ ಹರೀಶ್ ಪಟ್ಲ , ಕಾರ್ಯದರ್ಶಿಯಾಗಿ ತಾರಾನಾಥ ಕೊನೆತೋಟ , ಜೊತೆ ಕಾರ್ಯದರ್ಶಿಯಾಗಿ ಉದಯ ಗೌಡ ಅತ್ರಮಜಲು, ಉಪಾಧ್ಯಕ್ಷರಾಗಿ ಗಣೇಶ್ ಗೌಡ ಕರೆಂಕಿ
ಕ್ರೀಡಾ ಕಾರ್ಯದರ್ಶಿಯಾಗಿಸಚಿನ್ ಮುದ್ಯ, ಜೋತೆ ಕ್ರೀಡಾ ಕಾರ್ಯದರ್ಶಿಯಾಗಿ ರಮೇಶ್ ಸಿಂಕ್ರುಕೊಡಂಗೆ ಕೋಶಾಧಿಕಾರಿಯಾಗಿ ಅರ್ಪಿತ್ ಹಿರೆಬಂಡಾಡಿ, ಸಂಘಟನಾ ಕಾರ್ಯದರ್ಶಿಯಾಗಿ ಶಶಿಧರ ಗೌಡ ಮುದ್ಯ
ಇವರುಗಳನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಪುತ್ತೂರು ತಾಲೂಕು ಯುವ ಸಂಘದ ಅಧ್ಯಕ್ಷ ಪ್ರಶಾಂತ್ ಕೆಮ್ಮಾಯಿ, ಕಾರ್ಯದರ್ಶಿ ಗುರುರಾಜ್ ಹೊಸಮನೆ ಹಿರೆಬಂಡಾಡಿ ಉಪ್ಪಿನಂಗಡಿ ವಲಯದ ಉಸ್ತುವಾರಿ ಸುರೇಶ್ ಗೌಡ ಅತ್ರಮಜಲು ಮತ್ತು ತಾಲೂಕು ಪದಾಧಿಕಾರಿಗಳು ಮತ್ತು ಇನ್ನಿತರ ಸದಸ್ಯರು ಉಪಸ್ಥಿತರಿದ್ದರು.


























