ಪುತ್ತೂರು: ಆಂದ್ರಪ್ರದೇಶದಲ್ಲಿ ಜನವರಿ 15 ರಿಂದ ನಡೆಯಲಿರುವ ಜ್ಯೂನಿಯರ್ ವಿಭಾಗ ರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಪುತ್ತೂರು ತಾಲೂಕಿನ ಕುಂಬ್ರದ ಯುವಕ ಅದೀಶ್ ಶೆಟ್ಟಿ ಆಯ್ಕೆಯಾಗಿರುವರು. ಇವರು ಕರ್ನಾಟಕ ತಂಡವನ್ನು ಪ್ರತಿನಿಧಿಸಲಿರುವರು
ಪ್ರಸ್ತುತ ಇವರು ಮಂಗಳೂರಿನ ತೃಷಾ ಕಾಲೇಜಿನ ಬಿ.ಕಾಂ ವಿದ್ಯಾರ್ಥಿ ಆಗಿದ್ದು, ತನ್ನ ಪದವಿ ಪೂರ್ವ ವಿದ್ಯಾಭ್ಯಾಸವನ್ನು ಮಂಗಳೂರಿನ ಶಕ್ತಿ ಕಾಲೇಜ್ ನಲ್ಲಿ , ಹೈಸ್ಕೂಲ್ ವಿದ್ಯಾಭ್ಯಾಸವನ್ನು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿಯೂ ಮತ್ತು ಪ್ರಾಥಮಿಕ ವಿದ್ಯಾಭ್ಯಾಸವನ್ನು ಕೋಡಿಂಬಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಪೂರೈಸಿದ ವಿದ್ಯಾರ್ಥಿಯಾಗಿರುವರು.
ಕೋಡಿಂಬಾಡಿ ಬರೆಮೇಲು ದಿನೇಶ್ ಶೆಟ್ಟಿ ಮತ್ತು ಶ್ರೀಮತಿ ಆಶಾ ದಿನೇಶ್ ಶೆಟ್ಟಿ ದಂಪತಿಯ ಸುಪುತ್ರನಾಗಿರುವ ಇವರು ಪ್ರಸ್ತುತ ಕುಂಬ್ರ ಬಡೆಕ್ಕೋಡಿ ನಿವಾಸಿಯಾಗಿರುವರು.



























