ಬಂಟ್ವಾಳ ತಾಲೂಕು ಮಣಿನಾಲ್ಕೂರು ಶ್ರೀ ಮಹಾವಿಷ್ಣು ದೇವಸ್ಥಾನ ಇಳಿಯೂರು ಹಾಗೂ ಶ್ರೀ ಮಹಾವಿಷ್ಣು ಭಜನಾ ಮಂಡಳಿ ಇಳಿಯೂರು ಸಹಭಾಗಿತ್ವದಲ್ಲಿ ನಡೆಯುವ 10ನೇ ವರ್ಷದ ನಗರ ಭಜನೆಯ ಮಂಗಳೋತ್ಸವವು ಹಾಗೂ ರಂಗಪೂಜೆಯು ದಿನಾಂಕ 16-01-2026 ರ ಶುಕ್ರವಾರ ರಾತ್ರಿ ಶ್ರೀ ಕ್ಷೇತ್ರದಲ್ಲಿ ನಡೆಯಲಿದೆ.
ಕ್ಷೇತ್ರದ ಪ್ರಧಾನ ಅರ್ಚಕರಾದ ಶ್ರೀ ಸುಧೀರ್ ಭಟ್ ಇವರ ನೇತೃತ್ವದಲ್ಲಿ ಸಂಜೆ 5-30ಕ್ಕೆ ಭಜನಾ ಸಂಕೀರ್ತಣೆ ಪ್ರಾರಂಭಗೊಂಡು 7-30 ಕ್ಕೆ ಸರಿಯಾಗಿ ಶ್ರೀ ಮಹಾವಿಷ್ಣು ದೇವರಿಗೆ ಮಹಾಪೂಜೆ ನಡೆದು 8-00 ಗಂಟೆಗೆ ರಂಗಪೂಜೆ ಜರಗಿ 10ನೇ ವರ್ಷದ ನಗರ ಭಜನೆಯ ಮಂಗಳೊತ್ಸವ ನಡೆಯಲಿದೆ. ಬಳಿಕ ಪ್ರಸಾದ ವಿತರಣೆ ನಡೆದು ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.


























