ಕೋಡಿಂಬಾಡಿ: ಕೋಡಿಂಬಾಡಿ ಗ್ರಾಮದ ಕೋಡಿಯಾಡಿಗುತ್ತು ಧರ್ಮ ಚಾವಡಿಯ ದೈವಗಳ ಪ್ರತಿಷ್ಠಾ ದಿನದ ವಾರ್ಷಿಕ ಪೂಜೆಯು ವಿಜೃಂಭಣೆಯಿಂದ ವೇದಮೂರ್ತಿ ಶ್ರೀ ವತ್ಸ ಕೆದಿಲಾಯ ಶಿಬರ-ಮುಂಡೂರು ಇವರ ನೇತೃತ್ವದಲ್ಲಿ ನಡೆಯಿತು.
ಪ್ರಾರಂಭದಲ್ಲಿ ಬೆಳಿಗ್ಗೆ ಪಲ್ಲತ್ತಾರು ನಾಗ ಸನ್ನಿದಿಯಲ್ಲಿ ನಾಗ ತಂಬಿಲ ನಡೆದು,ನಂತರ ಧರ್ಮ ಚಾವಡಿಯಲ್ಲಿ ಗಣಹೋಮ ನಡೆದು,ಕಲಶ ಶುದ್ಧಿ ಮತ್ತು ದೈವಗಳಿಗೆ ತಂಬಿಲ ಸೇವೆಯು ನಡೆಯಿತು. ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.
ಕೋಡಿಯಾಡಿಗುತ್ತು ವಾರಿಸೇನ ಜೈನ್ ದಂಪತಿಗಳು ಮತ್ತು ಕುಟುಂಬಸ್ಥರು ಅತಿಥಿಗಳನ್ಮು ಸ್ವಾಗತಿಸಿ ,ಸತ್ಕರಿಸಿದರು.ನೂರಾರು ಜನ ಭಕ್ತಾದಿಗಳು ಭಾಗವಹಿಸಿ ಪುಣ್ಯ ಪ್ರಸಾದ ಸ್ವೀಕರಿಸಿ ಪುನೀತರಾದರು.






















