ಬೆಳಾಲು ಶ್ರೀ ಧ.ಮಂ. ಪ್ರೌಢಶಾಲೆಯಲ್ಲಿ ಟ್ರಾಫಿಕ್ ನಿಯಮ ಹಾಗೂ ಸುರಕ್ಷಿತ ಚಾಲನೆ ಮತ್ತು ಸೈಬರ್ ವಂಚನೆ, ಮಾದಕವಸ್ತು ಮುಕ್ತ ಸಮಾಜ ಕುರಿತು ಜಾಗೃತಿ ಕಾರ್ಯಕ್ರಮ ಫೆ.2ರಂದು ಜರಗಿತು.
ಬೆಳ್ತಂಗಡಿ ತಾಲೂಕು ಕಾನೂನು ನೆರವು ಸಮಿತಿ ಮತ್ತು ಉಜಿರೆ ಬೆಳಾಲು ‘ಶೌರ್ಯ’ ವಿಪತ್ತು ನಿರ್ವಹಣೆ ಘಟಕದ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಕಿಶೋರ್ ಪಿ. ಸಂಪನ್ಮೂಲ ವ್ಯಕ್ತಿಯಾಗಿದ್ದರು. ಸಂಚಾರ ಪೊಲೀಸ್ ಸಿಬ್ಬಂದಿ ಅಭಿಜಿತ್, ಬೆಳ್ತಂಗಡಿ ಶೌರ್ಯ ವಿಪತ್ತು ನಿರ್ವಹಣೆ ಘಟಕದ ಮಾಸ್ಟರ್ ಅವಿನಾಶ್ ಭಿಡೆ ಉಪಸ್ಥಿತರಿದ್ದರು. ಊರಿನ ಆಟೊ ಚಾಲಕರು ಮತ್ತು ವಾಹನ ಮಾಲಕರು ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು. ಮುಖ್ಯೋಪಾಧ್ಯಾಯ ಜಯರಾಮ ಮಯ್ಯ ಸ್ವಾಗತಿಸಿದರು. ಶೌರ್ಯ ತುರ್ತು ಸ್ಪಂದನಾ ಘಟಕದ ಸಂಯೋಜಕ ಸುಲೈಮಾನ್ ಭೀಮಂಡೆ ಕಾರ್ಯಕ್ರಮ ನಿರ್ವಹಿಸಿದರು.

























