ಪುತ್ತೂರು: ಬನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ದಿನಾಂಕ 16.02.2026 ನೇ ಸೋಮವಾರ ಬೆಳಿಗ್ಗೆ ಗಂಟೆ 10.00ಕ್ಕೆ ಬನ್ನೂರು ಗ್ರಾಮದ ಅಡೆಂಚಿಲಡ್ಕ ಎಂಬಲ್ಲಿ ನಿರ್ಮಾಣವಾದ ಹಿಂದೂ ರುದ್ರ ಭೂಮಿಯ ಲೋಕಾರ್ಪಣೆ ಕಾರ್ಯಕ್ರಮ ಜರಗಲಿದೆ. ಈ ಒಂದು ಕಾರ್ಯಕ್ರಮಕ್ಕೆ ಸಂಘ ಸಂಸ್ಥೆಗಳ ಸದಸ್ಯರು, ಅಂಗನವಾಡಿ ಕಾರ್ಯಕರ್ತರು ಆಶಾ ಕಾರ್ಯಕರ್ತೆಯರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಸದಸ್ಯರುಗಳು, ಶ್ರೀ ಶಕ್ತಿ ಗುಂಪಿನ ಸದಸ್ಯರು, ಸಂಜೀವಿನಿ ಒಕ್ಕೂಟದ ಸದಸ್ಯರು ಮತ್ತು ಗ್ರಾಮಸ್ಥರೆಲ್ಲರನ್ನು ಈ ಪುಣ್ಯ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕೆಂದು ಬನ್ನೂರು ಪಂಚಾಯತಿನ ಅಧ್ಯಕ್ಷರು / ಉಪಾಧ್ಯಕ್ಷರು ಸರ್ವ ಸದಸ್ಯರು, ಅಧಿಕಾರಿ ವರ್ಗ ಸಿಬ್ಬಂದಿ ವರ್ಗದವರು ಈ ಮೂಲಕ ವಿನಂತಿಸಿಕೊಂಡಿದ್ದಾರೆ.
ಹಿಂದೂ ರುದ್ರ ಭೂಮಿಗಾಗಿ ಚಿಗುರು ಗೆಳೆಯರ ಬಳಗದ ನಿರಂತರ ಹೋರಾಟ:
ಬನ್ನೂರು ಪಂಚಾಯತ್ ವ್ಯಾಪ್ತಿಯಲ್ಲಿ ಪ್ರಪ್ರಥಮವಾಗಿ ಹಿಂದೂ ರುದ್ರ ಭೂಮಿಗಾಗಿ ಜಾಗ ಮೀಸಲಿಡಬೇಕೆಂದು ಚಿಗುರು ಗೆಳೆಯರ ಬಳಗ ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿದೆ. ಈ ಬಗ್ಗೆ ಅಹೋರಾತ್ರಿ ಧರಣಿ, ಗ್ರಾಮ ಪಂಚಾಯತಿಯಿಂದ, ಜಿಲ್ಲಾಡಳಿತ, ಸಂಸದರು, ಸಚಿವರವರೆಗೂ ಬೆಂಬಿಡದೆ ಮಾಡಿದ ಹೋರಾಟಕ್ಕೆ ಇಂದು ಫಲಶ್ರುತಿ ಬಂದಂತಿದೆ. ಇದೀಗ ಬನ್ನೂರು ಪಂಚಾಯತ್ ಮುತುವರ್ಜಿ ಮತ್ತು ದಾನಿಗಳ ಸಹಕಾರದಿಂದ ಹಿಂದೂ ರುದ್ರ ಭೂಮಿಯು ಲೋಕಾರ್ಪಣೆಗೊಲ್ಲಲು ಸಿದ್ಧಗೊಂಡಿದೆ.





























