ಪುತ್ತೂರು: ಚಿಕ್ಕಮುಡ್ನೂರು ಏಕ ಬಳಕ್ಕ ಪರಿಸರದಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಅವಘಡ. ಪುತ್ತೂರು ತಾಲೂಕು ಚಿಕ್ಕಮೂಡ್ನೂರು ಗ್ರಾಮದ ಏಕ ಬಳಕ್ಕ ಪರಿಸರದಲ್ಲಿ ವಿದ್ಯುತ್ ತಂತಿ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಅವಘಡ ಸಂಭವಿಸಿದೆ.
ಬೆಂಕಿ ಬಿದ್ದ ಸ್ಥಳದಲ್ಲಿ ಸ್ಥಳೀಯರಾದ ಲ್ಯಾನ್ಸಿ ಬಳಕ್ಕ, ಅಜಿತ್ ಪ್ರಸಾದ್ ರೈ ಮತ್ತು ಉಮೇಶ್ ದೇವಾಡಿಗ ಅವರಿಗೆ ಸೇರಿದ ಗದ್ದೆಯು ಬೆಂಕಿಗೆ ಆಹುತಿಯಾಗಿದೆ.
ಸ್ಥಳದಲ್ಲಿ ಲ್ಯಾನ್ಸಿ ಬಳಕ್ಕ ಇವರಿಗೆ ಸೇರಿದ ಗದ್ದೆಯಲ್ಲಿ 40 ಫೀಟ್ ನಷ್ಟು ಪಿವಿಸಿ ಪೈಪುಗಳು ಮತ್ತು ಗದ್ದೆಯಲ್ಲಿ ಮಾಡಿದ್ದ ವೀಳ್ಯದ ಎಲೆಗಳ ಸಾಲುಗಳು ಸಂಪೂರ್ಣ ನಾಶವಾಗಿದೆ. ಬೆಂಕಿ ಬಿದ್ದ ಸಮಯದಲ್ಲಿ ಕರೆಂಟ್ ಇಲ್ಲದಿರುವುದರಿಂದ ಸ್ಥಳೀಯರು ಮರದ ಗೆಲ್ಲುಗಳನ್ನು ಬಳಸಿ ಬೆಂಕಿ ನಂದಿಸಲು ಹರ ಸಾಹಸ ಪಡಬೇಕಾಯಿತು.



























