ಪುತ್ತೂರು: ಕೆಯ್ಯೂರು ಗ್ರಾಮದ ಅಂಕತ್ತಡ್ಕ ಪೂಂಜಿರೋಟಿ ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ಸುತ್ತು ಗೋಪುರವನ್ನು ಶಾಸಕ ಅಶೋಕ್ ರೈ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಶಾಸಕರು ಸರಕಾರಿ ಜಾಗದಲ್ಲಿ ನಿರ್ಮಾಣವಾಗಿರುವ ಎಲ್ಲಾ ಧರ್ಮಿಯರ ಮಂದಿರಗಳನ್ನು ಸಕ್ರಮ ಗೊಳಿಸುವಲ್ಲಿ ಹೊಸ ಕಾನೂನು ಮಾಡಿ ಆ ಮೂಲಕ ಎಲ್ಲಾ ಧರ್ಮದವರ ಧಾರ್ಮಿಕ ಕೇಂದ್ರಗಳ ಸಕ್ರಮ ನಡೆಯಲಿದೆ ಇದು ಕಾಂಗ್ರೆಸ್ ಹಿಂದುತ್ವವಾಗಿದೆ ಎಂದು ಹೇಳಿದರು.
ಹಿಂದುತ್ವ ದ ಹೆಸರಿನಲ್ಲಿ ಮತ ಕೇಳಿ ಅಧಿಕಾರ ಪಡೆದವರು ಈ ಕೆಲಸವನ್ನು ಮಾಡಿಲ್ಲ . ಧರ್ಮ ,ದೇವರ ಹೆಸರಲ್ಲಿ ಎಂದೂ ರಾಜಕೀಯ ಮಾಡದ ಕಾಂಗ್ರೆಸ್ ಸರಕಾರ ಇದೀಗ ಹಿಂದುತ್ವಕ್ಕೆ ದೊಡ್ಡ ಕೊಡುಗೆಯನ್ನು ನೀಡಿದೆ. ಜನರು ನಕಲಿ ಯಾವುದು ಒರಿಜಿನಲ್ ಯಾವುದು ಎಂಬುದನ್ನು ಇನ್ನಾದರೂ ಅರಿತುಕೊಳ್ಳಲಿ ಎಂದು ಹೇಳಿದರು.
ಕೆಯ್ಯೂರು ದೇವಸ್ಥಾನದ ಅಧ್ಯಕ್ಷರಾದ ಎ ಕೆ ಜಯರಾಂ ರೈ,ಹಿರಿಯರಾದ ಸಂತೋಷ್ ರೈ ಇಳಂತಾಜೆ ,ಬ್ಲಾಕ್ ಅಧ್ಯಕ್ಷ ಕೆ ಪಿ ಆಳ್ವ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ಶಿವನಾಥ ರೈ ಮೇಗಿನಗುತ್ತು, ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಬ್ರಹ್ನ ಬೈದರ್ಕಳ ನೇತ್ರಾವತಿ ಗರಡಿ ಅಂಕತ್ತಡ್ಕ ಇದರ ಅಧ್ಯಕ್ಷರಾದ ಕೆಎಸ್ ಪದ್ಮನಾಭ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು.
ಸೇರಿದಂತೆ ಗರಡಿಯ ಪ್ರಮುಖರು ಇದ್ದರು. ಜಯಂತಪೂಜಾರಿ ಕೆಂಗುಡೇಲು ಸ್ವಾಗತಿಸಿ, ಪೂರ್ಣೇಶ್ಭಂಡಾರಿ ವಂದಿಸಿದರು.



























