ಕುಂಡದಬೆಟ್ಟು: ಬೆಳ್ತಂಗಡಿ ಶಾಸಕರಾದ ಶ್ರೀ ಹರೀಶ್ ಪೂಂಜಾರವರು ಮಾ 15 ರಂದು ರೂ.10.00 ಲಕ್ಷ ವೆಚ್ಚದಲ್ಲಿ ಕಾಂಕ್ರಿಟೀಕರಣಗೊಂಡ ಸಂತ ಜಾನ್ ಪೌಲ್ ಚರ್ಚ್ ಕುಕ್ಕೆಡಿ ಗ್ರಾಮದ ಕುಂಡದಬೆಟ್ಟು ಇದರ ಸಂಪರ್ಕ ರಸ್ತೆಯನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಂಡಲ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷರಾದ ಸೆಬಾಸ್ಟಿಯನ್, ಸಂತ ಜಾನ್ ಪೌಲ್ ಚರ್ಚ್ ನಾ ಫಾದರ್ ಸನ್ನಿ ಅಲಾಪಟ್, ಟ್ರಸ್ಟಿಗಳಾದ ಅಲ್ವಿನ್, ಜಾರ್ಜ್, ದಿನು ಹಾಗೂ ಪ್ರಮುಖರು, ನಾಗರಿಕರು ಉಪಸ್ಥಿತರಿದ್ದರು.



























