ಪುತ್ತೂರು: ಇಲ್ಲಿನ ಏಲ್ಮುಡಿ ಬಳಿ ರಿಕ್ಷಾ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಶರತ್ ಪೂಜಾರಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಪುತ್ತೂರಿನಿಂದ ದರ್ಬೆ ಕಡೆಗೆ ಸಾಗುತ್ತಿದ್ದ ಬೈಕ್ ಹಾಗೂ ದರ್ಬೆಯಿಂದ ಪುತ್ತೂರು ಕಡೆಗೆ ಬರುತ್ತಿದ್ದ ರಿಕ್ಷಾ ಏಳುಡಿ ಸಮೀಪ ಮುಖಾಮುಖಿಯಾಗಿ ಡಿಕ್ಕಿ ಹೊಡೆದವು.
ಈ ಸಂದರ್ಭ ರಿಕ್ಷಾ ಚಾಲಕ ವಾಹನವನ್ನು ಆಕಸ್ಮಿಕವಾಗಿ ತಪ್ಪು ದಿಕ್ಕಿಗೆ ತಿರುಗಿಸಿದ್ದರಿಂದ ಬೈಕ್ ಸವಾರ ಶರತ್ ಪೂಜಾರಿ ನಿಯಂತ್ರಣ ತಪ್ಪಿ ರಿಕ್ಷಾಗೆ ಡಿಕ್ಕಿ ಹೊಡೆದಿದ್ದಾನೆ ಎಂದು ತಿಳಿದುಬಂದಿದೆ.
ಡಿಕ್ಕಿಯ ಪರಿಣಾಮವಾಗಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯರು ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಂಗಳೂರು ವೆನ್ಲಾಕ್ ಆಸ್ಪತ್ರೆ ಗೆ ದಾಖಲಿಸಿದರೆ . ತೀವ್ರ ಬಡತನದಲ್ಲಿ ಇರುವ ಕುಟುಂಬ ವದರಿಂದ ಈ ಅಪಘಾತ ಕುಟುಂಬಕ್ಕೆ ಆಘಾತವಾಗಿದೆ.



























