ಪಡುಬಿದ್ರಿ: ಬಾಯಿ ಚಪಲಕ್ಕಾಗಿ ಗೌರವಯುತ ಉಡುಪಿ-ದಕ್ಷಿಣ ಕನ್ನಡ ದಲ್ಲಿ 3,500ಕ್ಕೂ ಅಧಿಕ ಸದಸ್ಯತ್ವ ಹೊಂದಿರುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಛಾಯಾಗ್ರಾಹಕ ಸಂಸ್ಥೆಯನ್ನು ಹೀನಾಯ ಪದ ಬಳಸಿ ಹೀಯಾಳಿಸಿರುವ ಕಂಬಳ ವಿಕ್ಷೀಕ ವಿವರಣೆಗಾರರಾದ ರಾಜೀವ ಶೆಟ್ಟಿ ಎಡೂರು ಇವರು ಸಾರ್ವಜನಿ ಕವಾಗಿ ಛಾಯಾಗ್ರಾಹಕರಲ್ಲಿ ಕ್ಷಮೆ ಯಾಚಿಸಬೇಕು, ಇಲ್ಲವಾದರೆ ಅವರು ಪಾಲ್ಗೊಳ್ಳುವ ಯಾವುದೇ ಕಂಬಳದಲ್ಲಿ ಅವಳಿ ಜಿಲ್ಲೆಗಳ ಛಾಯಾಗ್ರಾಹಕರು ಒಂದಾಗಿ ಅವರ ವಿರುದ್ಧ ಪ್ರತಿಭಟಿಸುವ ಎಚ್ಚರಿಕೆಯನ್ನು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿ ಯೇಷನ್ (ರಿ.) ಇದರ ಅಧ್ಯಕ್ಷರಾದ ನವೀನ್ ರೈ ಪುತ್ತೂರು ಎಚ್ಚರಿಸಿದ್ದಾರೆ.
ಕಾಪು ಮಾರಿಗುಡಿ ವಠಾರದಲ್ಲಿ ಕಂಬಳ ಸಮಿತಿಯ ರಾಜ್ಯಾಧ್ಯಕ್ಷ ಬೆಳಪು ಡಾ.ದೇವಿಪ್ರಸಾದ್ ಶೆಟ್ಟಿಯವರಿಗೆ ಈ ಬಗ್ಗೆ ಮನವಿಪತ್ರ ಸಲ್ಲಿಸಿ ಮಾತನಾಡಿದರು. ಕಂಬಳದ ಗೌರವಯುತ ವಾದ ವೇದಿಕೆಯಲ್ಲಿ ಒಂದಿಬ್ಬರ ಚಪ್ಪಾಳೆ ಗಿಟ್ಟಿಸಿಕೊಳ್ಳಲು ಬಾಯಿ ಗೆ ಬಂದಂತೆ ಮಾತನಾಡುವುದು ಸರಿಯಲ್ಲ, ತಾವು ಹಾಸ್ಯದ ಹಿನ್ನಲೆಯಲ್ಲಿ ಸಾರ್ವಜನಿಕವಾಗಿ ಒಂದು ವೃತ್ತಿಯನ್ನಾಗಲೀ ವ್ಯಕ್ತಿಯನ್ನಾಗಲೀ ವಿನಾ ಕಾರಣ ಹೀಯಾಳಿಸುವುದು ತಮ್ಮ ಗೌರವಯುತ ವ್ಯಕ್ತಿತ್ವಕ್ಕೆ ಶೋಭೆ ತರದು, ಛಾಯಾಗ್ರಾಹಕರು ತಮಗೆ ನೀಡಿದ ಜವಾಬ್ದಾರಿಯನ್ನು ನಿರ್ವಾಹಿಸಲು ವೇದಿಕೆಯಲ್ಲಿ ಒದ್ದಾಟ ನಡೆಸುತ್ತಾರೆಯೇ ವಿನಃ ಯಾರಿಗೂ ತೊಂದರೆ ನೀಡುವ ಉದ್ದೇಶ ಹೊಂದಿರುವುದಿಲ್ಲ ಎಂಬುದನ್ನು ರಾಜೀವ ಶೆಟ್ಟಿಯವರು ಅರ್ಥ ಮಾಡಿಕೊಳ್ಳ ಬೇಕಾಗಿದೆ. ಮೈಕ್ ಹಿಡಿದಾಕ್ಷಣ ತಾನು ಏನು, ಎಷ್ಟು ಎಂಬುದನ್ನು ಅವರು ಮರೆತು ವರ್ತಿಸುವುದು ಸರಿಯಲ್ಲ, ಮೊಬೈಲ್ ಹಾಗೂ ಆಧುನಿಕ ತಂತ್ರಜ್ಞಾನದ
ದುರುಪಯೋಗದಿಂದ ಛಾಯಾಗ್ರಾಹಕರು ತಮ್ಮ ಕುಟುಂಬ ನಿರ್ವಹಿಸಲು ತೊಂದರೆ ಅನುಭವಿಸುತ್ತಿರುವ ಈ ಕಾಲಘಟ್ಟದಲ್ಲಿ ಇಂಥವರ ಅರಳು-ಮರಳು ಮಾತು ನಮ್ಮನ್ನು ಮತ್ತಷ್ಟು ಪ್ರಪಾ ತಕ್ಕೆ ತಳ್ಳುವಂತ್ತಾಗಿದೆ. ಸಮಾಜದಲ್ಲಿ ಛಾಯಾಗ್ರಾಹಕರು ಗೌರವ ವನ್ನು ಕಳೆದುಕೊಳ್ಳುವ ಸ್ಥಿತಿಗೆ ತಲುಪುವಂತ್ತಾಗಿದೆ.
ನಮ್ಮ ಈ ಮನವಿಗೆ ಮನ್ನಣೆ ದೊರಕದೇ ಇದಲ್ಲಿ ಪ್ರತಿಭಟನೆ ಅನಿವಾರ್ಯ ವಾದೀತು ಎಂಬುದಾಗಿ ನವೀನ್ ರೈಎಚ್ಚರಿಸಿದ್ದಾರೆ. ಛಾಯಾಗ್ರಾ ಹಕರು ನೀಡಿದ ಮನವಿಯನ್ನು ಸ್ವೀಕರಿಸಿ ಮಾತನಾಡಿದ ಬೆಳಪು ಡಾ. ದೇವಿಪ್ರಸಾದ್ ಶೆಟ್ಟಿ, ಛಾಯಾಗ್ರಾಹಕರು ಮತ್ತು ಕಂಬಳಗಳ ಮಧ್ಯೆ ಅವಿನಾಭಾವ ಸಂಭಂದವಿದೆ, ಯಾರಿಗೆ ನೋವಾದರೂ ಅದು ಎಲ್ಲರ ನೋವು, ಹೀಗಾಗ ಬಾರದಿತ್ತು, ಯಾವುದೋ ಕೆಟ್ಟ ಗಳಿಗೆಯಲ್ಲಿ ಆಗಿದೆ, ಈ ಬಗ್ಗೆ ರಾಜೀವ ಶೆಟ್ಟಿ ಎಡೂರು ಇವರ ಲ್ಲಿ ಮಾತನಾಡಿದ್ದೇನೆ, ಅವರು ಹೇಳುವಂತೆ ನಾನು ಯಾವುದೇ ದೇಶದಿಂದ ಆ ಮಾತನ್ನು ಆಡಿಲ್ಲ, ನನ್ನಿಂದ ಛಾಯಾ ಮಿತ್ರರಿಗೆ ನೋವಾಗಿದ್ದರೆ ಮುಂದಿನ ಕಂಬಳದಲ್ಲಿ ಈ ಬಗ್ಗೆ ಸ್ಪಷ್ಟಿಕರಿಸು ವುದಾಗಿ ಹೇಳಿದ್ದಾರೆ ಎಂಬುದಾಗಿ ಶೆಟ್ಟಿ ತಿಳಿಸಿದ್ದಾರೆ.
ಈ ಸಂದರ್ಭ ಅವಳಿ ಜಿಲ್ಲೆಗಳ ಛಾಯಾಗ್ರಾಹಕ ಪ್ರಮುಖರಾದ ಆನಂದ ಬಂಟ್ವಾಳ, ಅಜಯ್ ಮಂಗಳೂರು, ದೇವರಾಜ್ ಸುರತ್ಕಲ್, ಲೋಕೇಶ್ ಸುಬ್ರಹ್ಮಣ್ಯ, ಅಮೃತ್ ಬೀಜಾಡಿ, ದಿವಾಕರ್ ಹಿರಿಯ, ಸಂತೋಷ್ ಕಾಪು, ಬಾಲಕೃಷ್ಣ ಪೂಜಾರಿ, ಕೃಷ್ಣ ರಾವ್, ಸುಬ್ರಹ್ಮಣ್ಯ ಐತಾಳ್, ವಿನೋದ್, ಪ್ರಕಾಶ್ ಆಚಾರ್ಯ, ಪ್ರಮೋದ್ ಸುವರ್ಣ, ಸುಧೀರ್ ಶೆಟ್ಟಿ, ಸುರೇಶ್ ಎರ್ಮಾಳು, ಪ್ರವೀಣ್ ಕೊರೆಯಾ, ಹರೀಶ್ ಉಡುಪಿ ಸಹಿತ ಹತ್ತಾರು ಸಂಖ್ಯೆಯಲ್ಲಿ ಸದಸ್ಯರು ಉಪಸ್ಥಿತರಿದ್ದರು.
ವೇಣೂರು ಕಂಬಳದಲ್ಲಿ, ಕಂಬಳ ನಿರೂಪಣೆ ಮಾಡುವಾಗ ಕಂಬಳದ ಹಿರಿಯ ನಿರೂಪಣೆಗಾರ ರಾಜೀವ ಶೆಟ್ಟಿ ಎಡ್ತುರೂ ಛಾಯಾಗ್ರಾಹಕರ ಬಗ್ಗೆ ನಿಂದನಾತ್ಮಕವಾಗಿ ಮಾತಾಡಿ ಛಾಯಾಗ್ರಹಕಾರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ನಿರೂಪಣೆ ಮಾಡುವಾಗ ತನ್ನ ಬಾಯಿ ಚಪಲಕ್ಕೆ ಛಾಯಾಗ್ರಾಹಕರ ಬಗ್ಗೆ ಆಕ್ಷೇಪಾದ ಹೇಳಿಕೆಗಳನ್ನು ನೀಡಿದ್ದಾರೆ.
ದ. ಕ. ಮತ್ತು ಉಡುಪಿ ಜಿಲ್ಲೆಯಲ್ಲಿ 3500ಕ್ಕೂ ಅಧಿಕ ಮಂದಿ ಸದಸ್ಯತ್ವವನ್ನು ಹೊಂದಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಛಾಯಾಗ್ರಹಕ ಸಂಸ್ಥೆಯನ್ನು ಈ ರೀತಿ ಹೀನಾಯ ಶಬ್ದ ಬಳಸಿ ಮಾತಾಡಿದ್ದು ಎಷ್ಟರ ಮಟ್ಟಿಗೆ ಸರಿ.
ಇದು ನಿಮ್ಮಂತ ಹಿರಿಯ ನಿರೂಪಣೆಗಾರರಿಗೆ ಶೋಭೆ ತರುವಂತದ್ದೇ ಎಂಬುದು ಛಾಯಾಗ್ರಾಹಕರ ಪ್ರಶ್ನೆ..?
ಈಗಿನ ಕಾಲದಲ್ಲಿ ಅಲ್ಪ ಸ್ವಲ್ಪ ಫೋಟೋ ಗ್ರಾಫಿ & ವಿಡಿಯೋ ಗ್ರಾಫಿ ಕಲಿತ ಮತ್ತು ನಮ್ಮ ಛಾಯಾಗ್ರಾಹಕರ ಎಸೋಸಿಯೇಷನ್ ನಲ್ಲಿ ಸದಸ್ಯತ್ವ ಪಡೆಯದ ಕೆಲವರಿಂದ ಈ ರೀತಿಯ, ವೇದಿಯಲ್ಲಿ ಪೂರ್ತಿ ಅಡ್ಡ ನಿಲ್ಲುವಂತ ಕೆಲಸ ಆಗಿರಬಹುದು. ಆದರೆ ನಮ್ಮ ಸಂಘದ ಸದಸ್ಯರು ಯಾವತ್ತೂ ಇಂತ ಕೆಲಸ ಮಾಡಿರೋದಿಲ್ಲ.
ಅವರು ತಮ್ಮ ಕೆಲಸದಲ್ಲಿ ಅತ್ಯಂತ ಗೌರವಪೂರ್ವಕವಾಗಿ ನಡೆದುಕೊಳ್ಳುತ್ತಾರೆ.
ಆದುದರಿಂದ ಸಾರ್ವಜನಿಕರೂ ತಮ್ಮ ತಮ್ಮ ಕಾರ್ಯಕ್ರಮದ ಫೋಟೋ. ವಿಡಿಯೋ ನೀಡುವಾಗ ಆತನ ಬಗ್ಗೆ ತಿಳಿದು. ಆತ ಫೋಟೋಗ್ರಾಫರ್ ಎಸೋಸಿಯೇಷನ್ ಸದಸ್ಯನೇ ಎಂದು ತಿಳಿದು ಆರ್ಡರ್ ನೀಡಿದರೆ, ತಮ್ಮ ಕಾರ್ಯಕ್ರಮ ದಲ್ಲಿ ಏನಾದರೂ ಫೋಟೋಗ್ರಾಫರ್ ಕಡೆಯಿಂದ ಯಾವುದಾದರು ತೊಂದರೆ ಆದಲ್ಲಿ ನಮ್ಮ ಸಂಘ ಖಂಡಿತವಾಗಿಯೂ ನಿಮ್ಮ ಸಹಾಯಕ್ಕೆ ಇರುತ್ತದೆ.
ಆದುದರಿಂದ ಒಬ್ಬ ಫೋಟೋ ಗ್ರಾಫರ್ ನ್ನು ನೀವೂ ಗೌರವವಾಗಿ ನಡೆಸಿಕೊಂಡರೆ, ನಾವು ಕೂಡ ನಿಮ್ಮ ಕಾರ್ಯಕ್ರಮ ದಲ್ಲಿ ಗೌರವವಾಗಿ ನಡೆಕೊಳ್ಳುತ್ತೇವೆ ಎಂಬುದು ಫೋಟೋ ಗ್ರಾಫರ್ಸ್ ಮನದ ಇಂಗಿತ.





























