ಕುಂಬಳೆ ಮುಸ್ರಾಳ ಪಟ್ಟದ ಸೀಮೆಯಲ್ಲಿ ರಾಜನ್ ದೈವದ ಚಾಕ್ರಿಯನ್ನು ಹಲವಾರು ವರ್ಷಗಳಿಂದ ವಂಶಪಾರಂಪರ್ಯವಾಗಿ ನಿಷ್ಠೆಯಿಂದ ನಿರ್ವಹಿಸುತ್ತಿದ್ದ ನಾಗಪ್ಪ ಪರವ ಪಡುಮಲೆ ಸೀಮೆಯ ಪ್ರಮುಖ ದೈವಗಳದ ಜುಮಾದಿ,ಪಿಲಿಚಾಮುಂಡಿ, ಉಳ್ಳಾಕ್ಲು,ಬಿರ್ನಾಳ್ವ ಮುಂತಾದ ದೈವಗಳ ಚಾಕಿರಿ ನಡೆಸುತ್ತಿದ್ದರು.
ಹಿರಿಯ ದೈವ ನರ್ತಕರಾದ ಇವರು ಶ್ರದ್ಧೆಯಿಂದ ನಿಷ್ಠೆಯ ಮೂಲಕ ಹೆಸರುವಾಸಿಯಾಗಿದ್ದರು ಅಲ್ಪಕಾಲದ ಅಸೌಖ್ಯದಿಂದ ಇಂದು ಇಹಲೋಕ ತ್ಯಜಿಸಿದರು ಈ ಭಾಗದ ದೈವರಾಧನೆಯಲ್ಲಿ ಪ್ರಮುಖ ಕೊಂಡಿಯೊಂದು ಕಳಚಿದೆ.