ಪುತ್ತೂರು: ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ ಟ್ರಸ್ಟ್ ನಡಿಯಲ್ಲಿ ಗುಜರಾತ್ ನ ಪ್ರಸಿದ್ಧ ಉದ್ಯಮಿಗಳೂ ಸಮಾಜ ಸೇವಕರೂ ಆದ ಶ್ರೀ ದಯಾನಂದ ಬೋಂಟ್ರ ರವರಿಂದ ನವಂಬರ್ 23, 2025 ರಂದು ಶಂಕುಸ್ಥಾಪನೆಗೊಂಡು ನಿರ್ಮಾಣಗೊಳ್ಳುತ್ತಿರುವ ಯಾತ್ರಿ ನಿವಾಸ ಸಮುದಾಯ, ಭವನ, ಆಯುರ್ವೇದಿಕ್ ಕೇಂದ್ರದ ಕಾಮಗಾರಿ ಗಳು ಭರದಿಂದ ಸಾಗುತ್ತಿದ್ದು ಒಂದು ವರ್ಷದ ಒಳಗೆ ಕಾಮಗಾರಿಯನ್ನು ಮುಗಿಸುವಂತಹ ಆಲೋಚನೆಯಲ್ಲಿರುವ ಶ್ರೀ ಕ್ಷೇತ್ರದ ಆಡಳಿತ ಮಂಡಳಿ ಹಾಗೂ ಟ್ರಸ್ಟ್ ನ ಪದಾಧಿಕಾರಿಗಳು ಆಗುತ್ತಿರುವ ಕಾಮಗಾರಿಯನ್ನು ವೀಕ್ಷಿಸಿದರು ಈ ಸಂದರ್ಭದಲ್ಲಿ ಟ್ರಸ್ಟ್ ನ ಅಧ್ಯಕ್ಷರಾದ ಸಂಜೀವ ಪೂಜಾರಿ ಬಿರ್ವ, ಗೆಜ್ಜೆ ಗಿರಿಯ ಗೌರವಾಧ್ಯಕ್ಷರುಗಳಾದ ಪೀತಾಂಬರ ಹೇರಾಜೆ, ಜಯಂತ ನಡುಬೈಲು, ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷರಾದ ರವಿ ಪೂಜಾರಿ ಚಿಲಿಂಬಿ, ಪ್ರಧಾನ ಕಾರ್ಯದರ್ಶಿಯಾದ ಡಾ. ರಾಜಾರಾಮ್ ಕೆ ಬಿ, ಟ್ರಸ್ಟ್ ನ ಕೋಶಾಧಿಕಾರಿಯದ ದೀಪಕ್ ಕೋಟ್ಯಾನ್, ಆಡಳಿತ ಸಮಿತಿಯ ಸದಸ್ಯರುಗಳಾದ ನಾರಾಯಣ ಪೂಜಾರಿ ಮಚ್ಚಿನ, ನಿತ್ಯಾನಂದ ನಾವರ, ರಾಜೇಂದ್ರ ಚಿಲಿಂಬಿ, ಜಯರಾಮ ಬಂಗೇರ ಹೆರಾಜೆ, ನಾರಾಯಣ ಮಡ್ಯಂಗಳ ನಿತೀಶ್ ಶಾಂತಿವನ, ಮುಂತಾದವರು ಉಪಸ್ಥಿತರಿದ್ದರು.





























