ಉಡುಪಿ: ಏಪ್ರಿಲ್ 06: ಉಡುಪಿ ಜಿಲ್ಲೆಯ ಸಾಸ್ತಾನ ಮೂಡಹಡು ಗ್ರಾಮದ ಖ್ಯಾತ ಹಾಗೂ ಯುವ ಫೋಟೋಗ್ರಾಫರ್ ಒಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಏಪ್ರಿಲ್ 05 ಭಾನುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಫೋಟೋಗ್ರಫಿ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ ಅವರು, ಪ್ರತಿಭಾವಂತ ಫೋಟೋಗ್ರಾಫರ್ ಆಗಿ ಉತ್ತಮ ಹೆಸರು ಗಳಿಸಿದ್ದರು. ಜೊತೆಗೆ ಕ್ರಿಕೆಟ್ ಆಟಗಾರನಾಗಿಯೂ ಗುರುತಿಸಿಕೊಂಡಿದ್ದರು.
ಶನಿವಾರ ಕೊಮೆ ಬೀಚ್‌ನಲ್ಲಿ ಫೋಟೋ ಶೂಟ್ ಮುಗಿಸಿ ರಾತ್ರಿ ಸುಮಾರು 11 ಗಂಟೆಗೆ ಮನೆಗೆ ಬಂದಿದ್ದ ಅವರು, ಭಾನುವಾರ ಬೆಳಿಗ್ಗೆ ಮನೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ.
ಈ ಸಂಬಂಧ ಮೃತರ ಪತ್ನಿ ಅಕ್ಷತಾ ನೀಡಿದ ದೂರಿನ ಮೇರೆಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಗೆ ಕಾರಣವೇನು ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.




























