ಪುತ್ತೂರು: ಇತಿಹಾಸ ಪ್ರಸಿದ್ಧ . ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆಗೆ ಗುರುವಾರ ಬೆಳಿಗ್ಗೆ ಧ್ವಜಾರೋಹಣ ನಡೆಯಿತು.
ವರ್ಷಂಪ್ರತಿಯಂತೆ ಏಪ್ರಿಲ್ 10ರಂದು ಬೆಳಿಗ್ಗೆ ದೇವರ ಉತ್ಸವ ಬಲಿಯೊಂದಿಗೆ ಧ್ವಜಾರೋಹಣ ಕಾರ್ಯ ನಡೆಸಲಾಯಿತು.ಕುಂಟಾರು ರವೀಶ ತಂತ್ರಿ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನ ಜರಗಿತು.
ಕರಾವಳಿ ಜಿಲ್ಲೆ ಯಲ್ಲಿ ಅತೀ ಹೆಚ್ಚು ಜನ ಸೆರುವ ಜಾತ್ರೆ ಅದು ಪುತ್ತೂರು ಶ್ರೀ ಮಹಾಳಿಗೇಶ್ವರ ದೇವರ ಜಾತ್ರೆ ಅತೀ ಹೆಚ್ಚು ಕಟ್ಟೆ ಪೂಜೆ ನಡೆಯುವ ಜಾತ್ರೆ ಏಪ್ರಿಲ್ 10 ರಿಂದ 20 ರ ವರೆಗೆ ನಡೆಯುವ ಈ ವಿಜೃಂಭಣೆ ಯಿಂದ ನಡೆಯಲಿದೆ.
ದೇವಸ್ಥಾನದ ಹೊರಭಾಗದಲ್ಲಿ ಶ್ರೀ ಮಹಾಲಿಂಗೇಶ್ವರ ದೇವರ ಸೇವಾರ್ಥಿಗಳಿಂದ ಉಚಿತವಾಗಿ ಸೇವಾ ರೂಪದಲ್ಲಿ ಕಬ್ಬಿನ ಹಾಲು , ಪಾನಕ ವ್ಯವಸ್ಥೆ, ಜ್ಯೂಸ್, ಇನ್ನಿತರ ತಂಪು ಪಾನೀಯಗಳನ್ನು ಬಂದ ಭಕ್ತಾದಿಗಳಿಗೆ ನೀಡಿದರು .































