ಬೆಂಗಳೂರು: ಕಳೆದ ಒಂದೂವರೆ ವರ್ಷದಿಂದ ಸ್ಥಗಿತವಾಗಿದ್ದ ಎಪಿಎಲ್ ಕಾರ್ಡ್ ವಿತರಣೆಗೆ ಮರುಚಾಲನೆ ನೀಡಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನಿರ್ಧರಿಸಿದೆ. ಜೂನ್ ತಿಂಗಳಲ್ಲಿಹೊಸ ಕಾರ್ಡ್ಗಳಿಗೆ ಅರ್ಜಿ ಆಹ್ವಾನಿಸಲು ಇಲಾಖೆ ತೀರ್ಮಾನಿಸಿದೆ.
ಹೊಸ ಕಾರ್ಡ್ಗಾಗಿ ಆನ್ಲೈನ್ನಲ್ಲೇ ಅರ್ಜಿ ಸಲ್ಲಿಸುವುದು ಕಡ್ಡಾಯ. ಈ ವೆಬ್ ಪೋರ್ಟಲ್ ಅನ್ನು ಸುಮಾರು ಒಂದೂವರೆ ವರ್ಷದಿಂದಲೂ ಸ್ಥಗಿತಗೊಳಿಸಲಾಗಿತ್ತು. ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಜೂನ್ ಮೊದಲ ವಾರದಲ್ಲಿ ವೆಬ್ಪೋರ್ಟಲ್ನಲ್ಲಿಅರ್ಜಿ ಸಲ್ಲಿಕೆಗೆ ಅನುವು ಮಾಡಿಕೊಡಲಾಗುವುದು ಎಂದು ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಒಂದೂವರೆ ವರ್ಷದಿಂದಲೂ ಬಂದ್
ಕಳೆದ ವರ್ಷ ಮೇ ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಿಗದಿಯಾಗಿತ್ತು. ಅದಕ್ಕೂ ಮೊದಲು ಚುನಾವಣಾ ತಯಾರಿಗಳನ್ನು ನಡೆಸಲಾಗುತ್ತಿತ್ತು. ಜತೆಗೆ ಆಗ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದ ಅವಧಿಯೂ ಮುಗಿದಿತ್ತು. ಹೀಗಾಗಿ, ಸುಮಾರು ಒಂದೂವರೆ ವರ್ಷದಿಂದಲೂ ಎಪಿಎಲ್ ಕಾರ್ಡ್ಗೆ ಅರ್ಜಿಗಳನ್ನು ಸಲ್ಲಿಸಲು ಆನ್ಲೈನ್ ಪೋರ್ಟಲ್ನಲ್ಲಿಅವಕಾಶ ಕಲ್ಪಿಸಿರಲಿಲ್ಲ.
ಲಕ್ಷಾಂತರ ಮಂದಿ ಕಾಯುತ್ತಿದ್ದಾರೆ
ಹೊಸದಾಗಿ ರಚನೆಯಾದ ಕಾಂಗ್ರೆಸ್ ಸರ್ಕಾರವು ಗೃಹಲಕ್ಷ್ಮಿ, ಗೃಹಜ್ಯೋತಿ ಮತ್ತಿತರ ಯೋಜನೆಗಳನ್ನು ಜಾರಿಗೆ ತಂದಿತು. ಇವುಗಳ ಲಾಭ ಪಡೆಯಲು ಲಕ್ಷಾಂತರ ಜನ ಅರ್ಜಿ ಸಲ್ಲಿಸಲು ಕಾಯುತ್ತಿದ್ದರು. ಆದರೆ, ಯೋಜನೆಗೆ ಹೆಚ್ಚಿನ ಅರ್ಜಿಗಳು ಬಂದೇ ಬರುತ್ತವೆ ಎಂದು ಅರಿತ ಸರ್ಕಾರ, ಆಗಲೂ ಆನ್ಲೈನ್ ಪೋರ್ಟಲ್ ಅನ್ನೇ ಬಿಡಲಿಲ್ಲ.
ಪದೇ ಪದೇ ಸರ್ವರ್ ಸಮಸ್ಯೆ
ಕಳೆದ ವರ್ಷ ಮಧ್ಯ ಭಾಗದಲ್ಲಿ ರೇಷನ್ ಕಾರ್ಡ್ ತಿದ್ದುಪಡಿಗೆ ಸಾಕಷ್ಟು ಬಾರಿ ಸರ್ಕಾರ ಅವಕಾಶ ನೀಡಿತ್ತು. ಆದರೆ, ಸರ್ವರ್ ಸಮಸ್ಯೆಯಿಂದ ಫಲಾನುಭವಿಗಳಿಗೆ ತಿದ್ದುಪಡಿ ಸಾಧ್ಯವಾಗುತ್ತಿರಲಿಲ್ಲ. ಇನ್ನು ಹೊಸ ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಸುವುದಕ್ಕೂ ಸಾಕಷ್ಟು ಮಂದಿ ಕಾಯುತ್ತಿದ್ದರೂ ಸರ್ಕಾರ ಅವಕಾಶ ನೀಡಿರಲಿಲ್ಲ.
ರೇಷನ್ ಕಾರ್ಡ್ನ ಸ್ಥತಿ ತಿಳಿಯಲು ಈ ವೆಬ್ಸೈಟ್ಗೆ ಭೇಟಿ ನೀಡಿ ಇಲ್ಲಿದೆ ಲಿಂಕ್ https://ahara.kar.nic.in/WebForms/Show_RationCard.aspx
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಂಬಂಧಿಸಿದ ಮಾಹಿತಿಗಳಿಗೆ https://ahara.kar.nic.in/Home/EServices