ಇಟಲಿಯಲ್ಲಿ ಯೊಂದು ಬೆಳಕಿಗೆ ಬಂದಿದೆ. ವೃದ್ಧೆ ಮಾಡಿದ ಒಂದು ತಪ್ಪು ನಾಲ್ಕು ತಿಂಗಳ ಮಗುವಿನ ಜೀವಕ್ಕೆ ಕಂಟಕವಾಗಿದೆ. ಮೊಮ್ಮಗು ಕುಡಿಯುವ ಹಾಲಿಗೆ ಅಜ್ಜಿ ತಪ್ಪಾಗಿ ಆಲ್ಕೋಹಾಲ್ ಬೆರೆಸಿದ್ದು, ಅರ್ಧ ಹಾಲು ಕುಡಿದ ಮಗು ಅಳಲು ಆರಂಭಿಸಿದೆ. ಮಗುವಿನ ಆರೋಗ್ಯದಲ್ಲಿ ಏರುಪೇರಾಗಿದ್ದು, ಅನುಮಾನಗೊಂಡು ಉಳಿದ ಹಾಲಿನ ವಾಸನೆ ನೋಡಿದಾಗ ವೃದ್ಧೆಗೆ ಹಾಲಿನಲ್ಲಿ ಮಿಶ್ರಣವಾಗಿರುವುದು ತಿಳಿದುಬಂದಿದೆ. ಇದರಿಂದ ಅಘಾತಕೊಳಗಾದ ವೃದ್ಧೆ ಕೂಡಲೇ ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನೆಯಿಂದ ಕೋಮಾ ಸ್ಥಿತಿಗೆ ತಲುಪಿದ್ದ ಮಗು ನಂತರ ಬೇತರಿಸಿಕೊಂಡಿದ್ದು, ಸದ್ಯ ಮಗು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಮಗುವಿಗೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಮಗುವಿನ ಸ್ಥಿತಿಯನ್ನು ಸಂಪೂರ್ಣವಾಗಿ ಪರಿಶೀಲಿಸಿದ ನಂತರ ಮಗುವಿನ ಅಜ್ಜಿ ವಿರುದ್ಧ ಪ್ರಕರಣ ದಾಖಲಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.