ಬಂಟ್ವಾಳ: ಪೋಷಕರ ಎದುರೇ ಮಕ್ಕಳಿಬ್ಬರು ನೀರುಪಾಲಾಗಿದ್ದಾರೆ. ದಕ್ಷಿಣ ಕನ್ನಡದ ಬಂಟ್ವಾಳದ ನಾವೂರು ಎಂಬಲ್ಲಿ ಈ ದುರಂತ ನಡೆದಿದೆ. ಉಳ್ಳಾಲ ನಿವಾಸಿಗಳಾದ ಅನ್ಸಾರ್ ಎಂಬುವವರ ಪುತ್ರಿ ಆಶ್ರಾ (11), ಇಲಿಯಾಸ್ ಎಂಬುವವರ ಪುತ್ರಿ ನಾಶಿಯಾ (14) ನೀರುಪಾಲಾಗಿದ್ದಾರೆ.
ಎರಡು ಕುಟುಂಬಗಳು ತಮ್ಮ ಮಕ್ಕಳೊಂದಿಗೆ ನೇತ್ರಾವತಿ ನದಿ ತೀರಕ್ಕೆ ತೆರಳಿದ್ದರು. ಈ ವೇಳೆ ನೀರಿನಲ್ಲಿ ಆಟವಾಡುವಾಗ ಏಕಾಏಕಿ ಆಕಸ್ಮಿಕವಾಗಿ ಮುಳುಗಿ ಮೃತಪಟ್ಟಿದ್ದಾರೆ. ಪೋಷಕರ ಮುಂದೆಯೇ ಬಾಲಕಿಯರು ನೀರುಪಾಲಾಗಿದ್ದಾರೆ. ಈಜು ಬಾರದ ಹಿನ್ನೆಲೆಯಲ್ಲಿ ಮಕ್ಕಳನ್ನು ರಕ್ಷಿಸಲಾಗದೆ ಪೋಷಕರು ಅಸಹಾಯಕರಾಗಿದ್ದರು.


























