ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಿದ್ದು ಕೇಂದ್ರ ಸರಕಾರವಲ್ಲ. ಸರ್ವೋಚ್ಛ ನ್ಯಾಯಲಯದ ಆದೇಶದಂತೆ ಹಿಂದೂಗಳ ಟ್ರಸ್ಟ್ನಿಂದ ನಿರ್ಮಿಸಿದ್ದು. ಅಯೋಧ್ಯೆ ರಾಮ ಮಂದಿರ ಕೆಡವುತ್ತೇನೆ ಎನ್ನುವುದು ಸರ್ವೋಚ್ಚ ನ್ಯಾಯಲಯದ ಆದೇಶ ಉಲ್ಲಂಘಿಸಿದಂತೆ ಎಂದು ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಅಯೋಧ್ಯೆ ರಾಮ ಮಂದಿರ ಕೆಡವುತ್ತೇನೆ ಎನ್ನುವುದು ಸರ್ವೋಚ್ಚ ನ್ಯಾಯಲಯದ ಆದೇಶ ಉಲ್ಲಂಘಿಸಿದಂತೆ ಎಂದರು.
ದೇಶದಲ್ಲಿರುವ ಬಹುತೇಕ ಪ್ರಾರ್ಥನಾ ಮಂದಿರಗಳು ಆಯಾ ಸಮುದಾಯಗಳಿಗೆ ನಿರ್ವಹಣೆ ಹಾಗೂ ಆಡಳಿತದ ಹೊಣೆ ನೀಡಲಾಗಿದೆ. ಆದರೆ, ಹಿಂದೂಗಳ ದೇವಾಲಯಗಳ ಆಡಳಿತವನ್ನು ಮಾತ್ರ ಧಾರ್ಮಿಕ ದತ್ತಿ ಇಲಾಖೆ ಮೂಲಕ ಸರಕಾರ ನಿಯಂತ್ರಣ ಮಾಡುತ್ತಿದೆ. ಇದು ಸರಿಯಾದ ನಿಯಮವಲ್ಲ. ಆಯಾ ಧರ್ಮದ ವ್ಯಾಪ್ತಿಗೆ ಒಳಪಡುವ ದೇವಾಲಯಗಳನ್ನು ಅವರ ಆಡಳಿತಕ್ಕೆ ನೀಡುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಸರಕಾರ ಎಲ್ಲೂ ಆ ಆದೇಶವನ್ನು ಜಾರಿಗೆ ತರುತ್ತಿಲ್ಲ. ಇದು ತಕ್ಷಣದಿಂದ ಜಾರಿಗೆ ಆಗಬೇಕು. ಅಷ್ಟೇ ಅಲ್ಲದೆ ಹಿಂದೂಗಳ ಸಂಖ್ಯೆ ಕುಸಿಯುತ್ತಿದೆ. ಇದರ ಬಗ್ಗೆ ಯೋಚನೆ ಮಾಡಬೇಕಾದ ಸನ್ನಿವೇಶ ನಿರ್ಮಾಣವಾಗಿದೆ. ದೇಶದಲ್ಲಿ ಸಮಾನ ನಾಗರಿಕ ಕಾಯಿದೆ ಜಾರಿಯಾದರೆ ಇಂತಹ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಆದಷ್ಟು ಬೇಗನೇ ನಾಗರಿಕ ಕಾಯಿದೆ ಮಸೂದೆ ಮಂಡನೆಯಾಗಿ ಜಾರಿಯಾಗಬೇಕು ಎಂದರು.
ಐದಾರು ಶತಮಾನಗಳಿಂದ ಹಾಕಿಕೊಂಡಿದ್ದ ಮಂದಿರ ನಿರ್ಮಾಣದ ಕನಸು ಸದ್ಯ ನನಸಾಗಿದೆ. ಇಲ್ಲಿಗೆ ನಮ್ಮ ಕಾರ್ಯ ಮುಗಿತು ಎಂದು ಸುಮ್ಮನೆ ಕುಳಿತುಕೊಳ್ಳುವ ಹಾಗಿಲ್ಲ. ಮಂದಿರ ನಿರ್ಮಾಣ ಮಾಡಿದ್ದು, ದೊಡ್ಡ ಕಾರ್ಯವಲ್ಲ. ಅದನ್ನು ಸೂರ್ಯ ಚಂದ್ರರು ಇರುವವರೆಗೂ ಉಳಿಸಿಕೊಂಡು ಹೋಗುವುದು ದೊಡ್ಡ ಸವಾಲಿನ ಕೆಲಸವಾಗಿದೆ. ಮಂದಿರದ ಮೇಲೆ ಯಾವುದೇ ರೀತಿಯ ದಾಳಿಯಾಗದಂತೆ, ಮಂದಿರಕ್ಕೆ ಧಕ್ಕೆಯಾಗದಂತೆ ಸಂರಕ್ಷಣೆ ಮಾಡಿಕೊಂಡು ಹೋಗುವುದು ಪ್ರತಿಯೊಬ್ಬ ಭಾರತೀಯ, ಅದರಲ್ಲೂ ಮುಖ್ಯವಾಗಿ ಪ್ರತಿಯೊಬ್ಬ ಹಿಂದೂವಿನ ಕೆಲಸವಾಗಿದೆ. ಆ ಕೆಲಸವನ್ನು ಎಲ್ಲ ಹಿಂದೂಗಳು ಮಾಡಬೇಕಾಗಿದೆ. ಆದರೆ, ಹಿಂದೂಗಳು ಹಿಂದೂಗಳಾಗಿ ಉಳಿದರೆ ಮಾತ್ರ ಈ ಕೆಲಸ ಸಾಧ್ಯವಾಗುತ್ತದೆ ಎಂದು ಹೇಳಿದರು.
ಹಿಂದೂ ಧರ್ಮ ಹಾಗು ಬ್ರಾಹ್ಮಣರ ಮೇಲೆ ದಬ್ಬಾಳಿಕೆ ಆಗುತ್ತಿದೆ ಅದನ್ನು ನಿಲ್ಲಿಸಬೇಕು. ಹಿಂದೂ ದೇವಾಲಯಗಳನ್ನು ಹಿಂದೂಗಳಿಗೆ ಒಪ್ಪಿಸಬೇಕು. ಇತರ ಧರ್ಮಗಳ ಪ್ರಾರ್ಥನಾ ಮಂದಿರಗಳನ್ನು ಹೇಗೆ ಆಯಾಯ ಧರ್ಮದವರಿಗೆ ನೀಡಲಾಗಿದೆಯೋ ಅದೇ ರೀತಿ ಹಿಂದೂ ದೇವಾಲಯಗಳನ್ನು ಹಿಂದೂಗಳಿಗೆ ಒಪ್ಪಿಸಬೇಕು ಎಂದು ಪೇಜಾವರ ಸ್ವಾಮೀಜಿ ಹೇಳಿದ್ದಾರೆ.
ಹಿಂದೂ ಧರ್ಮ ಉಳಿಯಬೇಕು. ರಾಷ್ಟ್ರ, ದೇಶ ಪ್ರೇಮ ಉಳಿಸಬೇಕು, ದೇಶದ ಎಲ್ಲಾ ಕಡೆ ಹನುಮ ದೇವರ ಮೂರ್ತಿ ಪ್ರತಿಷ್ಠಾಪನೆಯಾಗಬೇಕು ಎಂದು ಪೇಜಾವರ ಶ್ರೀಗಳು ತಿಳಿಸಿದರು.