ಆರ್‌ಸಿಬಿ ನೀಡಿದ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ತಂಡಕ್ಕೆ ಆರಂಭದಿಂದಲೇ ಸಂಕಷ್ಟಕ್ಕೆ ಸಿಲುಕುವಂತೆ ಆರ್‌ಸಿಬಿ ತಂಡ ಬೌಲಿಂಗ್ ಮಾಡಿತು. ಪಂಜಾಬ್ ಪರ ಪ್ರಭಸಿಮ್ರಾನ್ ಸಿಂಗ್ 6 ರನ್, ಜಾನಿ ಬೇರ್‌ಸ್ಟೋ 27 ರನ್, ರಿಲ್ಲೆ ರುಸ್ಸೋ 61 ರನ್, ಶಶಾಂಕ್ ಸಿಂಗ್ 37 ರನ್, ಜಿತೇಶ್ ಶರ್ಮಾ 5 ರನ್, ಲೀವಿಂಗ್‌ಸ್ಟನ್ ಶೂನ್ಯ, ಸ್ಯಾಮ್ ಕರನ್ 22 ರನ್, ಅಶುತೋಷ್ ಶರ್ಮಾ 8 ರನ್ ಗಳಿಸುವ ಮೂಲಕ ಪೆವೆಲಿಯನ್ ಪರೇಡ್ ನಡೆಸಿದರು.
ಧರ್ಮಶಾಲಾ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರೆ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ನಿಗದಿತ 20 ಓವರ್‌ಗೆ 7 ವಿಕೆಟ್ ನಷ್ಟಕ್ಕೆ ಬರೋಬ್ಬರಿ 241 ರನ್ ಸಿಡಿಸಿತು. ಈ ಬೃಹತ್ ಮೊತ್ತವನ್ನು ಕಲೆಹಾಕುವಲ್ಲಿ ಪ್ರಮುಖವಾಗಿ ವಿರಾಟ್ ಕೊಹ್ಲಿ ಕಾರಣೀಕರ್ತರಾದರು. ಕೊಹ್ಲಿ 47 ಎಸೆತದಲ್ಲಿ 6 ಸಿಕ್ಸ್ ಮತ್ತು 7 ಫೋರ್ ಮೂಲಕ ಬರೋಬ್ಬರಿ 92 ರನ್ ಸಿಡಿಸಿ ಶತಕ ವಂಚಿತರಾಗಿ ಪೆವೆಲಿಯನ್ ಸೇರಿದರು.
ರಜತ್ ಪಾಟಿದಾರ್ ಆರಂಭದಲ್ಲಿ ಉತ್ತಮ ಸಾಥ್ ನೀಡಿದರು. ಪಾಟಿದಾರ್ ಕೇವಲ 23 ಎಸೆತದಲ್ಲಿ 6 ಸಿಕ್ಸ್ ಮತ್ತು 3 ಬೌಂಡರಿ ಸಹಿತ 55 ರನ್ ಗಳಿಸಿದರೆ, ಕ್ಯಾಮರೂನ್ ಗ್ರೀನ್ ಸಹ 27 ಎಸೆತದಲ್ಲಿ 1 ಸಿಕ್ಸ್ 5 ಫೋರ್ ಮೂಲಕ 46 ರನ್ ಗಳಿಸಿ ಮಿಂಚಿದರು. ಉಳಿದಂತೆ ದಿನೇಶ್ ಕಾರ್ತಿಕ್ 18 ರನ್, ನಾಯಕ ಫಾಫ್ ಡುಪ್ಲೇಸಿಸ್ 9 ರನ್, ವಿಲ್ ಜ್ಯಾಕ್ಗಸ್ 12 ರನ್, ದಿನೇಶ್ ಕಾರ್ತಿಕ್ 18 ರನ್, ಮಹಿಪಾಲ್ ಲೋಮ್ರೋರ್ ಶೂನ್ಯ ಹಾಗೂ ಸ್ವಪ್ನಿಲ್ ಸಿಂಗ್ 1 ರನ್ ಸಿಡಿಸಿದರು.
ಅತ್ತ ಪಂಜಾಬ್ ಕಿಂಗ್ಸ್ ಬೌಲರ್‌ಗಳು ಹರ್ಷಲ್ ಪಟೇಲ್ 3 ವಿಕೆಟ್, ವಿದ್ವತ್ ಕಾವೇರಪ್ಪ 2 ಮತ್ತು ಅರ್ಷದೀಪ್ ಸಿಂಗ್ ಮತ್ತು ಸ್ಯಾಮ್ ಕರನ್ ತಲಾ 1 ವಿಕೆಟ್ ಪಡೆದರು. ಆರ್‌ಸಿಬಿ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ 47 ಎಸೆತಗಳಲ್ಲಿ 7 ಬೌಂಡರಿ ಮತ್ತು 6 ಸಿಕ್ಸರ್‌ಗಳ ನೆರವಿನಿಂದ 92 ರನ್ ಗಳಿಸಿದರು. ಆದರೆ ಈ ಬಾರಿ ಅವರು ಶತಕದ ಸಮೀಪದಲ್ಲಿದ್ದಾಗ ಅರ್ಷದೀಪ್ ಸಿಂಗ್ ಬೌಲಿಂಗ್‌ನಲ್ಲಿ ಕ್ಯಾಚ್ ಪಡೆದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 241 ರನ್ ಗಳಿಸಿ ಪಂಜಾಬ್ ಗೆಲುವಿಗೆ 242 ರನ್ ಗಳ ಸವಾಲನ್ನು ನೀಡಿತು.