ಪುತ್ತೂರು: ಬೈಕ್ ಮತ್ತು ಬಸ್ ಅಪಘಾತ ಬೈಕ್ ಸವಾರ ಮೃತ್ಯು
ಪುತ್ತೂರು ಸಮೀಪದ ಪುರುಷರಕಟ್ಟೆ ಎಂಬಲ್ಲಿ ಇಂದು ಬೆಳಿಗ್ಗೆ ಬೈಕ್ ಮತ್ತು ಕೆಎಸ್ಆರ್ ಟಿ ಸಿ ಬಸ್ ಮಧ್ಯೆ ಅಪಘಾತ ಸಂಭವಿಸಿ ಬೈಕ್ ಸವಾರ ಮೋಕ್ಷಿತ್ ಗೌಡ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.
ಕುಂಡಡ್ಕ ಬಾಳೆಮೂಳೆ ಆನಂದ ಗೌಡರ ಮಗನಾದ ಮೋಕ್ಷಿತ್ ಬಿಂದು ಕಂಪೆನಿಯ ಉದ್ಯೋಗಿಯಾಗಿದ್ದು ಇಂದು ಕೆಲಸಕ್ಕೆ ತೆರಳುವಾಗ ಈ ಭೀಕರ ಅಪಘಾತ ಸಂಭವಿಸಿದೆ.
























