ಬೆಳೆಯುತ್ತಿರುವ ಪುತ್ತೂರು ನಗರ ಪ್ರದೇಶದಲ್ಲಿ ಕಳ್ಳರ ಹಾವಳಿಯು ಹೆಚ್ಚುತ್ತಿದೆ.ಇತ್ತೀಚಿನ ದಿನಗಳಲ್ಲಿ ಹಲವು ದ್ವಿಚಕ್ರ ವಾಹನಗಳ ಕಳವಾಗಿದ್ದರು ಯಾವುದೇ ಸುಳಿವು ಪತ್ತೆಯಾಗದೇ ಇರುವುದರಿಂದ ಭಯದ ವಾತಾವರಣದಲ್ಲಿ ವಾಹನ ಪಾರ್ಕ್ ಮಾಡುವ ಪರಿಸ್ಥಿತಿ ಎದುರಾಗಿದೆ.
ಚಾಲಕಿ ಕಳ್ಳರ ಹಾವಳಿಯು ಸಿಸಿ ಟಿವಿ ಕಣ್ಗಾವಲ ನಿಲುಗಡೆ ಪ್ರದೇಶ ಹೊರತು ಪಡಿಸಿಯೇ ಕಳ್ಳತನ ನಡೆಸುತ್ತಿದ್ದು ಪೋಲಿಸ್ ಇಲಾಖೆಗೆ ತಲೆ ನೋವಿನ ಸಂಗತಿಯಾಗಿದೆ.
ಈ ಹಿಂದೆಯೂ ಪ್ರತಿ ಅಂಗಡಿ, ರಸ್ತೆಗಳ ಇಕ್ಕೆಲಗಳಲ್ಲಿ ಸಿಸಿ ಟಿವಿ ಅಳವಡಿಸುವ ಬಗ್ಗೆ ಮಾಹಿತಿ ನೀಡಿದರು ಫಲಪ್ರದವಾಗದಿರುವುದು ಕಳ್ಳರಿಗೆ ಸುಲಭ ಮಾರ್ಗವಾಗಿದೆ.
ನಿನ್ನೆಯೊಂದು ರೈಲ್ವೆ ಸ್ಟೇಷನ್ ಹತ್ತಿರ ಬುಲೆಟ್ ಬೈಕ್ ಕಳವಾಗಿದ್ದು ಸಂಚಾರಿ ಠಾಣೆಯಲ್ಲಿ ಕೇಸ್ ದಾಖಲಾಗಿದೆ.ಮುಖ್ಯವಾಗಿ ಅದೇಷ್ಟೋ ದೊಡ್ಡ ದೊಡ್ಡ ಕಳ್ಳತನ ಕೇಸ್ ಗಳನ್ನು ಗಂಟೆಗಳ ಒಳಗೆ ಹಿಡಿಯುವ ಚಾಣಕ್ಷರು ಪೋಲಿಸ್ ಇಲಾಖೆಗೆ ಈ ಪುಡಿ ಕಳ್ಳರನ್ನು ಬಂಧಿಸುವಲ್ಲಿ ವಿಫಲರಾಗಿದ್ದಾರೋ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.