ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇ 21ರಂದು ಮಂಗಳೂರಿಗೆ ಆಗಮಿಸಲಿದ್ದು
ನಂತರ ಬೆಳ್ತಂಗಡಿಗೆ ಆಗಮಿಸಲಿದ್ದಾರೆ.
ಬೆಂಗಳೂರಿನಿಂದ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಲಿರುವ ಮುಖ್ಯಮಂತ್ರಿ ಬಂಗೇರ ಕುಟುಂಬಕ್ಕೆ ಸಾಂತ್ವನ ತಿಳಿಸುವ ಸಲುವಾಗಿ ಬೆಳ್ತಂಗಡಿಗೆ ತೆರಳಿ ಮಾಜಿ ಶಾಸಕ ವಸಂತ ಬಂಗೇರ ಅವರ ಉತ್ತರ ಕ್ರಿಯೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕಾಂಗ್ರೆಸ್ ನಲ್ಲಿ ಕರಾವಳಿ ಭಾಗದ ಆಪ್ತರಾಗಿದ್ದ ಬಂಗೇರ ಸಿದ್ದರಾಮಯ್ಯರಿಗೆ ಅಚ್ಚು ಮೆಚ್ಚಿನ ನಾಯಕರಾಗಿದ್ದರು.ಬಂಗೇರರು ಹೇಳಿದ ಯಾವುದೇ ಮಾತಿಗೆ ಇಲ್ಲ ಎನ್ನುವ ತನಕ ಒಡನಾಟ ಬೆಳೆಸಿದವರು ಬಂಗೇರರು.
ಮಧ್ಯಾಹ್ನದ ಬಳಿಕ ಮಂಗಳೂರಿಗೆ ತೆರಳಿ ಅಲ್ಲಿಂದ ವಿಮಾನದ ಮೂಲಕ ಬೆಂಗಳೂರಿಗೆ ಹಿಂದಿರುಗಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.