• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
 ನವತೇಜ ಟ್ರಸ್ಟ್ ಪುತ್ತೂರು,ಅಡಿಕೆ ಪತ್ರಿಕೆ, ಜೆ.ಸಿ.ಐ. ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ಮೇ 24, 25, 26 ರಂದು “ಹಲಸು, ಹಣ್ಣುಗಳ ಮೇಳ”

 ನವತೇಜ ಟ್ರಸ್ಟ್ ಪುತ್ತೂರು,ಅಡಿಕೆ ಪತ್ರಿಕೆ, ಜೆ.ಸಿ.ಐ. ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ಮೇ 24, 25, 26 ರಂದು “ಹಲಸು, ಹಣ್ಣುಗಳ ಮೇಳ”

May 21, 2024
ಧನು ಪೂಜೆಗೆ ಹೊರಟ ಬಾಲಕ ಶವವಾಗಿ ಪತ್ತೆ

ಧನು ಪೂಜೆಗೆ ಹೊರಟ ಬಾಲಕ ಶವವಾಗಿ ಪತ್ತೆ

January 14, 2026
ಪುತ್ತೂರಿನ ಯುವಕ ಅದೀಶ್ ಶೆಟ್ಟಿ ಜ್ಯೂನಿಯರ್ ಕಬಡ್ಡಿಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ಪುತ್ತೂರಿನ ಯುವಕ ಅದೀಶ್ ಶೆಟ್ಟಿ ಜ್ಯೂನಿಯರ್ ಕಬಡ್ಡಿಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

January 14, 2026
ಬೆಳ್ತಂಗಡಿ: ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಉಜಿರೆಯಲ್ಲಿ ಬೃಹತ್ ರಕ್ತದಾನ ಶಿಬಿರ

ಬೆಳ್ತಂಗಡಿ: ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಉಜಿರೆಯಲ್ಲಿ ಬೃಹತ್ ರಕ್ತದಾನ ಶಿಬಿರ

January 13, 2026
ಬೆಳ್ತಂಗಡಿ: ಬೆಳಾಲು ಗ್ರಾಮ ಪಂಚಾಯತ್ ಮಕ್ಕಳ ಗ್ರಾಮ ಸಭೆ

ಬೆಳ್ತಂಗಡಿ: ಬೆಳಾಲು ಗ್ರಾಮ ಪಂಚಾಯತ್ ಮಕ್ಕಳ ಗ್ರಾಮ ಸಭೆ

January 13, 2026
ಬೆಳಾಲು ದೊಂಪದ ಬಲಿ ಉತ್ಸವ ಸಮಿತಿಯಿಂದ ಆಮಂತ್ರಣ ಪತ್ರಿಕೆ ಬಿಡುಗಡೆ

ಬೆಳಾಲು ದೊಂಪದ ಬಲಿ ಉತ್ಸವ ಸಮಿತಿಯಿಂದ ಆಮಂತ್ರಣ ಪತ್ರಿಕೆ ಬಿಡುಗಡೆ

January 13, 2026
ಕರ್ನಾಟಕ ಸ್ಟೇಟ್ ಬೀಚ್ ರೆಸ್ಲಿಂಗ್ ಚೇರ್ ಮೆನ್ ಆಗಿ ನಿತ್ಯಾನಂದ ಶೆಟ್ಟಿ ದೇಲಂತಿಮಾರ್ ಆಯ್ಕೆ

ಕರ್ನಾಟಕ ಸ್ಟೇಟ್ ಬೀಚ್ ರೆಸ್ಲಿಂಗ್ ಚೇರ್ ಮೆನ್ ಆಗಿ ನಿತ್ಯಾನಂದ ಶೆಟ್ಟಿ ದೇಲಂತಿಮಾರ್ ಆಯ್ಕೆ

January 13, 2026
ಪುತ್ತೂರು: ಹೃದಯಾಘಾತದಿಂದ ಸರ್ವೆ ಗ್ರಾಮದ ಯುವಕ ನಿಧನ

ಪುತ್ತೂರು: ಹೃದಯಾಘಾತದಿಂದ ಸರ್ವೆ ಗ್ರಾಮದ ಯುವಕ ನಿಧನ

January 13, 2026
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಣಿಯೂರು ವಲಯದ  ಒಕ್ಕೂಟದವರಿಂದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಕೋರಿಂಜ ಇಲ್ಲಿಯ ವಾರ್ಷಿಕ ಜಾತ್ರೆಯ ಪ್ರಯುಕ್ತ ಶ್ರದ್ಧಾ ಕೇಂದ್ರ ಸ್ವಚ್ಛತಾ ಕಾರ್ಯಕ್ರಮ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಣಿಯೂರು ವಲಯದ ಒಕ್ಕೂಟದವರಿಂದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಕೋರಿಂಜ ಇಲ್ಲಿಯ ವಾರ್ಷಿಕ ಜಾತ್ರೆಯ ಪ್ರಯುಕ್ತ ಶ್ರದ್ಧಾ ಕೇಂದ್ರ ಸ್ವಚ್ಛತಾ ಕಾರ್ಯಕ್ರಮ

January 12, 2026
ಉಪ್ಪಿನಂಗಡಿ ವಲಯದ ಯುವ ಒಕ್ಕಲಿಗ ಗೌಡ ಸೇವಾ ಸಂಘದ ಪದಾಧಿಕಾರಿಗಳ ಆಯ್ಕೆ  ಅಧ್ಯಕ್ಷರಾಗಿ ನೀತಿನ್ ತಾರಿತ್ತಡಿ   ಪ್ರದಾನ ಕಾರ್ಯದರ್ಶಿಯಾಗಿ ಹರೀಶ್ ಪಟ್ಲ

ಉಪ್ಪಿನಂಗಡಿ ವಲಯದ ಯುವ ಒಕ್ಕಲಿಗ ಗೌಡ ಸೇವಾ ಸಂಘದ ಪದಾಧಿಕಾರಿಗಳ ಆಯ್ಕೆ ಅಧ್ಯಕ್ಷರಾಗಿ ನೀತಿನ್ ತಾರಿತ್ತಡಿ ಪ್ರದಾನ ಕಾರ್ಯದರ್ಶಿಯಾಗಿ ಹರೀಶ್ ಪಟ್ಲ

January 12, 2026
ದಕ್ಷಿಣ ಆಫ್ರಿಕಾದಲ್ಲಿ  ಅಂತ್ಯಕ್ರಿಯೆಯಾಗಲಿದ್ದ  ಲಾಯಿಲದ ದಾಮೋದರ ಗೌಡರವರ  ಮೃತದೇಹವನ್ನು ಊರಿಗೆ ತರುವಲ್ಲಿ ಸಹಕರಿಸಿದ ಸಂಸದ ಬ್ರಿಜೇಶ್ ಚೌಟ ಮತ್ತು ಶಾಸಕ ಹರೀಶ್ ಪೂಂಜ

ದಕ್ಷಿಣ ಆಫ್ರಿಕಾದಲ್ಲಿ ಅಂತ್ಯಕ್ರಿಯೆಯಾಗಲಿದ್ದ ಲಾಯಿಲದ ದಾಮೋದರ ಗೌಡರವರ ಮೃತದೇಹವನ್ನು ಊರಿಗೆ ತರುವಲ್ಲಿ ಸಹಕರಿಸಿದ ಸಂಸದ ಬ್ರಿಜೇಶ್ ಚೌಟ ಮತ್ತು ಶಾಸಕ ಹರೀಶ್ ಪೂಂಜ

January 13, 2026
ತಣ್ಣೀರುಪಂಥ ಗ್ರಾಮದ ಬೋಳ್ನಡ್ಕ ಭಾಗದ ಜನರ ಬಹು ದಿನಗಳ ಬೇಡಿಕೆಯ ರಸ್ತೆ ಅಭಿವೃದ್ಧಿಗೆ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ರೂ.10 ಲಕ್ಷ ಅನುದಾನ ಕಾಂಕ್ರೀಟ್ ರಸ್ತೆ ನಿರ್ಮಾಣ

ತಣ್ಣೀರುಪಂಥ ಗ್ರಾಮದ ಬೋಳ್ನಡ್ಕ ಭಾಗದ ಜನರ ಬಹು ದಿನಗಳ ಬೇಡಿಕೆಯ ರಸ್ತೆ ಅಭಿವೃದ್ಧಿಗೆ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ರೂ.10 ಲಕ್ಷ ಅನುದಾನ ಕಾಂಕ್ರೀಟ್ ರಸ್ತೆ ನಿರ್ಮಾಣ

January 10, 2026
ಮಂಗಳೂರು ತಪಸ್ಯ ಬೀಚ್ ಫೆಸ್ಟಿವಲ್ ನಲ್ಲಿ ಕರ್ನಾಟಕ ಸ್ಟೇಟ್ ಲೆವೆಲ್ ಬೀಚ್ ರೆಸ್ಲಿಂಗ್  ಚಾಂಪಿಯನ್ ಶಿಪ್ -2026

ಮಂಗಳೂರು ತಪಸ್ಯ ಬೀಚ್ ಫೆಸ್ಟಿವಲ್ ನಲ್ಲಿ ಕರ್ನಾಟಕ ಸ್ಟೇಟ್ ಲೆವೆಲ್ ಬೀಚ್ ರೆಸ್ಲಿಂಗ್ ಚಾಂಪಿಯನ್ ಶಿಪ್ -2026

January 10, 2026
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Wednesday, January 14, 2026
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ಪುತ್ತೂರಿನ ಯುವಕ ಅದೀಶ್ ಶೆಟ್ಟಿ ಜ್ಯೂನಿಯರ್ ಕಬಡ್ಡಿಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

    ಪುತ್ತೂರಿನ ಯುವಕ ಅದೀಶ್ ಶೆಟ್ಟಿ ಜ್ಯೂನಿಯರ್ ಕಬಡ್ಡಿಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

    ಬೆಳ್ತಂಗಡಿ: ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಉಜಿರೆಯಲ್ಲಿ ಬೃಹತ್ ರಕ್ತದಾನ ಶಿಬಿರ

    ಬೆಳ್ತಂಗಡಿ: ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಉಜಿರೆಯಲ್ಲಿ ಬೃಹತ್ ರಕ್ತದಾನ ಶಿಬಿರ

    ಬೆಳ್ತಂಗಡಿ: ಬೆಳಾಲು ಗ್ರಾಮ ಪಂಚಾಯತ್ ಮಕ್ಕಳ ಗ್ರಾಮ ಸಭೆ

    ಬೆಳ್ತಂಗಡಿ: ಬೆಳಾಲು ಗ್ರಾಮ ಪಂಚಾಯತ್ ಮಕ್ಕಳ ಗ್ರಾಮ ಸಭೆ

    ಬೆಳಾಲು ದೊಂಪದ ಬಲಿ ಉತ್ಸವ ಸಮಿತಿಯಿಂದ ಆಮಂತ್ರಣ ಪತ್ರಿಕೆ ಬಿಡುಗಡೆ

    ಬೆಳಾಲು ದೊಂಪದ ಬಲಿ ಉತ್ಸವ ಸಮಿತಿಯಿಂದ ಆಮಂತ್ರಣ ಪತ್ರಿಕೆ ಬಿಡುಗಡೆ

    ಕರ್ನಾಟಕ ಸ್ಟೇಟ್ ಬೀಚ್ ರೆಸ್ಲಿಂಗ್ ಚೇರ್ ಮೆನ್ ಆಗಿ ನಿತ್ಯಾನಂದ ಶೆಟ್ಟಿ ದೇಲಂತಿಮಾರ್ ಆಯ್ಕೆ

    ಕರ್ನಾಟಕ ಸ್ಟೇಟ್ ಬೀಚ್ ರೆಸ್ಲಿಂಗ್ ಚೇರ್ ಮೆನ್ ಆಗಿ ನಿತ್ಯಾನಂದ ಶೆಟ್ಟಿ ದೇಲಂತಿಮಾರ್ ಆಯ್ಕೆ

    ಪುತ್ತೂರು: ಹೃದಯಾಘಾತದಿಂದ ಸರ್ವೆ ಗ್ರಾಮದ ಯುವಕ ನಿಧನ

    ಪುತ್ತೂರು: ಹೃದಯಾಘಾತದಿಂದ ಸರ್ವೆ ಗ್ರಾಮದ ಯುವಕ ನಿಧನ

    ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಣಿಯೂರು ವಲಯದ  ಒಕ್ಕೂಟದವರಿಂದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಕೋರಿಂಜ ಇಲ್ಲಿಯ ವಾರ್ಷಿಕ ಜಾತ್ರೆಯ ಪ್ರಯುಕ್ತ ಶ್ರದ್ಧಾ ಕೇಂದ್ರ ಸ್ವಚ್ಛತಾ ಕಾರ್ಯಕ್ರಮ

    ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಣಿಯೂರು ವಲಯದ ಒಕ್ಕೂಟದವರಿಂದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಕೋರಿಂಜ ಇಲ್ಲಿಯ ವಾರ್ಷಿಕ ಜಾತ್ರೆಯ ಪ್ರಯುಕ್ತ ಶ್ರದ್ಧಾ ಕೇಂದ್ರ ಸ್ವಚ್ಛತಾ ಕಾರ್ಯಕ್ರಮ

    ಉಪ್ಪಿನಂಗಡಿ ವಲಯದ ಯುವ ಒಕ್ಕಲಿಗ ಗೌಡ ಸೇವಾ ಸಂಘದ ಪದಾಧಿಕಾರಿಗಳ ಆಯ್ಕೆ  ಅಧ್ಯಕ್ಷರಾಗಿ ನೀತಿನ್ ತಾರಿತ್ತಡಿ   ಪ್ರದಾನ ಕಾರ್ಯದರ್ಶಿಯಾಗಿ ಹರೀಶ್ ಪಟ್ಲ

    ಉಪ್ಪಿನಂಗಡಿ ವಲಯದ ಯುವ ಒಕ್ಕಲಿಗ ಗೌಡ ಸೇವಾ ಸಂಘದ ಪದಾಧಿಕಾರಿಗಳ ಆಯ್ಕೆ ಅಧ್ಯಕ್ಷರಾಗಿ ನೀತಿನ್ ತಾರಿತ್ತಡಿ ಪ್ರದಾನ ಕಾರ್ಯದರ್ಶಿಯಾಗಿ ಹರೀಶ್ ಪಟ್ಲ

    ದಕ್ಷಿಣ ಆಫ್ರಿಕಾದಲ್ಲಿ  ಅಂತ್ಯಕ್ರಿಯೆಯಾಗಲಿದ್ದ  ಲಾಯಿಲದ ದಾಮೋದರ ಗೌಡರವರ  ಮೃತದೇಹವನ್ನು ಊರಿಗೆ ತರುವಲ್ಲಿ ಸಹಕರಿಸಿದ ಸಂಸದ ಬ್ರಿಜೇಶ್ ಚೌಟ ಮತ್ತು ಶಾಸಕ ಹರೀಶ್ ಪೂಂಜ

    ದಕ್ಷಿಣ ಆಫ್ರಿಕಾದಲ್ಲಿ ಅಂತ್ಯಕ್ರಿಯೆಯಾಗಲಿದ್ದ ಲಾಯಿಲದ ದಾಮೋದರ ಗೌಡರವರ ಮೃತದೇಹವನ್ನು ಊರಿಗೆ ತರುವಲ್ಲಿ ಸಹಕರಿಸಿದ ಸಂಸದ ಬ್ರಿಜೇಶ್ ಚೌಟ ಮತ್ತು ಶಾಸಕ ಹರೀಶ್ ಪೂಂಜ

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ಪ್ರಾದೇಶಿಕ ಉಪ್ಪಿನಂಗಡಿ

 ನವತೇಜ ಟ್ರಸ್ಟ್ ಪುತ್ತೂರು,ಅಡಿಕೆ ಪತ್ರಿಕೆ, ಜೆ.ಸಿ.ಐ. ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ಮೇ 24, 25, 26 ರಂದು “ಹಲಸು, ಹಣ್ಣುಗಳ ಮೇಳ”

by ಪ್ರಜಾಧ್ವನಿ ನ್ಯೂಸ್
May 21, 2024
in ಉಪ್ಪಿನಂಗಡಿ, ಕಡಬ, ಧರ್ಮಸ್ಥಳ, ಪುತ್ತೂರು, ಪ್ರಾದೇಶಿಕ, ಬಂಟ್ವಾಳ, ಬೆಳ್ತಂಗಡಿ, ಬೆಳ್ಳಾರೆ, ಮಂಗಳೂರು, ಮೂಡಬಿದಿರೆ, ರಾಜ್ಯ, ವಿಟ್ಲ, ಸುಬ್ರಹ್ಮಣ್ಯ, ಸುಳ್ಯ
0
 ನವತೇಜ ಟ್ರಸ್ಟ್ ಪುತ್ತೂರು,ಅಡಿಕೆ ಪತ್ರಿಕೆ, ಜೆ.ಸಿ.ಐ. ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ಮೇ 24, 25, 26 ರಂದು “ಹಲಸು, ಹಣ್ಣುಗಳ ಮೇಳ”
10
SHARES
29
VIEWS
ShareShareShare

ಪುತ್ತೂರು: ನವತೇಜ ಟ್ರಸ್ಟ್ ಪುತ್ತೂರು, ಅಡಿಕೆ ಪತ್ರಿಕೆ ಪುತ್ತೂರು ಮತ್ತು ಜೆ.ಸಿ.ಐ. ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ 7ನೇ ವರುಷದ ’ಹಲಸು ಮತ್ತು ಹಣ್ಣುಗಳ ಮೇಳ’ವು ಮೇ 24 ರಿಂದ 26ರ ತನಕ ಪುತ್ತೂರು ಬಪ್ಪಳಿಗೆ ಜೈನ ಭವನದಲ್ಲಿ ದಿನಪೂರ್ತಿ ನಡೆಯಲಿದೆ ಎಂದು ನವತೇಜ ಟ್ರಸ್ಟ್ ಅಧ್ಯಕ್ಷ ಅನಂತಪ್ರಸಾದ್ ನೈತ್ತಡ್ಕ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.

2018ರಲ್ಲಿ ಪ್ರಾರಂಭಿಸಿದ ಹಲಸು ಹಣ್ಣಿನ ಮೇಳ ಸತತ ಏಳು ವರ್ಷ ಯಶಸ್ವಿಯಾಗಿ ನಡೆದಿದೆ. ಹಲಸು ಇಲ್ಲದ ಸಮಯದಲ್ಲೂ ಹಲಸಿನ ಮೇಳ ಮಾಡುವ ಮೂಲಕ ಹಲಸು ಪ್ರೀಯರಿಗೆ ಉತ್ಸಾಹ ತುಂಬಿದ್ದೆವೆ. ಮೇಳದಲ್ಲಿ ಸುಮಾರು 60ಕ್ಕೂ ಮಿಕ್ಕಿ ಮಳಿಗೆಗಳಿದ್ದು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವಿ.ಎಸ್ ಭಟ್ ಮಳಿಗೆಗೆ ಚಾಲನೆ ನೀಡಲಿದ್ದಾರೆ. ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದಾರೆ.

ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೂಡ್ಗಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ನಾ ಕಾರಂತ ಪೆರಾಜೆ ಅವರ ’ಹಲಸು ಸ್ನೇಹಿ ಕೂಟದ ಹಿನ್ನೋಟದ ಹೆಜ್ಜೆಗಳು’ ಎಂಬ’ ಫಲಪ್ರದ’ ಕೃತಿಯನ್ನು ಅಡಿಕೆ ಪತ್ರಿಕೆಯ ಪ್ರಕಾಶಕ ಪಡಾರು ರಾಮಕೃಷ್ಣ ಶಾಸ್ತ್ರಿಯವರು ಬಿಡುಗಡೆ ಮಾಡಲಿದ್ದಾರೆ. ಭಾರತೀಯ ಗೇರು ಸಂಶೋಧನಾಲಯದ ನಿದೇಶಕ ಡಾ. ದಿನಕರ ಅಡಿಗ, ಬನ್ನೂರು ರೈತರ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಹಲಸುಸ್ನೇಹಿ ಕೂಟದ ಮುಳಿಯ ವೆಂಕಟಕೃಷ್ಣ ಶರ್ಮ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಮೇ .25ಕ್ಕೆ ಹಣ್ಣುಗಳೊಂದಿಗೆ ನಾವು ನೀವು ಕಾರ್ಯಕ್ರಮ ನಡೆಯಲಿದ್ದು, ಶ್ರೀ ರಾಮಚಂದ್ರಪುರ ಮಠದ ಮಾತೃತ್ವಂ ಇದರ ಅಧ್ಯಕ್ಷೆ ಈಶ್ವರೀ ಶ್ಯಾಮ ಭಟ್ ಬೇರ್ಕಡವು ಅವರು ಅಧ್ಯಕ್ಷತೆ ವಹಿಸಲಿದ್ದು, ನಾಡಿನ ಮಾವಿನ ರಕ್ಷಣೆ ಕುರಿತು ಮಂಗಳೂರಿನ ಡಾ. ಮನೋಹರ ಉಪಾಧ್ಯ ಮತ್ತು ಅದರ ಅಭಿವೃದ್ಧಿ, ಸಂರಕ್ಷಣೆ ಕುರಿತು ಸುಳ್ಯದ ಜಯರಾಮ ಮುಂಡೋಳಿಮೂಲೆ ಮಾತನಾಡಲಿದ್ದಾರೆ. ಕೊಕ್ಕೋ ಮೌಲ್ಯವರ್ಧನೆ ಕುರಿತು ಪುಣಚದ ನವೀನ ಕೃಷ್ಣ ಶಾಸ್ತ್ರೀಯವರು ಮಾತನಾಡಲಿದ್ದಾರೆ. ರಂಬುಟಾನ್ ಕೃಷಿ ಮಾರುಕಟ್ಟೆಯ ಕುರಿತು ವಿಶ್ವಪ್ರಸಾದ್ ಸೇಡಿಯಾಪು ಅವರು ಮಾತನಾಡಲಿದ್ದಾರೆ. ಇದೇ ಸಂದರ್ಭ ಮಾವು ಮತ್ತು ಹಲಸಿನ ಅಭಿವೃದ್ಧಿ ಮಾಡುತ್ತಿರುವ ಸುಳ್ಯ ಮರ್ಕಂಜದ ಮಾಪಲತೋಟ ಸುಬ್ರಾಯ ಭಟ್ ಅವರನ್ನು ಗೌರವಿಸಲಾಗುವುದು. ನವನೀತ ನರ್ಸರಿಯ ವೇಣುಗೋಪಾಲ್ ಎಸ್ ಟಿ ಅವರು ಸಮನ್ವಯಕಾರರಾಗಿರಲಿದ್ದಾರೆ. ಮೇ .26ಕ್ಕೆ ವೇಣೂರು ರಮೇಶ್ ಕೊಂಕಣಾಜೆ ಅವರು ಹಲಸಿನ ಉತ್ಪನ್ನ, ಉಜಿರೆಯ ಗೋಪಾಲಕೃಷ್ಣ ಕಾಂಚೋಡು ಅವರು ಡ್ರಾಗನ್ ಫುಡ್, ಶ್ವೇತಾ ಮರಕ್ಕಿಣಿ ಅವರು ಹೋಮ್ ಪ್ರೋಡಕ್ಟ್ ಕುರಿತು ಮಾಹಿತಿ ನೀಡಲಿದ್ದಾರೆ ಎಂದು ಅನಂತಪ್ರಸಾದ್ ನೈತ್ತಡ್ಕ ಹೇಳಿದರು.

ಮೇ.26ಕ್ಕೆ ಸಮಾರೋಪ ಸಮಾರಂಭ ಸಂಜೆ ಗಂಟೆ 4ಕ್ಕೆ ನಡೆಯಲಿದ್ದು, ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು.ಪಿ.ಶಿವಾನಂದ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಅಡಿಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆ ಅವರು ಹಲಸು ಹಬ್ಬದ ಕುರಿತು ಮಾತನಾಡಲಿದ್ದಾರೆ. ಜಿ.ಎಲ್.ಆಚಾರ್ಯ ಜ್ಯುವೆಲ್ಲ್ಸ್‌ನ ಮಾಲಕ ಜಿ.ಎಲ್.ಬಲರಾಮ ಆಚಾರ್ಯ, ಸಾವಯವ ಕೃಷಿಕ ಗ್ರಾಹಕ ಬಳಗ ಇದರ ಸಂಘಟನಾ ಕಾರ್ಯದರ್ಶಿ ರತ್ನಾಕರ ಕುಳಾಯಿ ,ಸಮೃದ್ಧಿ ಗಿಡಗೆಳೆತನ ಸಂಘದ ಅಧ್ಯಕ್ಷ ನಿರಂಜನ ಪೋಳ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಜೆಸಿಐ ವಲಯ ಉಪಾಧ್ಯಕ್ಷ ಶಂಕರ ರಾವ್ ಶುಭ ನುಡಿಯನ್ನಾಡಲಿದ್ದಾರೆ ಎಂದು ಅನಂತಪ್ರಸಾದ್ ನೈತ್ತಡ್ಕ ಹೇಳಿದರು.

camera center ad

ಜಾಹೀರಾತು

ಹಲಸಿನಿಂದ ಹೊಸ ಅವಿಷ್ಕಾರ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಹಲಸು ಮೇಳ ಏರ್ಪಡಿಸಲಾಗುತ್ತಿದೆ. ಮೇಳವನ್ನು ಮೂರು ವಿಭಾಗ ಮಾಡಿದ್ದು, ಆರಂಭದಲ್ಲಿ ಹಲಸಿನ ಗಿಡಗಳು, ಅದರ ಉತ್ಪನ್ನ, ಹೀಗೆ ಮುಂದೆ ಸಾಗಿದಂತೆ ಹಲಸಿನ ಸೋಳೆಯನ್ನು ಬಿಡಿಸುವ ಪರಿಕರಗಳ ಮಳಿಗೆ ಹೀಗೆ ಇತರ ಹಣ್ಣುಗಳ ಮಳಿಗೆ, ಕೃಷಿಕಗೆ ಸಂಬಂಧಿಸಿದ ಪರಿಕರಗಳ ಮಳಿಗೆ, ಆಹಾರ ಮೇಳಗಳು ಹಲಸು ಮೇಳದಲ್ಲಿ ಕಾಣಸಿಗಲಿದೆ. ಸ್ಥಳದಲ್ಲೇ ತಯಾರಿಸುವ ಹಲವು ಪಾರಂಪರಿಕ ತಿಂಡಿಗಳು ಗ್ರಾಹಕರಲ್ಲಿ ರುಚಿವರ್ಧನೆಯನ್ನು ಮಾಡಲಿವೆ. ಹಲಸಿನ ತಳಿಗಳನ್ನು ಅಭಿವೃದ್ಧಿಪಡಿಸಿದ ಪ್ರಸಿದ್ಧ ನರ್ಸರಿಗಳಿಂದ ಗಿಡಗಳ ಪ್ರದರ್ಶನ ಮತ್ತು ಮಾರಾಟವಿದೆ. ಹಲಸಿನ ಉಂಡ್ಲಕಾಳು, ಚಿಪ್ಸ್, ಹಪ್ಪಳ, ದೋಸೆ, ಮಂಚೂರಿ, ಕಬಾಬ್, ಮುಳುಕ್ಕ, ಜ್ಯೂಸ್, ಸೊಳೆ ರೊಟ್ಟಿ, ಕೇಕ್, ಹಲ್ವ, ಅತಿರಸ, ದೋಸೆ, ಸೇಮಿಗೆ, ಬನ್ಸ್, ಪಲಾವ್, ಪಾಯಸ, ಸೋಂಟೆ, ಕೊಟ್ಟಿಗೆ, ಗೆಣಸಲೆ, ಪೋಡಿ, ಮಾಂಬಳ, ಹಣ್ಣಿನ ಐಸ್‌ಕ್ರೀಂ.. ಹೀಗೆ ಹತ್ತಾರು ಬಗೆಯನ್ನು ಸವಿಯಲು ಅವಕಾಶ. ಹಲಸಿನ ಹಣ್ಣಿನ ಮಳಿಗೆಯಿದೆ. ಹಲಸಿನ ಬೀಜದ ಹೋಳಿಗೆ, ಹಣ್ಣಿನ ಹೋಳಿಗೆ ಖಾದ್ಯಗಳಲ್ಲಿ ಹೈಲೈಟ್. ತಿಪಟೂರು ಮತ್ತು ಚೆನ್ನಪಟ್ಟಣದಿಂದ ಮೇಳಕ್ಕಾಗಿಯೇ ಹಲಸು ಮತ್ತು ಮಾವು ಬೆಳೆಗಾರರು ಸ್ವತಃ ಹಣ್ಣುಗಳೊಂದಿಗೆ ಮೇಳಕ್ಕೆ ಬರಲಿದ್ದಾರೆ. ಮುಖ್ಯವಾಗಿ ’ಕೆಂಪು ಹಲಸು’ ಗ್ರಾಹಕರ ಮನ ಸೆಳೆಯಲಿದೆ. ಇದರೊಂದಿಗೆ ಹಲಸು ತಿನ್ನುವ, ಹಲಸು ಎತ್ತುವ ಸಹಿತ ವಿವಿಧ ಸ್ಪರ್ಧೆಗಳನ್ನು ಮಾಡಲಿದ್ದೇವೆ. ಮಕ್ಕಳಿಗೆ ಹಲಸಿನ ಉತ್ಪನಗಳ ಪ್ರಬಂಧ, ಚಿತ್ರಕಲೆ ಸ್ಪರ್ಧೆಗಳು ಇವೆ ಎಂದು ನವತೇಜ ಪುತ್ತೂರು ಇದರ ಟ್ರಸ್ಟಿ ಸುಹಾಸ್ ಮರಿಕೆ ಹೇಳಿದರು.

ashwinistudioputtur

ಜಾಹೀರಾತು

Muliya

ಜಾಹೀರಾತು

Poorna squash

ಜಾಹೀರಾತು

SendShare4Share
Previous Post

ಕರ್ನಾಟಕ ವಿಧಾನ ಪರಿಷತ್ ನೈರುತ್ಯ ಪದವೀಧರ ಹಾಗೂ ಶಿಕ್ಷಕ ಕ್ಷೇತ್ರಗಳ ಚುನಾವಣೆ ಬಿಜೆಪಿ ಪಕ್ಷದ ಮತದಾರರ ಸಂವಾದ

Next Post

ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ”ಗೆಜ್ಜೆಗಿರಿ ಮೇಳದ” ವರ್ಷದ ತಿರುಗಾಟ ಯಶಸ್ವಿ ಪ್ರದರ್ಶನ ಗೆಜ್ಜೆಗಿರಿಯಲ್ಲಿ ಮುಕ್ತಾಯ

ಪ್ರಜಾಧ್ವನಿ ನ್ಯೂಸ್

ಪ್ರಜಾಧ್ವನಿ ನ್ಯೂಸ್

Next Post
ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ”ಗೆಜ್ಜೆಗಿರಿ ಮೇಳದ” ವರ್ಷದ ತಿರುಗಾಟ ಯಶಸ್ವಿ ಪ್ರದರ್ಶನ ಗೆಜ್ಜೆಗಿರಿಯಲ್ಲಿ ಮುಕ್ತಾಯ

ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ''ಗೆಜ್ಜೆಗಿರಿ ಮೇಳದ'' ವರ್ಷದ ತಿರುಗಾಟ ಯಶಸ್ವಿ ಪ್ರದರ್ಶನ ಗೆಜ್ಜೆಗಿರಿಯಲ್ಲಿ ಮುಕ್ತಾಯ

Leave a Reply Cancel reply

Your email address will not be published. Required fields are marked *

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂದರ್ಭಿಕ ಚಿತ್ರ
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

No Result
View All Result
  • ಮುಖಪುಟ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಉದ್ಯೋಗ – ಶಿಕ್ಷಣ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಿನಿಮಾ
  • ಲೈಫ್ ಸ್ಟೈಲ್

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..