ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನದ ಮಹಾ ಮಾತೆ ಹಾಗೂ ಸರ್ವಶಕ್ತಿಗಳ ಆಶೀರ್ವಾದದಿಂದ ಆರಂಭಗೊಂಡ ಶ್ರೀ ಆದಿ ಧೂಮಾವತಿ, ಶ್ರೀ ದೇಯಿ ಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಶ್ರೀ ಗೆಜ್ಜೆಗಿರಿ ಮೇಳವು2023-24 ನೇ ಸಾಲಿನ ತನ್ನ ದ್ವಿತೀಯ ವರ್ಷದ ತಿರುಗಾಟವನ್ನು ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಕ್ಷೇತ್ರದ ಶ್ರೀ ಶಿವಾನಂದ ಶಾಂತಿಯವರ ಪೌರೋಹಿತ್ಯದಲ್ಲಿ ವಿಶೇಷ ಪೂಜಾ ವಿಧಿ ವಿಧಾನಗಳೊಂದಿಗೆ *ಗಿರಿಜಾ ಕಲ್ಯಾಣ* ಯಕ್ಷಗಾನ ಪ್ರಸಂಗದೊಂದಿಗೆ ಮುಕ್ತಾಯ ಗೊಳಿಸಿತು.
ಕ್ಷೇತ್ರಾಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್ ರವರು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಮಾತ್ರವಲ್ಲದೆ ಕೇರಳ ಗಡಿನಾಡು, ಬೆಂಗಳೂರು ಸೇರಿ ವಿದೇಶಕ್ಕೆ ಕೂಡ ಸಂಪೂರ್ಣ ಮೇಳ ತಿರುಗಾಟಕ್ಕೆ ಹೋದ ಪ್ರಪ್ರಥಮ ಮೇಳ ಎಂದು ದಾಖಲೆಯನ್ನು ಬರೆದ ಗೆಜ್ಜೆಗಿರಿ ಮೇಳದ ಇಡೀ ತಂಡವನ್ನು ಅಭಿನಂದಿಸಿದರು. ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷರಾದ ಪೀತಾಂಬರ ಹೆರಾಜೆ ಯವರು ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಕಾರಣಿಕ ಯಕ್ಷಗಾನ ಮೇಳದ ಅಪೂರ್ವ ಯಶಸ್ವಿಗೆ ಕಾರಣವಾಗಿದೆ ಹಾಗೂ
ಗೆಜ್ಜೆಗಿರಿ ಮೇಳದ ಕಲಾವಿದರು ಸೇರಿ ಇಡೀ ತಂಡ ಹಾಗೂ ವ್ಯವಸ್ಥಾಪಕತ್ವ ತನ್ನ ಕಠಿಣ ಶ್ರಮದ ಮೂಲಕ ಗೆಜ್ಜೆಗಿರಿ ಮೇಳದ ಯಶಸ್ವಿಗೆ ಕಾರಣವಾಗಿ ಜನ ಮನ್ನಣೆ ಪಡೆದಿದೆ ಎಂದು ಮೇಳದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮೇಳದ ಯಶಸ್ವಿಗೆ ವಿಶೇಷವಾಗಿ ಕಾರ್ಯ ನಿರ್ವಹಿಸಿದ ಪ್ರಶಾಂತ್ ಪೂಜಾರಿ ಮಸ್ಕತ್, ನವೀನ್ ಸುವರ್ಣ ಸಜಿಪ, ನವೀನ್ ಅಮೀನ್ ಕಟಪಾಡಿ, ನವೀನ್ ಇನ್ನಾ, ನಿತಿನ್ ತೆಂಕಕಾರಂದೂರು ಮತ್ತು ಯಕ್ಷಗಾನಕ್ಕೆ ಪ್ರದರ್ಶನಕ್ಕೆ ಪ್ರೋತ್ಸಾಹವಿತ್ತ ಸಂಘ ಸಂಸ್ಥೆಗಳಿಗೆ ಅಭಿನಂದನೆ ಸಲ್ಲಿಸಿದರು.