ದಿ.ವಸಂತ ಬಂಗೇರ ಶಾಸಕರಾಗಿದ್ದವರು ಅವರ ಕಾರ್ಯಶೈಲಿ ಬೇರೆಯೇ ಆಗಿತ್ತು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ಕೆಲಸ ನಡೆಸುತ್ತಿದ್ದರು ಪೂಂಜ ಅವರು ಅವರನ್ನು ನಕಲು ಮಾಡಲು ಹೊರಟಿದ್ದಾರೆ.
ವಸಂತ ಬಂಗೇರ ಇಲ್ಲದಿದ್ದರೂ ಅವರ ನೆನಪುಗಳು ಅವರು ಮಾಡಿದ ಕೆಲಸ ಶಾಶ್ವತ.ಬಿಜೆಪಿ ಕಾರ್ಯಕರ್ತ ರೌಡಿ ಶೀಟರ್ ಅಕ್ರಮ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದವನನ್ನು ಪೋಲಿಸ್ ಬಂಧಿಸಿದಾಗ ಶಾಸಕರು ಠಾಣೆಗೆ ಹೋಗಿ “ನಿಮ್ಮ ಅಪ್ಪನ ಠಾಣೆಯ,ತಲೆ ಕಡಯಿರಿ” ಅಂತ ಹೇಳ್ತಾರೆ ಇದು ಶಾಸಕರಾಗಿ ಹೇಳುವ ಮೂಲಕ ಪ್ರಜ್ಞಾವಂತ ಜನ ತಲೆತಗ್ಗಿಸುವಂತಾಗಿದೆ.ಅದಲ್ಲದೇ ಜನರು ಪ್ರಶ್ನಿಸುತ್ತಿದ್ದಾರೆ.
ಈ ಹಿಂದೆ ಅರಣ್ಯ ಇಲಾಖೆಯ ಒಂದು ಪ್ರಕರಣದ ಸಂದರ್ಭದಲ್ಲಿ DFO ಅವರಿಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ.ರೌಡಿ ವರ್ತನೆ ಮೂಲಕ ಡಿಜೆ ಹಳ್ಳಿ ಕೆಜೆ ಹಳ್ಳಿ ತರಹ ಠಾಣೆಗೆ ಬೆಂಕಿ ಹಚ್ಚುತ್ತೇನೆ ಎಂಬ ಮಾತು ಹೇಳಿದ್ದಾರೆ ಇದರ ಮೂಲಕ ಆ ಪ್ರಕರಣದಲ್ಲಿ ಇವರ ಕೈವಾಡ ಇದೆಯಾ ಎಂಬ ಸಂದೇಹವಿದೆ ಎಂಬುದಾಗಿ ತಿಳಿಸಿದ್ದಲ್ಲದೆ.ಈ ಹಿಂದೆ ತಲ್ವಾರ್ ಪ್ರಕರಣ ಮೂಲಕ ಒರ್ವ ಪ್ರಚಾರ ಪ್ರಿಯ ಶಾಸಕರಾಗಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯರ ಬಗ್ಗೆ ಮಾತಾನಾಡುವಷ್ಟು ವಯಸ್ಸಗಲಿಲ್ಲ ಪೂಂಜ ಇನ್ನು ರಾಜಕೀಯದಲ್ಲಿ “ಬಚ್ಚ” ಅವರು ಇನ್ನು ಕಲಿಯಲು ಬಹಳಷ್ಟಿದೆ.
ಹರೀಶ್ ಪೂಂಜರು ನೈತಿಕ ಹೊಣೆಹೊತ್ತು ರಾಜೀನಾಮೆ ಕೊಟ್ಟು ಚುನಾವಣೆ ಎದುರಿಸಲಿ ಪ್ರಸ್ತುತ ಘಟನೆಯಲ್ಲಿ ಕಾಂಗ್ರೆಸ್ ನ ಅಥವಾ ಸರಕಾರದ ಕೈವಾಡ ಇಲ್ಲ ಇಲಾಖೆಯು ತನ್ನ ಕೆಲಸ ಮುಂದುವರಿಸುತ್ತದೆ ಎಂಬುದಾಗಿ ಪತ್ರಿಕಾಗೋಷ್ಠಿಯಲ್ಲಿ ಶಾಸಕ ಹರೀಶ್ ಕುಮಾರ್ ತಿಳಿಸಿದರು ಈ ಸಂಧರ್ಭದಲ್ಲಿ ಶಾಸಕ ಮಂಜುನಾಥ್ ಭಂಡಾರಿ ಉಪಸ್ಥಿತರಿದ್ದರು.