ಲೋಕಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಪದವೀಧರ ಕ್ಷೇತ್ರ ಮತ್ತು ಶಿಕ್ಷಕ ಕ್ಷೇತ್ರ ಚುನಾವಣೆ ಘೋಷಣೆಯಾಗಿದ್ದು ಪದವಿದರ ಕ್ಷೇತ್ರದ ಆಕಾಂಕ್ಷಿಯಾಗಿದ್ದ ಉಡುಪಿ ಮಾಜಿ ಶಾಸಕ ರಘಪತಿ ಭಟ್ ಟಿಕೆಟ್ ಕೈ ತಪ್ಪಿದ ಕಾರಣ ಬಂಡಾಯ ಅಭ್ಯರ್ಥಿಯಾಗಿ ಕಾರ್ಯಕರ್ತರ ಪರವಾಗಿ ನಾಮಪತ್ರ ಸಲ್ಲಿಸಿದ್ದು ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ ಎಂಬುದನ್ನು ಗಂಟಘೋಷವಾಗಿ ತಿಳಿಸಿದ್ದು ಈಗಾಗಲೇ ಮತ ಬೇಟೆ ನಡೆಸುತ್ತಿದ್ದು ಇವರಿಗೆ ಹಲವಾರು ಹಿರಿಯರು ಪ್ರಮುಖರು ಸಾಥ್ ನೀಡುತ್ತಿದ್ದಾರೆ.
ಬಿಜೆಪಿಯಿಂದ ಪದವೀಧರ ಕ್ಷೇತ್ರದಲ್ಲಿ ಧನಂಜಯ ಸರ್ಜಿ ಅಭ್ಯರ್ಥಿಯಾಗಿದ್ದು ಇವರು ಪ್ರವಾಸ ಕೈಗೊಳ್ಳುತ್ತಿದ್ದಾರೆ.ಇವುಗಳ ನಡುವೆ ಸೋಲು ಗೆಲುವಿನ ಲೆಕ್ಕಾಚಾರ ಮಧ್ಯೆ ಉಡುಪಿ ಬಿಜೆಪಿ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಮಾತಾನಾಡಿ 24 ಗಂಟೆಯ ಒಳಗೆ ಭಟ್ ನಿವೃತ್ತಿ ಘೋಷಣೆ ಮಾಡಬೇಕು ಮಾಡದಿದ್ದರೆ ಪಕ್ಷದ ನಿಯಮ ಉಲ್ಲಂಘನೆ ಮೂಲಕ ಶಿಸ್ತು ಕ್ರಮ ಜರಗಿಸಲಾಗುವುದು.
ಪಕ್ಷ ವಿರೋಧಿ ಚಟುವಟಿಕೆ, ಪಕ್ಷಕ್ಕೆ ಮುಜುಗರ ಉಂಟು ಮಾಡುವ ಯಾರೇ ಆದರೂ ಪಕ್ಷ ಖಂಡಿತವಾಗಿ ಕ್ರಮಗೊಳ್ಳುತ್ತದೆ.
ಒಬ್ಬರಿಗೆ ಒಂದು ಇನ್ನೊಬ್ಬರಿಗೆ ಒಂದಹ ಕ್ರಮ ನಿಯಮ ಅಂತ ಇಲ್ಲ.
ನಾಳೆಯೊಳಗೆ ನಿವೃತ್ತಿ ಘೋಷಣೆ ಮಾಡುವರು ಎಂಬ ವಿಶ್ವಾಸವಿದೆ.ರಘಪತಿ ಭಟ್ ಅಂತ ಅಲ್ಲ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ದ ಯಾರೇ ಸ್ಪರ್ಧೆ ಮಾಡಿದರು ಕ್ರಮ ಕೈಗೊಳ್ಳವುದು ಅನಿವಾರ್ಯ ಮತ್ತು ಅಗತ್ಯವಾಗಿದೆ. ಪಕ್ಷ ಕ್ರಮ ತೆಗೆದುಕೊಳ್ಳುತ್ತದೆ.ನಾವು ಇದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವ ಬಗ್ಗೆ ಏನೆಲ್ಲಾ ಕೆಲಸ ಮಾಡಬೇಕೋ ಅದನ್ನು ನಾವು ಮಾಡುತ್ತೇವೆ. ನೈರುತ್ಯ ಪದವೀಧರ ಮತ್ತು ನೈರುತ್ಯ ಶಿಕ್ಷಕ ಕ್ಷೇತ್ರ ಗೆಲುವಿಗೆ ತಳಮಟ್ಟದ ಕಾರ್ಯಕರ್ತರನ್ನು ಸಕ್ರಿಯಗೊಳಿಸುವ ಕಾರ್ಯ ಆರಂಭವಾಗಿದೆ ಎಂದು ತಿಳಿಸಿದರು.