ಪುತ್ತೂರು ತಾಲೂಕಿನ ಕೊಡಿಂಬಾಡಿ ಸಮೀಪದ ಶಾಂತಿನಗರ ಫ್ರೌಢ ಶಾಲೆಯ ಪ್ರಾರಂಭೋತ್ಸವ ಮತ್ತು ಅಭಿನಂದನ ಕಾರ್ಯಕ್ರಮವು ಮೇ 31 ರಂದು ನಡೆಯಿತು.
ಎಂಟನೇ ತರಗತಿಯಿಂದ ಹತ್ತನೇ ತರಗತಿಯ ತನಕ ಎಲ್ಲಾ ಮಕ್ಕಳಿಗೆ ದತ್ತ ಜಯಂತಿ ಸೇವಾ ಟ್ರಸ್ಟ್ ಮತ್ತು ತ್ರೀನೇತ್ರ ದತ್ತ ಸೌಹಾರ್ದ ಸಹಕಾರಿ ಸಂಘ ಪುತ್ತೂರು ಇದರ ವತಿಯಿಂದ ಪುಸ್ತಕ ವಿತರಣೆ,ಐಡಿ ವಿತರಣೆ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡಿದ ಪುತ್ತೂರು ರೈ ಚಾರಿಟೇಬಲ್ ಟ್ರಸ್ಟ್ ಕಾರ್ಯಾಧ್ಯಕ್ಷರಾದ ಸುದೇಶ್ ಶೆಟ್ಟಿ ಹಿಂದೆ ಹಳ್ಳಿಯ ಮಕ್ಕಳಿಗೆ ಸರಕಾರಿ ಶಾಲೆಯಲ್ಲಿ ಸರಿಯಾದ ಸೌಲಭ್ಯಗಳ ಕೊರತೆ ಇತ್ತು ಪ್ರಸ್ತುತ ದಿನಗಳಲ್ಲಿ ಸರಿಯಾದ ವ್ಯವಸ್ಥೆಗಳಾಗಿವೆ ಜೊತೆಗೆ ಸರಕಾರಿ ಶಾಲೆಯಲ್ಲಿ ಕಲಿತ ಮಕ್ಕಳು ದೊಡ್ಡ ದೊಡ್ಡ ವ್ಯಕ್ತಿಗಳಾಗಿದ್ದರೆ ಎಂದರು.ಈ ಶಾಲೆಯ ಮಕ್ಕಳು ಉನ್ನತವಾಗಿ ಬೆಳೆಯಲಿ ನಮ್ಮ ಟ್ರಸ್ಟ್ ಮೂಲಕ ಸರಕಾರಿ ಶಾಲೆಗೆ ಬೇಕಾದ ಮೂಲಭೂತ ಸೌಕರ್ಯ ನೀಡುವ ಕೆಲಸ ಮಾಡುತ್ತಿದ್ದೇವೆ. ಸರಕಾರಿ ಶಾಲೆ ಉಳಿಯಬೇಕು ಜೊತೆಗೆ ಫಲಿತಾಂಶಗಳು ಉತ್ತಮವಾಗಿ ಬರಲಿ ಎಂದು ಹಾರೈಸಿದರು.ಈ ಸಂದರ್ಭದಲ್ಲಿ 2023-24 ರ ಸಾಲಿನ SSLC ಪರೀಕ್ಷೆಯಲ್ಲಿ 100% ಪಡೆದು ದಾಖಲೆ ನಿರ್ಮಿಸಿದೆ. ಎಲ್ಲಾ ಮಕ್ಕಳಿಗೆ ಅಭಿನಂದಿಸಿ ಸನ್ಮಾನಿಸಲಾಯಿತು. ಮುಖ್ಯ ಅತಿಥಿಯಾಗಿ ಮಾತಾನಾಡಿದ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಗಜಾನನ ಪೈ ಸರಕಾರಿ ಶಾಲೆಯಲ್ಲಿ ಕಲಿಯುವ ಮಕ್ಕಳಿಗೆ ತುಂಬಾ ಅವಕಾಶವಿದೆ, ಭವಿಷ್ಯ ರೂಪಿಸಿಕೊಳ್ಳಿ. ನಮ್ಮ ಟ್ರಸ್ಟ್ ನಿಂದ ಮುಂದೆಯೂ ಸಹಾಯ ಮಾಡುತ್ತೇವೆ ಎಂದರು. ಅಧ್ಯಕ್ಷತೆ ವಹಿಸಿದ SDMC ಅಧ್ಯಕ್ಷರಾದ ಪ್ರಕಾಶ್ ಗೌಡ ಮಾತಾನಾಡಿ ಪ್ರಾರಂಭೋತ್ಸವ ಮಕ್ಕಳಿಗೆ ಸ್ವಾಗತಿಸಿ ಮುಂದೆಯೂ ಉನ್ನತ ಫಲಿತಾಂಶ ಬರಲಿ ಎಂದು ಶುಭ ನುಡಿದರು. ಇದೇ ಸಂಧರ್ಭ ಶಿಕ್ಷಕರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ನಿತೀನ್ ಪಕ್ಕಳ ಅಧ್ಯಕ್ಷರು ತ್ರೀನೇತ್ರ ಸಹಕಾರಿ ಸಂಘ,ವಿವೇಕ್ ಶೆಣೈ CEO, ಜಗದೀಶ್ ದತ್ತ ಜಯಂತಿ ಟ್ರಸ್ಟ್, ಸೂರ್ಯನಾರಾಯಣ ನಾಯಕ್,ಸುಧೀರ್ ಪ್ರಸಾದ್ ಎ,ಡಾ.ರಘ ಬೆಳ್ಳಿಪ್ಪಾಡಿ,
ಪಂಚಾಯತ್ ಸದಸ್ಯರಾದ ಜಗನ್ನಾಥ ಶೆಟ್ಟಿ ನಡುಮನೆ,ರಾಮಣ್ಣ ಗುಂಡೋಳೆ,ರಾಮಚಂದ್ರ ಪೂಜಾರಿ,ನಿರಂಜನ್ ರೈ ಮಟಂತಬೆಟ್ಟು,ಪದ್ಮನಾಭ ಶೆಟ್ಟಿ ರೆಂಜಾಳ,ಮುಖ್ಯೋಪಾಧ್ಯಾಯರಾದ ವಿಷ್ಣು ಪ್ರಸಾದ್ ಶಿಕ್ಷಕರು, ಹಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು