ವಾಲೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಹಣ ವರ್ಗಾವಣೆಗೆ ಸಂಬಂಧಪಟ್ಟಂತೆ ಸಚಿವ ನಾಗೇಂದ್ರ ಅವರಿಂದ ನಾವು ರಾಜೀನಾಮೆ ಕೇಳಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ನಾಗೇಂದ್ರ ರಾಜಿನಾಮೆ ಕೇಳಿದ ಬಿಜೆಪಿಗೆ ಮುಖ್ಯಮಂತ್ರಿ ವ್ಯಂಗ್ಯ.
ನಾಗೇಂದ್ರ ಅವರ ರಾಜೀನಾಮೆ ಕೇಳಿ ಬಿಜೆಪಿ ಜೂ.6ರವರೆಗೆ ಗಡುವು ನೀಡುವ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿಯವರು, ಅವರ್ಯಾರು ನಮಗೆ ಗಡುವು ನೀಡಲು….? ಸರಕಾರ ನಮ್ಮದು ಎಂದು ಪ್ರಶ್ನಿಸಿದರು. ವಿರೋಧ ಪಕ್ಷಗಳಿರುವುದೇ ಅನ್ಯಾಯದ ವಿರುದ್ಧ ಹೋರಾಟ ಮಾಡಬೇಕೆಂದು. ಆದರೆ ಸುಳ್ಳು ಹೇಳಿಕೊಂಡು ಹೋರಾಟ ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು.
ಸ್ಪಷ್ಟ ತನಿಖೆಯಾಗಲಿ,ವರದಿ ಬಂದ ನಂತರ ಕ್ರಮ
ಹಣ ವರ್ಗಾವಣೆಗೆ ಸಂಬಂಧಪಟ್ಟಂತೆ ತನಿಖೆಗೆ ಮೊನ್ನೆಯಷ್ಟೇ ಎಸ್‌ಐಟಿ ರಚನೆ ಮಾಡಲಾಗಿದೆ. ಇನ್ನೂ ಯಾವುದೇ ವರದಿ ಬಂದಿಲ್ಲ. ಪ್ರಾಥಮಿಕ ವರದಿ ಬರಲಿ. ಅದರಲ್ಲಿ ಏನಿರುತ್ತದೆ ಎಂದು ನೋಡಿದ ಬಳಿಕ ನಿರ್ಧಾರ ತೆಗೆದುಕೊಳ್ಳುತ್ತೇವೆ. ನಾಗೇಂದ್ರ ಅವರಿಂದ ತಾವು ಯಾವುದೇ ವಿವರಣೆ ಕೇಳಿಲ್ಲ, ಕೇಳುವ ಅಗತ್ಯವು ಇಲ್ಲ. ಯಾಕೆಂದರೆ ತನಿಖೆಯ ಮೇಲೆ ಪೂರ್ಣ ವಿಶ್ವಾಸವಿದೆ ಎಂದ ಅವರು ವರದಿ ಬರುವವರೆಗೂ ಕಾಯುತ್ತೇವೆ ಎಂದರು.