ದಾವಣಗೆರೆ : ಹೊನ್ನಾಳಿ ನ್ಯಾಮತಿ ಕ್ಷೇತ್ರದ ನಾಯಕ ಮಾಜಿ ಸಚಿವರಾದ ಎಂಪಿ ರೇಣುಕಾಚಾರ್ಯಗೆ ಕೊಲೆ ಬೆದರಿಕೆ ಒಡ್ಡಲಾಗಿದೆ. ದೂರವಾಣಿ ಕರೆ ಮಾಡಿ ಸಚಿವರಿಗೆ ಪ್ರಾಣ ಬೆದರಿಕೆ ಹಾಕಲಾಗಿದೆ
+60695539248 ಹಾಗೂ +912259155161 ನಂಬರ್ ನಿಂದ ಕರೆ ಮಾಡಿ ಬೆದರಿಕೆ ಹಾಕಲಾಗಿದ್ದು ಇಂದು ಸಂಜೆ ನಿಮ್ಮನ್ನು ಮುಗಿಸುತ್ತೇವೆ ಎಂದು ದುಷ್ಕರ್ಮಿಗಳು ಬೆದರಿಸಿದ್ದಾರೆ
ರೇಣುಕಾಚಾರ್ಯ ಪುತ್ರನಿಗೂ ಕೊಲೆ ಬೆದರಿಕೆ ಒಡ್ಡಲಾಗಿದ್ದು ಈ ಕುರಿತು ಅವರು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರೇಣುಕಾಚಾರ್ಯ ನಾನು ಇಂಥಹ ಬೆದರಿಕೆಗಳನ್ನು ಸಾಕಷ್ಟು ನೋಡಿದ್ದೇನೆ. ಈ ಹಿಂದೆ ನನಗೆ ದುಬೈನಿಂದಲೂ ಕರೆಗಳು ಬಂದಿದ್ದವು. ಈ ರೀತಿಯ ಗೊಡ್ಡು ಬೆದರಿಕೆಗಳಿಗೆಲ್ಲ ನಾನು ಬಗ್ಗೋದಿಲ್ಲ, ಕೂಡಲೇ ಬೆದರಿಕೆ ಕರೆ ಕುರಿತು ದೂರು ದಾಖಲಿಸುತ್ತೇನೆ ಎಂದಿದ್ದಾರೆ.
ಇದರ ಕಾಣದ ಕೈಗಳು ಯಾರೆಂದು ತಿಳಿಯಲಿ ಎಂದು ಹೇಳಿಕೊಂಡಿದ್ದಾರೆ.ಕೋವಿಡ್ ಸಂಧರ್ಭದಲ್ಲಿ ಯಶಸ್ವಿಯಾಗಿ ಕೆಲಸ ಮಾಡಿದ ಶಾಸಕರಾಗಿ ರಾಜ್ಯದಲ್ಲಿ ಗುರುತಿಸಿಕೊಂಡಿದ್ದರು.