ಪುತ್ತೂರಿನ ಹಾರಾಡಿ ರಾಮ್ ಲೀಲಾ ಆರ್ಕೆಡ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ‘ ಟ್ಯಾಲೆಂಟ್ ಆಫೀಸ್ ಸಂಸ್ಥೆ ವತಿಯಿಂದ
ವಿದ್ಯಾರ್ಥಿಗಳ ಪ್ರತಿಭಾ ವಿಕಸನಕ್ಕಾಗಿ ಡ್ರಾಮಾ ಡ್ರೀಮ್ ಅಭಿನಯ ಶಿಕ್ಷಣ, ಮಕ್ಕಳ ರಂಗ ನಾಟಕ ಸಂಯೋಜನೆಯ ಅಭ್ಯಾಸ ಮಾಲಿಕೆ ಮತ್ತು ಪುಟಾಣಿಗಳ ಸಾಂಸ್ಕೃತಿಕ ಕಲಾ ಬೆಳವಣಿಗೆಗೆ ವೇದಿಕೆಯಾಗಿ ಕಿಡ್ಸ್ ಪ್ಲಾಟ್ ಫಾರ್ಮ್ ತರಗತಿಗಳು ಜೂನ್ 9 ರಂದು ಪ್ರಾರಂಭಗೊಳ್ಳಲಿದೆ.
ಒಂದು ವರ್ಷದ ರಂಗ ಶಿಕ್ಷಣ ಕೋರ್ಸ್ ಇದಾಗಿದ್ದು ಪ್ರತಿ ಆದಿತ್ಯವಾರ ವಿದ್ಯಾರ್ಥಿಗಳ ಸಮಯ ಅನುಕೂಲಕ್ಕಾಗಿ ಬ್ಯಾಚ್ ಮುಖೇನ ತರಗತಿಗಳು ನಡೆಯುತ್ತವೆ. ‘ಕಿಡ್ಸ್ ಪ್ಲಾಟ್ ಫಾರ್ಮ್ ತರಗತಿಗೆ 4 ರಿಂದ 7 ವರ್ಷ ಹಾಗೂ ‘ಡ್ರಾಮಾ ಡ್ರೀಮ್ ‘ ರಂಗ ಶಿಕ್ಷಣ ಅಭಿನಯ ತರಗತಿಗೆ 7 ವರ್ಷ ಮೇಲ್ಪಟ್ಟು, ಮಕ್ಕಳ ವಯೋಮಿತಿ ನಿಗದಿಪಡಿಸಲಾಗಿದೆ.
ರಾಮಾಯಣ, ಐತಿಹಾಸಿಕ, ಜಾನಪದ ಕಥಾ ಹಂದರದ ರಂಗ ದೃಶ್ಯ ಕಾವ್ಯ ನಾಟಕವನ್ನು ಸಿದ್ದ ಪಡಿಸುವ ಅದ್ಭುತ ಯೋಜನೆ ಇದಾಗಿದ್ದು, ರಾಜ್ಯ ಮಟ್ಟದ ಮಕ್ಕಳ ನಾಟಕೋತ್ಸವ ಕಾರ್ಯಕ್ರಮ ಆಯೋಜಿಸಿ ಮಹಾ ವೇದಿಕೆಯಲ್ಲಿ ಪ್ರದರ್ಶನ ನೀಡಲಾಗುವುದು.
ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳಿಗೆ ಸ್ಮರಣಿಕೆ, ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು.
ಮಕ್ಕಳ ವ್ಯಕ್ತಿತ್ವ ವಿಕಸನ ಮತ್ತು ಬೌದ್ಧಿಕ ಬೆಳವಣಿಗೆಗೆ ಪೂರಕವಾಗಿ ಹತ್ತು ಹಲವು ಸಾಂಸ್ಕೃತಿಕ, ಶೈಕ್ಷಣಿಕ, ಆಟ ಪಾಠಗಳ ಮನೋರಂಜನಾ ಚಟುವಟಿಕೆಗಳು.
ಸ್ಪಷ್ಟ ಮಾತುಗರಿಕೆ, ಸ್ಪಷ್ಟ ಉಚ್ಚಾರಣೆ, ಪ್ರತಿಭೆಯ ಪ್ರಗತಿಗೆ ಒತ್ತು ನೀಡಲಾಗುವುದು.ಅಲ್ಲದೆ ಸಂಸ್ಥೆಯ ವಿದ್ಯಾರ್ಥಿಗಳಿಗಾಗಿ ಉಚಿತ ಭಜನಾ ತರಬೇತಿ, ಸಾಮಾನ್ಯ ಜ್ಞಾನ ಪರೀಕ್ಷೆ, ವಿವಿಧ ಸಾಂಸ್ಕೃತಿಕ ಚಟುವಟಿಕೆ ಸ್ಪರ್ಧೆಗಳು, ಸಾಮಾಜಿಕ ಸಂದೇಶ ಸಾರುವ ಕಿರುಚಿತ್ರ ತಯಾರಿ ಯೋಜನೆಗಳು ರೂಪಿತವಾಗಿವೆ. ಪ್ರತಿ ಆದಿತ್ಯವಾರ ಬೆಳಿಗ್ಗೆ ಎರಡು ಬ್ಯಾಚ್ ಗಳಲ್ಲಿ ಕಿಡ್ಸ್ ಪ್ಲಾಟ್ ಫಾರ್ಮ್ ತರಗತಿಗಳು ಹಾಗೂ ಮದ್ಯಾಹ್ನ ನಂತರ ಎರಡು ಬ್ಯಾಚ್ ಮುಖೇನ ಡ್ರಾಮಾ ತರಗತಿಗಳು ನಡೆಯುತ್ತವೆ.
ಡ್ರಾಮಾ ವಿಭಾಗದಲ್ಲಿ ಒಂದು ಬ್ಯಾಚ್ ಗೆ ಸೀಮಿತ 14 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ.
ಪುತ್ತೂರು ಪರಿಸರದ ಆಸಕ್ತ ಮಕ್ಕಳಿಗೆ ಸುವರ್ಣ ಅವಕಾಶ ಇದಾಗಿದ್ದು ಜೂನ್ 9 ಕ್ಕೆ ಮೊದಲು ಕಚೇರಿಗೆ ಬಂದು ವಿದ್ಯಾರ್ಥಿಗಳ ದಾಖಲಾತಿ ಮಾಡಿಸಬಹುದು.
ಹೆಚ್ಚಿನ ಮಾಹಿತಿಗೆ ಟ್ಯಾಲೆಂಟ್ ಆಫೀಸ್ ಸಂಸ್ಥೆಯ 9686714517ಈ ನಂಬರನ್ನು ಸಂಪರ್ಕಿಸಲು ಕೋರಲಾಗಿದೆ.