ಬೆಳ್ಳಾರೆ: 2022 ರ ಜುಲೈಯಲ್ಲಿ ಬೆಳ್ಳಾರೆ ಯ ಸಮೀಪದ ಮಾಸ್ತಿ ಕಟ್ಟೆಯಲ್ಲಿ ನಡೆದ ಪ್ರವೀಣ್ ನೆಟ್ಟಾರು ಹತ್ಯೆಯಾದ ಪ್ರಕರಣದಲ್ಲಿ ಇನ್ನೊರುವ ಆರೋಪಿ ರಿಯಾಜ್ ಯೂಸೂಫ್ ಹಾರಳ್ಳಿ ಅಲಿಯಾಸ್ ರಿಯಾಜ್ ಇತನನ್ನು ಮಂಗಳವಾರ ಎನ್ಐಎ ಆತನನ್ನು ಬಂಧಿಸಿರುತ್ತಾರೆ.
ವಿದೇಶಕ್ಕೆ ಪರಾರಿಯಾಗುವ ಸಮಯದಲ್ಲಿ ಎನ್ಐಎ ತಂಡವು ಆತನನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಸೆರೆಹಿಡಿದಿರುತ್ತಾರೆ.
ರಿಯಾಜ್ ಬಂಧನದ ನಂತರದಲ್ಲಿ ಒಟ್ಟು ಆರೋಪಿಗಳ ಸಂಖ್ಯೆ 19 ಕ್ಕೆ ಹೆಚ್ಚಾಗಿರುತ್ತಾದೆ.ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮಂಗಳವಾರ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪತ್ತೆ ಹಚ್ಚಿದ್ದು, ವಿದೇಶಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದಾಗ ಮುಂಬೈ ವಿಮಾನ ನಿಲ್ದಾಣದಿಂದ ಆತನನ್ನು ಬಂಧಿಸಿದೆ.
ರಿಯಾಜ್ ಯೂಸುಫ್ ಹಾರಳ್ಳಿ ಅಲಿಯಾಸ್ ರಿಯಾಜ್‌ನ ಬಂಧನದಿಂದ ನೆಟ್ಟಾರು ಭೀಕರ ಹತ್ಯೆಗೆ ಸಂಬಂಧಿಸಿದ ಪ್ರಕರಣದಲ್ಲಿ ಇದುವರೆಗೆ ಬಂಧಿತ ಆರೋಪಿಗಳ ಸಂಖ್ಯೆ 19 ಕ್ಕೆ ಏರಿದೆ. ತಲೆಮರೆಸಿಕೊಂಡಿದ್ದ ಮುಸ್ತಫಾ ಪೈಚಾರ್, ಹಾಗೂ ಆತನ ಅಡಿಯಲ್ಲಿ ಕೆಲಸ ಮಾಡುತ್ತಿದ್ದ ಮನ್ಸೂರ್ ಪಾಷಾ ಎಂಬಾತನನ್ನು ಬಂಧಿಸಿದ ಒಂದು ತಿಂಗಳೊಳಗೆ ಈತನ ಬಂಧನವಾಗಿದೆ.
2022 ಜುಲೈಯಲ್ಲಿ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಕಾರ್ಯಕರ್ತರಿಂದ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆ ಗ್ರಾಮದಲ್ಲಿ ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಪ್ರವೀಣ್ ನೆಟ್ಟಾರುನ್ನು ಮೋಟಾರ್ ಸೈಕಲ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿದ್ದರು. ಆ ಮೂಲಕ ಸಮಾಜದ ಒಂದು ವರ್ಗದ ಜನರಲ್ಲಿ ಭಯೋತ್ಪಾದನೆಯನ್ನು ಉಂಟುಮಾಡುವ ಗುರಿಯನ್ನು ಹೊಂದಿದೆ ಇವರು ಹೊಂದಿದ್ದರು ಎಂದು ಎನ್‌ಐಎ ತನ್ನ ತನಿಖೆಯಲ್ಲಿ ತಿಳಿಸಿತ್ತು.
ಎನ್‌ಐಎ ತನಿಖೆಯ ಪ್ರಕಾರ, ತಲೆಮರೆಸಿಕೊಂಡಿರುವ ಆರೋಪಿ ಅಬ್ದುಲ್ ರಹಮಾನ್ ನಿರ್ದೇಶನದ ಮೇರೆಗೆ ರಿಯಾಜ್ ವಿದೇಶದಿಂದ ಭಾರತಕ್ಕೆ ಮರಳಿದ್ದ. ಮನ್ಸೂರ್ ಪಾಷಾ ಜೊತೆಗೆ, ರಿಯಾಜ್ ಕರ್ನಾಟಕದ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಮುಸ್ತಫಾ ಪೈಚಾರ್‌ಗೆ ಲಾಜಿಸ್ಟಿಕ್ ಬೆಂಬಲ ಮತ್ತು ಸುರಕ್ಷಿತ ಅಡಗುತಾಣವನ್ನು ಒದಗಿಸಿದ್ದ. ಪಿಎಫ್ ಐ ಪುತ್ತೂರು ಜಿಲ್ಲಾ ಕಾರ್ಯದರ್ಶಿ ಹಾಗೂ ಪುತ್ತೂರು ಜಿಲ್ಲಾ ಸೇವಾ ತಂಡದ ಮುಖ್ಯಸ್ಥ ಪೈಚಾರ್ ಪ್ರಕರಣದ ಪ್ರಮುಖ ಸಂಚಕೋರ.
ಪ್ರವೀಣ್ ನೆಟ್ಟಾರುನನ್ನು ಕೊಲೆ ಮಾಡಬೇಕು ಎಂದು ಗುರಿ ಮಾಡಿಕೊಂಡು ಹಿಟ್ ಟೀಮ್‌ಅನ್ನು ಈತನೇ ಸಿದ್ಧಪಡಿಸಿದ್ದ. ಘಟನೆಯ ನಂತರ ಆತರ ಇತರ ವ್ಯಕ್ತಿಗಳೊಂದಿಗೆ ಪರಾರಿಯಾಗಿದ್ದ. ಅಂತಿಮವಾಗಿ ಈತನನ್ನು 2024ರ ಮೇ 10 ರಂದು ಸಕಲೇಶಪುರದಿಂದ ಮನ್ಸೂರ್ ಪಾಷಾ ಅವರನ್ನು ಬಂಧಿಸಿತ್ತು. 2022ರ ಆಗಸ್ಟ್ 4ರಂದು ತನಿಖೆಯನ್ನು ಕೈಗೆತ್ತಿಕೊಂಡಿದ್ದ ಎನ್‌ಐಎ ಇದುವರೆಗೆ 21 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದೆ. ಪರಾರಿಯಾಗಿರುವ ಇತರರನ್ನು ಪತ್ತೆಹಚ್ಚಲು ಸಂಸ್ಥೆ ತನ್ನ ಶೋಧವನ್ನು ಮುಂದುವರೆಸಿದೆ.