ನೂತನ ಸಂಸದೆ ಬಾಲಿವುಡ್ ನಟಿ ಕಂಗನಾ ರಣಾವತ್ ಮೇಲೆ ಹಲ್ಲೆ. ಚಂಡಿಗಡ್ ವಿಮಾನ ನಿಲ್ದಾಣದಲ್ಲಿ CISF ಸಿಬ್ಬಂದಿಯಿಂದ ಕಪಾಳಮೋಕ್ಷ ನಡೆದಿದೆ. ನೂತನ ಸಂಸದರಾಗಿ ಆಯ್ಕೆಯಾದವರನ್ನು ಇಂದು ದೆಹಲಿಗೆ ಆಹ್ವಾನಿಸಿತ್ತು. ಅದರಂತೆ ದೆಹಲಿಗೆ ತೆರಳುವಾಗ ಈ ಘಟನೆ ನಡೆದಿದೆ. ಸಿಬ್ಬಂದಿಯನ್ನು ಪೋಲಿಸ್ ರು ವಶ ಪಡಿಸಿಕೊಂಡಿದ್ದಾರೆ.
ಯಾವ ಕಾರಣಕ್ಕೆ ಈ ಘಟನೆ ನಡೆದಿದೆ ಇನ್ನಷ್ಟೇ ತಿಳಿಯಬೇಕಾಗಿದೆ ಮೂಲಗಳ ಪ್ರಕಾರ, ಭದ್ರತಾ ತಪಾಸಣೆಯ ಸಮಯದಲ್ಲಿ ನಟ-ರಾಜಕಾರಣಿ ತನ್ನ ಫೋನ್ ಅನ್ನು ಟ್ರೇಯಲ್ಲಿ ಇಡಲು ನಿರಾಕರಿಸಿದ್ದರು. ಅಲ್ಲದೆ ಆ ಬಳಿಕ ಭದ್ರತಾ ಸಿಬ್ಬಂದಿಯನ್ನು ತಳ್ಳಿದ್ದರು. ಇದರಿಂದ ಕೋಪಗೊಂಡ ಅವರು ಮುಖದ ಮೇಲೆ ಹೊಡೆದಿದ್ದಾರೆ ಎನ್ನಲಾಗಿದೆ.
ಆದರೆ ಇನ್ನೊಂದು ಮೂಲಗಳ ಪ್ರಕಾರ ನಟಿ ಈ ಹಿಂದೆ ರೈತ ಸಂಘಟನೆಗಳು ಡೆಲ್ಲಿಯಲ್ಲಿ ಪ್ರತಿಭಟನೆ ನಡೆಸುವಾಗ ಅವರ ವಿರುದ್ಧ ಹೇಳಿಕೆ ನೀಡಿದ್ದರು. ಈ ಕೋಪ ಕುಟುಂಬಕ್ಕೆ ಸೇರಿದ್ದ ಭದ್ರತಾ ಸಿಬ್ಬಂದಿಗೆ ಇತ್ತು. ಏರ್ಪೋರ್ಟ್ನಲ್ಲಿ ಅವರು ಎದುರಾದಾಗ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಕಂಗನಾ ಅವರು ಗುರುವಾರ ಮಧ್ಯಾಹ್ನ 3.30ಕ್ಕೆ ಏರ್ಪೋರ್ಟ್ಗೆ ಬಂದಿದ್ದರು. ಕಂಗನಾ ರಣಾವತ್ ವಿಮಾನ ನಿಲ್ದಾಣದ ಭದ್ರತಾ ತಪಾಸಣೆಗಾಗಿ ಬರುತ್ತಿದ್ದಾಗ ಕುಲ್ವಿಂದರ್ ಕೌರ್ ಕೈ ಎತ್ತಿದರು. ಕಂಗನಾ ಕೂಡ ಈ ಬಗ್ಗೆ ದೂರು ದಾಖಲಿಸಿದ್ದಾರೆ.