ಕೊಪ್ಪಳ: ಬಿಜೆಪಿಯಲ್ಲಿ ಗಟ್ಟಿ ನಿರ್ಧಾರದ ನಾಯಕರು ಇಲ್ಲ. ಸ್ಥಳೀಯವಾಗಿ ಗ್ರೌಂಡ್ ರಿಪೋರ್ಟ್ ತಗೊಳ್ತಾಯಿಲ್ಲ. ಎಲ್ಲವನ್ನೂ ಹೈಕಮಾಂಡ್‌ಗೆ ಬಿಡ್ತಾಯಿದ್ದಾರೆ. ನನಗೆ ಟಿಕೆಟ್ ಬದಲಾವಣೆ ಮಾಡಿದವರಿಗೆ ಇದು ಅರ್ಥವಾಗಿದೆ ಎಂದು ಕೊಪ್ಪಳದಲ್ಲಿ ಮಾಜಿ ಸಂಸದ ಕರಡಿ ಸಂಗಣ್ಣ ಹೇಳಿದ್ದಾರೆ. ಕೊಪ್ಪಳದಲ್ಲಿ ಬಿಜೆಪಿ ಸೋಲಿನಿಂದ ಅವರಿಗೆ ಏನು ಅರ್ಥವಾಗಬೇಕು ಅದು ಅರ್ಥವಾಗಿದೆ.
ಮತದಾರರ ತೀರ್ಪಿಗೆ ತಲೆಬಾಗಲೇಬೇಕು. ಹೈಕಮಾಂಡ್ ನಾಯಕರ ತೀರ್ಮಾನ ಮತ್ತು ಟಿಕೆಟ್ ಬದಲಾವಣೆ ಬಗ್ಗೆ ವಿಶ್ಲೇಷಣೆಗೆ ಹೋಗಲ್ಲ. ಮೊದಲಿನಂತೆ ಮೋದಿ ಅವರು ಈ ಬಾರಿ ಅಧಿಕಾರ ನಡೆಸಲು ಆಗಲ್ಲ. ನಿತೀಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡುರನ್ನು ಕಟ್ಟಿಕೊಂಡೇ ಹೋಗಬೇಕು. ಸಾರ್ವಭೌಮತ್ವ ಅಧಿಕಾರ ನಡೆಸಲು ಆಗಲ್ಲ. ಏನು ಮಾಡಿದ್ರು ನಡೆಯುತ್ತೆ ಅನ್ನೋದು ಈ ಬಾರಿ ನಡೆಯಲ್ಲ. ರಾಜ್ಯದಲ್ಲಿ ಮತದಾರರ ತೀರ್ಪಿನ ಮೇಲೆ ಫಲಿತಾಂಶವಿದೆ. ನಾನು ಯಾವುದೇ ಸ್ಥಾನದ ಬೇಡಿಕೆ ಇಟ್ಟು ಕಾಂಗ್ರೆಸ್ ಸೇರಿಲ್ಲ. ಆದ್ರೆ ಸ್ಥಾನಮಾನ ನೀಡೋದು ಹೈಕಮಾಂಡ್ ನಾಯಕರಿಗೆ ಬಿಟ್ಟದ್ದು, ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬಿಟ್ಟು ಕಾಂಗ್ರೆಸ್‌ನನ್ನು ಕರಡಿ ಸಂಗಣ್ಣ ಸೇರಿದ್ದರು.























