ರಘಪತಿ ಭಟ್ ಇತ್ತೀಚಿಗೆ ನಡೆದ ವಿಧಾನಪರಿಷತ್ ಚುನಾವಣೆಯ ಪದವೀಧರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ ಈ ಚುನಾವಣೆಯಲ್ಲಿ ಸೋಲಾನುಭವಿಸಿದ ಭಟ್ ಅವರನ್ನು ಕಾಂಗ್ರೆಸ್ ಸೆಳೆಯುವ ಪ್ರಯತ್ನ ನಡೆಸಿದೆ. ರಾಜ್ಯದ ಉಪ ಮುಖ್ಯಮಂತ್ರಿ ಕೆ ಪಿ ಸಿ ಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ ಎಂದು ಬಲ್ಲ ಮೂಲಗಳ ಮಾಹಿತಿ ದೊರಕಿದೆ.
ಪದವೀಧರ ಕ್ಷೇತ್ರದಿಂದ ಪಕ್ಷೇತರ ಸ್ಪರ್ಧಿಸಿದ ಕಾರಣ ಬಿಜೆಪಿಯಿಂದ 6 ವರ್ಷಗಳ ಕಾಲ ಉಚ್ಚಾಟನೆಯಾಗಿದ್ದರು ಮೋದಿ ಅವರ ಮೇಲೆ ಅಪಾರ ಗೌರವ ಇಟ್ಟುಕೊಂಡವರಾಗಿದ್ದರು. ಇದೀಗ ಇವುಗಳ ಮಧ್ಯೆ ಕಾಂಗ್ರೆಸ್ ಗೆ ಸೇರ್ಪಡೆಯಾದರೆ ಉನ್ನತ ಸ್ಥಾನಮಾನ ನೀಡುವುದರ ಜೊತೆಗೆ ಲೋಕಸಭಾ ಚುನಾವಣೆಯಲ್ಲಿ ಗೆದ್ದು ತೆರವುಗೊಂಡ ಕೋಟ ಶ್ರೀನಿವಾಸ್ ಪೂಜಾರಿಯವರ ಸ್ಥಾನದ ವಿಧಾನಪರಿಷತ್ ಚುನಾವಣೆಗೆ ಕಾಂಗ್ರೆಸ್ ನಿಂದ ಅಭ್ಯರ್ಥಿಯಾಗುವಂತೆ ಡಿ ಕೆ ಶಿವಕುಮಾರ್ ಭರವಸೆ ನೀಡಿದ್ದರೆಂದು ತಿಳಿದು ಬಂದಿದೆ.
ಕಳೆದ ಬಾರಿ ಉಡುಪಿ ವಿಧಾನಸಭಾ ಚುನಾವಣೆಯಲ್ಲಿ ಟಿಕೇಟ್ ತಪ್ಪಿದಾಗ ಬಿಜೆಪಿಗಾಗಿ ದುಡಿದು ಉಡುಪಿಯಲ್ಲಿ ಬಿಜೆಪಿಯನ್ನು ಗೆಲ್ಲಿಸಿದ ಭಟ್ ನನ್ನ ಜೀವನದ ಕೊನೆಯ ಉಸಿರಿನ ತನಕ ನಾನು ಬಿಜೆಪಿ, ನನ್ನ ಹೆಣದ ಮೇಲೆ ಬಿಜೆಪಿಯ ಧ್ವಜವಿರಬೇಂಕೆಂದು ಹೇಳಿರುವ ಮೂಲಕ ಪಕ್ಷವನ್ನು ಎಷ್ಟು ಹಚ್ಚಿಕೊಂಡಿದ್ದಾರೆ ಎಂಬುದಾಗಿ ತಿಳಿಯಬಹುದಾಗಿದೆ.
ಪದವೀಧರ ಕ್ಷೇತ್ರದ ಚುನಾವಣೆ ಸೋತ ಬಳಿಕ ಮಾತಾನಾಡಿದ ರಘಪತಿ ಭಟ್ ನನಗಾಗಿ ನನ್ನ ಮೇಲಿನ ಪ್ರೀತಿಯಿಂದ ದುಡಿದ ಕಾರ್ಯಕರ್ತರಿಗೆ ಮತ್ತು ಮತದಾರರಿಗೆ ಅಭಿನಂದನೆ ಸಲ್ಲಿಸಿ ನಾನು ವಿಚಲಿತನಾಗುವುದಿಲ್ಲ, ನಾನು ಪಲಾಯನ ಮಾಡಲಾರೇ, ನನ್ನ ಸ್ಪರ್ಧೆಯಿಂದ ಸಿ ಟಿ ರವಿಯವರಿಗೆ ನ್ಯಾಯ ಸಿಕ್ಕಿದೆ ಪರಿಷತ್ ಗೆ ಆಯ್ಕೆಯಾಗಿದ್ದರೆ, ಇದು ಬದಲಾವಣೆಯ ಮೊದಲ ಹಂತ. ನಾನು ಸಕ್ರೀಯ ರಾಜಕಾರಣದಲ್ಲಿಯೇ ಇರುತ್ತೇನೆ ಇದರಲ್ಲಿ ಯಾರಿಗೂ ಸಂದೇಹ ಬೇಡ ಎಂದು ತಿಳಿಸಿದ್ದಾರೆ. ಆದರೆ ಈ ಮಾತಿಗೂ ಕಾಂಗ್ರೆಸ್ ನ ಆಹ್ವಾನಕ್ಕೂ ಸಂಬಂಧವಿದೆಯೇ ಎಂಬ ಪ್ರಶ್ನೆ ಎದುರಾಗುತ್ತದೆ. ಇವುಗಳ ಮಧ್ಯೆ ಕಾಂಗ್ರೆಸ್ ಆಹ್ವಾನವನ್ನು ನಿರಾಕರಿಸಿದ್ದಾರೆ ಎಂದು ಬಲ್ಲ ಮೂಲಗಳ ಮೂಲಕ ತಿಳಿದಿದ್ದು, ಆದರೆ ಮುಂದಿನ ರಾಜಕೀಯ ನಡೆ ಎನೂ ಎಂಬುದು ಯಕ್ಷ ಪ್ರಶ್ನೆ ಯಾಗಿದೆ…?