ಭಾರತದ ಇತಿಹಾಸದಲ್ಲಿ ಜವಾಹರಲಾಲ್ ನೆಹರು ಮೂರು ಬಾರಿ ಪ್ರಧಾನಿಯಾಗಿದ್ದರು ಇವರ ನಂತರ ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮೊದಲಿಗರು ಮೋದಿ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಪೂರ್ಣ ಸ್ಥಾನ ಬಾರದಿದ್ದರು ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್ , ಪವನ್ ಕಲ್ಯಾಣ್ ಪೂರ್ಣ ಬೆಂಬಲದೊಂದಿಗೆ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಭರ್ಜರಿಯಾಗಿ ನಡೆಯಿತು.
ಈ ಮೂಲಕ ಮೂರನೇ ಅವಧಿಗೆ ನರೇಂದ್ರ ಮೋದಿಯವರ ಹ್ಯಾಟ್ರಿಕ್ ಸರ್ಕಾರ ಅಧಿಕೃತವಾಗಿದೆ. ನರೇಂದ್ರ ಮೋದಿಯವರು ಈಶ್ವರನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಮಾಣವಚನ ಬೋಧಿಸಿದರು.
ನೂತನ ಸಚಿವ ಸಂಪುಟದಲ್ಲಿ 72 ಸಚಿವರು ಸ್ಥಾನ ಪಡೆದವರು :: ಶ್ರೀ ರಾಜಾನಾಥ್ ಸಿಂಗ್, ಶ್ರೀ ಅಮಿತ್ ಶಾ, ನಿತೀನ್ ಗಡ್ಕರಿ, ಜೆ ಪಿ ನಡ್ಡಾ, ಶಿವರಾಜ್ ಸಿಂಗ್ ಚೌಹಾನ್,ಶ್ರೀಮತಿ ನಿರ್ಮಲಾ ಸೀತಾರಾಮನ್, ಜೈ ಶಂಕರ್, ಶ್ರೀ ಮನೋಹರ ಲಾಲ್, ಎಚ್ ಡಿ ಕುಮಾರ ಸ್ವಾಮಿ, ಪಿಯೂಷ್ ಗೋಯಲ್ , ಶ್ರೀ ಧರ್ಮೇಂದ್ರ ಪ್ರಧಾನ್, ಜಿತಿನ್ ರಾಮ್ ಮಾಂಝಿ, ಲಲನ್ ಸಿಂಗ್, ಶ್ರೀ ಸರ್ಬಾನಂದ್ ಸೋನಾವಾಲ್, ಡಾ.ವೀರೇಂದ್ರ ಕುಮಾರ್, ರಾಮ್ ಮೋಹನ್ ನಾಯ್ಡು, ಪ್ರಹ್ಲಾದ್ ಜೋಶಿ, ಜುವೆಲ್ ಒರಾಮ್, ಶ್ರೀ ಗಿರಿರಾಜ್ ಸಿಂಗ್, ಅಶ್ವಿನಿ ವೈಷ್ಣವ್ ,ಜ್ಯೋತಿರಾಧಿತ್ಯ ಸಿಂಧಿಯಾ, ಭೂಪೇಂದ್ರ ಯಾದವ್ , ಗಜೇಂದ್ರ ಸಿಂಗ್ ಶೇಖಾವತ್, ಶ್ರೀಮತಿ ಅಣ್ಣಪೂರ್ಣ ದೇವಿ, ಕಿರಣ್ ರಿಜಿಜು, ಹರ್ದೀಪ್ ಪುರಿ,ಮನ್ಸೂಖ್ ಮಾಂಡವೀಯ, ಕಿಶನ್ ರೆಡ್ಡಿ, ಚಿರಾಗ್ ಪಾಸ್ವಾನ್, ಸಿ ಆರ್ ಪಾಟೀಲ್, ರಾವ್ ಇಂದರ್ ಸಿಂಗ್, ಡಾ.ಜಿತೇಂದ್ರ ಸಿಂಗ್, ಅರ್ಜುನ್ ರಾಮ್ ಮೇಘವಾಲ್, ಪ್ರತಾಪ್ ರಾವ್, ಜಯಂತ್ ಚೌದರಿ, ಜಿತಿನ್ ಪ್ರಸಾದ್, ಕ್ರಿಶನ್ ಪಾಲ್ ಗುರ್ಜರ್,ರಾಮ್ ದಾಸ್ ಅಠಾವಳೆ, ರಾಮ್ ನಾಥ್ ಠಾಕೂರ್, ನಿತ್ಯಾನಂದ್ ರಾಯ್, ಅನುಪ್ರಿಯಾ ಪಟೇಲ್, ವಿ ಸೋಮಣ್ಣ, ಡಾ.ಚಂದ್ರಶೇಖರ್ , ಎಸ್ ಪಿ ಸಿಂಗ್ ಬಘೇಲ್,ಕು.ಶೋಭ ಕರಂದ್ಲಾಜೆ, ಕೀರ್ತಿವರ್ದನ್ ಸಿಂಗ್,ಬಿ ಎಲ್ ವರ್ಮ,ಶಾಂತನೂರ್ ಠಾಕೂರ್, ಸುರೇಶ್ ಗೋಪಿ, ಡಾ.ಎಲ್ ಮುರುಗನ್, ಅಜಯ್ ತಮಟ, ಬಂಡಿ ಸಂಜಯ್ ಕುಮಾರ್,ಕಮಲೇಸ್ ಪಾಸ್ವಾನ್, ಭಗಿರಥ ಚೌದರಿ, ಸತೀಸ್ ಚಂದ್ರ ದುಬೇ, ಸಂಜಯ್ ಸೇಠ್,ರವನಿತ್ ಸಿಂಗ್, ದುರ್ಗದಾಸ್ ವಿ ಕೆ,ರಕ್ಷಾ ನಿಖಿಲ್ ಖಡ್ಸೆ,ಸುಕಾಂತ್ ಮಜುಂದಾರ್,ಸಾವಿತ್ರಿ ಠಾಕೂರ್,ತೋಕನ್ ಸಾಹು, ರಾಜ್ ಭೂಷಣ್ ಚೌಧರಿ,ಶ್ರೀನಿವಾಸ್ ವರ್ಮಾ,ಹರ್ಷ ಮಲ್ವೋತ್ರ,ಜಯಂತಿ ಬಾಯಿ, ಮುರಳಿಧರ್ ಮೋಹನ್,ಜಾರ್ಜ್ ಕುರಿಯನ್ ,ಪವಿತ್ರ ಮಾರ್ಗರೇಟ್
ನೂತನ ಮಂತ್ರಿ ಮಂಡಲದಲ್ಲಿ ಕರ್ನಾಟಕದಿಂದ 5 ಜನ ಸ್ಥಾನ ಪಡೆದುಕೊಂಡರು.
ಈ ಮೂಲಕ ಮೂರನೇ ಅವಧಿಗೆ ನರೇಂದ್ರ ಮೋದಿಯವರ ಹ್ಯಾಟ್ರಿಕ್ ಸರ್ಕಾರ ಅಧಿಕೃತವಾಗಿದೆ. ನರೇಂದ್ರ ಮೋದಿಯವರು ಈಶ್ವರನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಮಾಣವಚನ ಬೋಧಿಸಿದರು.
ನರೇಂದ್ರ ಮೋದಿ ಅವರು ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಭಾರತದ ಸಾವಿರಾರು ಗಣ್ಯರ ಜತೆಗೆ ನೆರೆ ರಾಷ್ಟ್ರಗಳ ನಾಯಕರು ಕೂಡ ಭಾಗವಹಿಸಿದ್ದರು. ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ, ಮಾಲ್ಡೀವ್ಸ್ ಅಧ್ಯಕ್ಷ ಮೊಹಮದ್ ಮುಯಿಝು, ಸೆಶೆಲ್ಸ್‌ನ ಉಪಾಧ್ಯಕ್ಷ ಅಹ್ಮದ್ ಅಫೀಫ್; ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ; ಮಾರಿಷಸ್‌ನ ಪ್ರಧಾನ ಮಂತ್ರಿ, ಪ್ರವಿಂದ್ ಕುಮಾರ್ ಜುಗ್ನೌತ್; ನೇಪಾಳದ ಪ್ರಧಾನಿ, ಪುಷ್ಪ ಕಮಲ್ ದಹಲ್ ‘ಪ್ರಚಂಡ’ ಮತ್ತು ಭೂತಾನ್ ಪ್ರಧಾನಿ, ತ್ಶೆರಿಂಗ್ ಟೊಬ್ಗೇ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮಾಜಿ ಸಿ ಎಂ ಯಡಿಯೂರಪ್ಪ, ದಕ್ಷಿಣ ಕನ್ನಡ ಜಿಲ್ಲಾ ನೂತನ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಕೋಟಾ ಶ್ರೀನಿವಾಸ್ ಪೂಜಾರಿ, ಅಣ್ಣಾಮಲೈ ಕಾಂಗ್ರೇಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ರಾಮನಾಥ್ ಕೋವಿಂದ್ ಇವರುಗಳಲ್ಲದೇ ಪೇಜಾವರ ಶ್ರೀಗಳು, ಅದಾನಿ ಗ್ರೂಪ್ ಚೇರ್ಮನ್ ಗೌತಮ್ ಅದಾನಿ, ಬಾಲಿವುಡ್ ನಟರಾದ ಶಾರುಖ್ ಖಾನ್, ಅಕ್ಷಯ್ ಕುಮಾರ್, 12th ಫೇಲ್ ಸಿನಿಮಾ ಖ್ಯಾತಿ ವಿಕ್ರಾಂತ್ ಮಾಸ್ಸೆ, ಸೂಪರ್ ಸ್ಟಾರ್ ರಜನಿಕಾಂತ್ ಸೇರಿ ಹಲವು ಗಣ್ಯರು ರಾಷ್ಟ್ರಪತಿ ಭವನದಲ್ಲಿ ಉಪಸ್ಥಿತರಿದ್ದರು.
ರಾಜ್ಯದ ನಾನಾ ಭಾಗಗಳಲ್ಲಿ ಮೋದಿ ಅಭಿಮಾನಿಗಳು ಬೈಕ್ ರ್ಯಾಲಿ, ಮಾನವ ಸರಪಳಿ, ಮೆರವಣಿಗೆ ನಡೆಸಿ ಮೋದಿ ಪರ ಜೈಕಾರ ಕೂಗಿ ಇನ್ನೂ ಕೆಲವು ಕಡೆ ಮೋದಿಯ ಅಪ್ಪಟ ಅಭಿಮಾನಿಗಳು ಬಿರಿಯಾನಿ, ಹೋಳಿಗೆ ಊಟವನ್ನು ಸಾರ್ವಜನಿಕರಿಗೆ ಹಂಚಿ ಖುಷಿ ಪಟ್ಟಿದ್ದಾರೆ ಇದಲ್ಲದೇ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಚೇರಿಯಲ್ಲೂ ಸಂಭ್ರಮಾಚರಣೆ ನಡಸಲಾಗಿದೆ.